SUDDILIVE || SHIVAMOGGA
ಇನ್ನೆರಡು ತಿಂಗಳಲ್ಲಿ ಊರಗಡೂರು ನಿವೇಶನ ಹಂಚಿಕೆ-ಹೆಚ್ ಎಸ್ ಸುಂದರೇಶ್- Uragadur site allocation in next two months-HS Sundaresh
ಇನ್ನೆರಡು ತಿಂಗಳಲ್ಲಿ ಊರಗಡೂರು ನಿವೇಶನವನ್ನ ಹಂಚಲಾಗುವುದು ಕಾಮಗಾರಿ ಕೊನೆಯ ಹಂತಕ್ಕೆ ಬಂದಿದೆ ಎಂದು ಸೂಡ ಅಧ್ಯಕ್ಷ ಹೆಚ್ ಎಸ್ ಸುಂದರೇಶ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಂಚಿಕೆಯಲ್ಲೂ 50% ರಿಸರ್ವೇಷನ್ ಇದೆ. 437 ಸೈಟ್ ನಲ್ಲಿ ಹಂಚಲಾಗುವುದು. ಮೀಸಲಾತಿಗಳು ಹೋಗಿ 150 ಸೈಟಿಗಳು ಉಳಿಯಬಹುದು. ಅವುಗಳನ್ನ ಸಾಮಾನ್ಯರಿಗೆ ಹಂಚಲಾಗುವುದು. ಕೋರ್ಟಿಗೆ ಹೋಗುವ ಸಾಧ್ಯತೆಗಳಿವೆ. ಏನೇ ಆಗಲಿ ಎರಡು ತಿಂಗಳಲ್ಲಿ ಫೈನಲ್ ಮಾಡಲಾಗುವುದು ಎಂದರು.
ಊರಗಡೂರು ನಿವೇಶನಕ್ಕಾಗಿ 12 ಸಾವಿರಕ್ಕೂ ಹೆಚ್ಚು ಅರ್ಜಿ ಬಂದಿದೆ.ಇದರಲ್ಲಿ 4 ಸಾವಿರ ಅರ್ಜಿಯನ್ನ ಸ್ಕ್ರೂಟನೈಜ್ ಮಾಡಲಾಗಿದೆ. ಊರಗಡೂರಿನಲ್ಲಿ ರೈತರಿಗೆ ಒಂದಿಷ್ಟು ಸೈಟ್ ಕೊಡಬೇಕಿದೆ. ಊರುಗಡೂರಿನಲ್ಲಿ 2021 ರಲ್ಲಿ ಅಪ್ರೂವಲ್ ಆಗಿತ್ತು. ಈಗ ಫೈನಲ್ ಹಂತಕ್ಕೆ ಬರುತ್ತಿದೆ ಎಂದರು.
ಕೆಬಿಪಿ ಹೇಳಿದ್ದು ಸರಿಯಿದೆ. ಲೋಕಾಯುಕ್ತದಲ್ಲಿ ಪ್ರಕರಣವಿದೆ
ಊರಗಡೂರಿನಲ್ಲಿ ನಡೆದಿರುವ ಕಾಮಗಾರಿಗಳ ಭ್ರಷ್ಠಾಚಾರದ ಬಗ್ಗೆ ಗುತ್ತಿಗೆದಾರರು ಲೋಕಾಯುಕ್ತರು ದೂರು ನೀಡಿದ್ದಾರೆ. ಅವರಿಗೆ ಇಂಜಿನಿಯರ್ ಜೊತೆ ಅವರ ವ್ಯವಹಾರ ನೀಡಿದ್ದಾರೆ. ನನಗೆ ಒಬ್ವರಿಗೆ 10 ಲಕ್ಷ ಟೆಂಡರ್ ಕೊಡಿಸಲು ಸಾಧ್ಯವಾಗಲಿಲ್ಲ. ಪತ್ರ ಕೊಟ್ಟಿದ್ದಾರೆ. ಅದನ್ನ ಪರಿಗಣಿಸಲಾಗುವುದು. ಲೋಕಾಯುಕ್ತರಿಗೆ ಹೋಗಿದ್ದಾರೆ. ಲೋಕಾಯುಕ್ತದಲ್ಲಿ ಏನಾಗಲಿದೆ ನೋಡೋಣ ಎಂದರು. ಆಕ್ಷನ್ ಪ್ಲಾನ್ ಮೇಲೆ ಕಾಮಗಾರಿ ಹಂಚಲಾಗುವುದು. ಕಾಮಗಾರಿ ಹಂಚಲು ಸಂಬಂಧ ಪಟ್ಟವರ ಇಲಾಖೆ ಅಧಿಕಾರಿಗಳು ನೋಡಿಕೊಳ್ಳುವುದಾಗಿ ತಿಳಿಸಿದರು.
ಜೆಡಿಎಸ್ ಮಿತ್ರ ಕೆಬಿ ಪ್ರಸನ್ನ ಕುಮಾರ್ ಅವರ ಆರೋಪ ಸರಿಯಾಗಿದೆ ಲೋಕಾಯುಕ್ತರು ಈಗಾಗಲೇ ನೀಟಿಸ್ ನೀಡಿದ್ದಾರೆ ಸಮಗ್ರವಾಗಿ ಉತ್ತರ ನೀಡಲಾಗುವುದು ಎಂದರು.
ನಮ್ಮ ಅವಧಿಗೆ ಕೌಂಟ್ ಡೌನ್ ಆರಂಭವಾಗಿದೆ
ನಮ್ಮ ಅವಧಿ ಮುಕ್ತಾಯವಾಗಲು ಕೌಂಟ್ ಡೌನ್ ಆರಂಭವಾಗಿದೆ. ಈ ತಿಂಗಳ 28 ನೇ ತಾರೀಖಿನಂದು ಮುಗಿಯಲಿದೆ. ಒಂದು ವೇಳೆ ಮುಂದುವರೆಸಿದರೂ ಸರ್ಕಾರ ನನ್ನ ಸ್ಥಾನ ಮಾತ್ರ ಮುಂದುವರೆಸಲ್ಲ. ರಾಜ್ಯದ ಎಲ್ಲಾ ನಗರಾಭಿವೃದ್ಧಿ ಪ್ರಾಧಿಕಾರದ ಸ್ಥಾನ ಮುಂದುವರೆಸಲಿದ್ದಾರೆ ಎಂದರು.
ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್
ನಗರಾಭಿವೃದ್ಧಿ ಪ್ರಾಧಿಕಾರದಿಂದ ವಿಶೇಷ ಯೋಜನೆಯಲ್ಲಿ 2041 ರ ವರೆಗೆ ಮಾಸ್ಟರ್ ಪ್ಲಾನ್ ಅಮೃತ ಯೋಜನೆಯಿಂದ ರಚನೆಯಾಗಿದೆ ಸವಲತ್ತುಗಳನ್ನಆಸ್ಪತ್ರೆ, ಶಿಕ್ಷಣ, ಟ್ರಕ್ ಟರ್ಮಿನಲ್, ಅಂಗನವಾಡಿ, ರಸ್ತೆಗಳನ್ನ ನಿರ್ಮಿಸಲು ಮಾಸ್ಟರ್ ಪ್ಲಾನ್ ಆಗಿದೆ. ಸಾದ್ಯದಲ್ಲಿಯೇ ಎಲ್ಲವನ್ನು ಲೇಔಟ್ ಮತ್ತು ಅಪಾರ್ಟ್ ಮೆಂಟ್ ಮಾಡಿ ಹಂಚಲಾಗುವುದು ಎಂದು ಸೂಡಾ ಅಧ್ಯಕ್ಷ ಹೆಚ್ ಎಸ್ ಸುಂದರೇಶ್ ತಿಳಿಸಿದರು.
200 ಅಡಿ ರಸ್ತೆ ಯಥಾವತ್ತಾಗಿ ಮುಂದುವರೆಸಲಾಗಿದೆ. ಕೆಲವಡೆ ಹೈವೆ ಬಂದಿರುವುದರಿಂದ ಯಥಾವತ್ತಾಗಿ ಮುಂದುವರೆದಿದೆ 10-12 ದಿನಗಳಲ್ಲಿ ಜೆಡಾನ್ ಗೆ ಆಕ್ಷೇಪಣೆ ಕರೆಯಲಾಗಿದೆ. ಗೋಪಿಶೆಟ್ಟಿ ಕೊಪ್ಪದಲ್ಲಿ 104 ಎಕರೆಯಲ್ಲಿ ಫೋರ್ ಒನ್ ಆಧಾರದ ಮೇರೆಗೆ 31 ಎಕರೆಯಬ್ನ ರೈತರು ನೀಡುತ್ತಿದ್ದಾರೆ.
ಭದ್ರಾವತಿಯಲ್ಲಿ 34 ಎಕರೆಯಲ್ಲಿ ಫೋರ್ ಒನ್ ಮಾಡಿ ಸಿಕ್ಸ್ ಒನ್ ಮಾಡಲಾಗಿದೆ. ಲೇಔಟ್ ಮಾಡಲಾಗುತ್ತಿದೆ. ನ್ಯಾಯಾಲಯ ಎಲ್ಲ ಪ್ರಕರಣವನ್ನ ವಜಾಮಾಡಿ 6 ಎಕರೆಗೆ ಸ್ಟೇ ನೀಡಿದೆ. ನಿಧಿಗೆಯಲ್ಲೂ ಲೇಔಟ್ ಗೆ ಅಪ್ರೂವಲ್ ಹೋಗಿದೆ ಅಲ್ಲೂ ಲೇಔಟ್ ಮಾಡಲಾಗುತ್ತಿದೆ. ಸೋಮಿನಕೊಪ್ಪದಲ್ಲಿ ಒಂದು ಎಕರೆ 20 ಗುಂಟೆಯಲ್ಲಿ ಅಪಾರ್ಟ್ ಮೆಂಟ್ ಮಾಡಲಾಗುವುದು. ಬಜೆಟ್ ನಲ್ಲಿ ಅಪ್ರೂವಲ್ ಕೊಡಲಾಗುವುದು ಎಂದರು.
Uragadur site allocation in next two months-HS Sundaresh

