ರಾಹುಲ್ ಗಾಂಧಿ ಬಗ್ಗೆ ಅವಹೇಳನ: ಶಾಸಕ ಆರಗ ಜ್ಞಾನೇಂದ್ನ ಆಪ್ತ ಸಹಾಯಕನ ನ್ಯಾಯಾಂಗ ಬಂಧನಕ್ಕೆ-MLA Araga Jnanenda's close aide sent to judicial custody for insulting Rahul Gandhi

SUDDILIVE || HOSANAGARA

ರಾಹುಲ್ ಗಾಂಧಿ ಬಗ್ಗೆ ಅವಹೇಳನ: ಶಾಸಕ ಆರಗ ಜ್ಞಾನೇಂದ್ನ ಆಪ್ತ ಸಹಾಯಕನ ನ್ಯಾಯಾಂಗ ಬಂಧನಕ್ಕೆ-MLA Araga Jnanenda's close aide sent to judicial custody for insulting Rahul Gandhi

Araga, Jnanendra


ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಹಂಚಿಕೊಂಡ ಆರೋಪದಡಿ, ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಅವರ ಹೊಸನಗರ ಭಾಗದ ಆಪ್ತ ಸಹಾಯಕನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಇಲ್ಲಿನ ಜೆ.ಎಂ.ಎಫ್.ಸಿ (JMFC) ನ್ಯಾಯಾಲಯ ಆದೇಶ ಹೊರಡಿಸಿದೆ.

​ಮಳಲಿ ಗ್ರಾಮದ ನಿವಾಸಿ, ಶಾಸಕರ ಆಪ್ತ ಸಹಾಯಕ ರಾಜೇಶ್ ಹಿರಿಮನೆ ಬಂಧಿತ ಆರೋಪಿಯಾಗಿದ್ದಾರೆ.

​ಘಟನೆಯ ವಿವರ:

ಆರೋಪಿ ರಾಜೇಶ್ ಹಿರಿಮನೆ, ರಾಹುಲ್ ಗಾಂಧಿಯವರ ಮುಖದ ಅರ್ಧ ಭಾಗ ಹಾಗೂ ಪಾಕಿಸ್ತಾನ ಸೇನೆಯ ಸಮವಸ್ತ್ರ ಧರಿಸಿದ ಅಧಿಕಾರಿ 'ಅಸಿಮ್' (ASIM) ಎಂಬುವರ ಫೋಟೋವನ್ನು ಎಡಿಟ್ ಮಾಡಿ ಸೇರಿಸಿದ್ದರು. ಈ ಚಿತ್ರಕ್ಕೆ "ONE AGENDA" ಎಂಬ ಟ್ಯಾಗ್ ಲೈನ್ ನೀಡಿ, ಫೇಸ್‌ಬುಕ್‌ನಲ್ಲಿ ಹರಿಬಿಡಲಾಗಿತ್ತು.

​ಈ ಕೃತ್ಯದ ಕುರಿತಂತೆ ದಿನಾಂಕ 20/05/2025 ರಂದು ನಗರ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್ (BNS) ಕಾಯ್ದೆಯ ಸೆಕ್ಷನ್ 353(2) ರ ಅಡಿಯಲ್ಲಿ ಪೊಲೀಸರು ಸ್ವಯಂ ಪ್ರೇರಿತ (Suo Moto) ದೂರು ದಾಖಲಿಸಿಕೊಂಡಿದ್ದರು.

​ನ್ಯಾಯಾಂಗ ಬಂಧನ:

ಪ್ರಕರಣದ ವಿಚಾರಣೆ ನಡೆಸಿದ ಹೊಸನಗರ ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶರು, ಆರೋಪಿ ರಾಜೇಶ್ ಹಿರಿಮನೆ ಅವರನ್ನು ದಿನಾಂಕ 24/02/2026 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿ ಆದೇಶ ನೀಡಿದ್ದಾರೆ.

MLA Araga Gyanenda's close aide sent to judicial custody for insulting Rahul Gandhi

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close