ಪತಿ ಮತ್ತು ಮಕ್ಕಳನ್ನೇ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳಿಸಲು ಯತ್ನಿಸಿದ ಪತ್ನಿ- Wife tried to convert husband and children to Christianity

 SUDDILIVE || SHIVAMOGGA

ಪತಿ ಮತ್ತು ಮಕ್ಕಳನ್ನೇ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳಿಸಲು ಯತ್ನಿಸಿದ ಪತ್ನಿ- Wife tried to convert husband and children to Christianity   

Wife, convert


ಕರ್ನಾಟಕ ಮತಾಂತರ ಕಾಯ್ದೆ ಅಡಿಯಲ್ಲಿ ಪತ್ನಿಯೇ ಪತಿ ಮತ್ತು ಇಬ್ವರು ಹೆಣ್ಣು ಮಕ್ಕಳನ್ನ ಮತಾಂತರಗೊಳಿಸಲು ಯತ್ನಿಸಿರುವ ಘಟನೆ ಈಗ ಭದ್ರಾವತಿಯ ಪೇಪರ್ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಳಲಾಗಿದ್ದು, ಈ ಕುರಿತು ಸಂತ್ರಸ್ತ ಪತಿ ವಿನಯ್ ಬಿ ಸುದ್ದಿಗೋಷ್ಠಿ ನಡೆಸಿದ್ದಾರೆ. 

2011 ರಲ್ಲಿ ಮದುವೆ ಹಾಸನ ಜಿಲ್ಲೆಯ ಪ್ರಿಯತಾ ಆರ್ ರನ್ನ ಹಿಂದೂ ಲಿಂಗಾಯತ ಕುಂಬಾರ ಪದ್ದತಿಯಂತೆ ಮದುವೆಯಾಗಿದ್ದರು. 2015 ರಲ್ಲಿ ನಗರದ ಖಾಸಗಿ ಶಾಲೆಯಲ್ಲಿ ಕೆಲಸಕ್ಕೆಂದು ಹೋದ ಪತ್ನಿ ಪ್ರಿಯತಾ ಆರ್ ಗೆ ಮರಿಯಾ ಯೊಂದಿಗೆ ಸ್ನೇಹ ಬೆರತು ಕ್ರಿಶ್ಚಿಯನ್ ಆಗಿ ಮತಾಂತರಗೊಂಡಿದ್ದರು. ಮಗಳಿಗೆ ಹಿಂದೂ ಆಚರಣೆ ನಡೆಸದಂತೆ ಬೋಧಿಸುತ್ತಿದ್ದ ಪತ್ನಿ ಹಿಂದೂ ಧಾರ್ಮಿಕ ಹಬ್ಬಗಳ ಬಗ್ಗೆ ಅಸಡ್ಡೆ ತೋರುತ್ತಿದ್ದರಿಂದ. ಜಗಳ ಉಂಟಾಯಿತು ಎಂದು ಪತಿ ವಿನಯ್ ಬಿ ಆರೋಪಿಸಿದರು.


 

2018 ರಲ್ಲಿ ಮನೆಯಲ್ಲಿದ್ದ ಭಗವದ್ಗೀತೆಯ ಜಾಗದಲ್ಲಿ  ಬೈಬಲ್ ಇಟ್ಟ ಪತ್ನಿಗೆ ಕೌನ್ಸಿಲಿಂಗ್ ಸಹ ಮಾಡಿದ್ದರು. ಆದರೂ ಸಹ ಪ್ರಯೋಜನವಾಗದೆ 2019 ರಲ್ಲಿ ಪತಿ ಮತ್ತು ಮಕ್ಕಳನ್ನ ಬಿಟ್ಟುಹೋಗಿದ್ದಾರೆ. ನಂತರ ಒಂದು ತಿಂಗಳು ಬಿಟ್ಟು ಪತಿ ಮತ್ತು ಮಕ್ಕಳು ಬೇಕೆಂದು 2020 ರಲ್ಲಿ ಪತ್ನಿ ವಾಪಾಸಾಗಿ ಮತ್ತೆ ಕ್ರಿಶ್ಚಿಯನ್ ಧರ್ಮದ ಬಗ್ಗೆ ಒಲವು ತೋರಲು ಆರಂಭಿಸಿದ್ದರು.  ಇಲ್ಲಿನಿಂದ ಅವರ ವರ್ತನೆಗಳೆ ಬೇರೆರೀತಿಯಾಗಿದ್ದವು ಎಂದು ಪತಿ ವಿವರಿಸಿದ್ದಾರೆ. 

2024 ರಲ್ಲಿ ಪ್ರಿಯತಳು ಕ್ರಿಶ್ಚನ್ ಧರ್ಮದ ವಿಧಿ ವಿಧಾನಗಳನ್ನು ಹೆಚ್ಚಾಗಿ ಅನುಸರಿಸುತ್ತಿದ್ದು ಜೀಸಸ್ ಕಾಲ್ಸ್ ಪ್ರೇಯಿಂಗ್ ಫಾರ್ ದಿ ವರ್ಲ್ಡ್ ವೆಬ್ಸೈಟ್ ಫಾಲೋ ಮಾಡಿ ಪ್ರತಿದಿನ ಬೆಳಿಗ್ಗೆ ಸಂಜೆ ಪ್ರಾರ್ಥನೆ ಮಾಡುತ್ತಿದ್ದರು ಆಕ್ಷೇಪಣೆ ಮಾಡಿದಾಗೆಲ್ಲ ಎಲ್ಲಾ ದೇವರು ಒಂದೇ ನೀವ್ಯಾಕೆ ತಪ್ಪು ತಿಳಿದುಕೊಳ್ಳುತ್ತೀರಾ ಅಂತ ಹೇಳುತ್ತಿದ್ದರು ಮೇಲಿನ ವೆಬ್ಸೈಟ್ಗಳಿಗೆ ಹಣ ನೀಡುವಂತೆ ನನಗೆ ಬಲವಂತಿಸುತ್ತಿದ್ದರು ಪ್ರಿಯತ ಪ್ರತಿ ತಿಂಗಳು ಈ ವೆಬ್ ಸೈಟಿಗೆ 400 ಪಾವತಿ ಮಾಡುತ್ತಿದ್ದಳು ದಿನದಿಂದ ದಿನಕ್ಕೆ ಕ್ರಿಶ್ಚನ್ ಧರ್ಮ ಆಚರಣೆ ಮಾಡುವುದು ಹೆಚ್ಚಾಗ ತೊಡಗಿತು ಕೊನೆಗೆ ನನಗೂ ಮತ್ತು ನನ್ನ ಮಕ್ಕಳಿಗೂ ಕ್ರಿಶ್ಚನ್ ಧರ್ಮಕ್ಕೆ ಮತಾಂತರಗೊಳ್ಳಿ ಅಂತ ಪೀಡಿಸಲು ಪ್ರಾರಂಭಿಸಿದರು ಎಂದು ವಿನಯ್ ಆರೋಪಿಸಿದ್ದಾರೆ.

2025 ಜುಲೈ 11 ನೇ ತಾರೀಕು ನಂದು ಪ್ರಿಯ ನಮ್ಮನ್ನೆಲ್ಲಾ ಬಿಟ್ಟು ಮತ್ತೆ ತವರಿಗೆ ಹೋಗಿದ್ದಾಳೆ. ಈ ನಡುವೆ ಪ್ರಿಯತ ಗಳಿಗೆ ಅವರ ಸ್ನೇಹಿತೆ ಸಹನಾ ಅವರು ಮಾತನಾಡಿ ಹೊಂದಾಣಿಕೆಯಿಂದ ಜೀವನ ನಡೆಸಲು ತಿಳಿಸಿದಾಗ ನಾನು ಹಳೆ ವಿನಯನನ್ನು ಒಪ್ಪಿಕೊಳ್ಳುವುದಿಲ್ಲ ಕ್ರೈಸ್ತನ ಮಗನಾಗಿ ಬಂದರೆ ವಿನಯವನ್ನು ಒಪ್ಪಿಕೊಳ್ಳುವುದಾಗಿ ಹೇಳಿದ್ದಾಳೆ ಎಂದು ವಿನಯ್ ಆರೋಪಿಸಿದ್ದಾರೆ ನನಗೂ ಬಲವಂತದಿಂದ ಪರಿವರ್ತಿಸಲು ನನ್ನ ಪತ್ನಿಯಿಂದಲೇ ದೊಡ್ಡ ಜಾಲವನ್ನು ಪ್ರಯತ್ನಿಸುತ್ತಿದೆ ಎಂದು ವಿನಯ್ ಆರೋಪಿಸಿದ್ದಾರೆ.

Wife tried to convert husband and children to Christianity

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close