SUDDILIVE || SHIVAMOGGA
ಶಿವಮೊಗ್ಗದ ಪಿಐಗಳ ವರ್ಗಾವಣೆ- PIs transferred in Shivamogga
ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ ನಡೆಸಿ ಸರ್ಕಾರ ಆದೇಶಿಸಿದೆ. ಡಿವೈಎಸ್ಪಿ ಹಾಗು ಪೊಲೀಸ್ ಠಾಣೆ ಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ
ರಾಜ್ಯದಲ್ಲಿ 23 ಡಿವೈಎಸ್ಪಿಗಳಲ್ಲಿ ಶಿವಮೊಗ್ಗದ ಸಿಸಿಪಿಎಸ್ ಯ ಡಿವೈಎಸ್ಪಿ ಕೃಷ್ಣಮೂರ್ತಿ ಕೆ ಅವರು ದಾವಣಗೆರೆ ಪೂರ್ವ ವಲಯದ ಐಜಿಪಿ ಕಚೇರಿಗೆ ವರ್ಗವಾಗಿದ್ದಾರೆ. 129 ಪೊಲೀಸ್ ಇನ್ ಸ್ಪೆಕ್ಟರ್ ಗಳಲ್ಲಿ ಪ್ರಮುಖ ಠಾಣೆಗಳ ಪಿಐಗಳ ವರ್ಗಾವಣೆಯಾಗಿದೆ. ದೊಡ್ಡಪೇಟೆಯ ಪಿಐ ಜಯನಗರ ಪಿಐಗಳು ಎರಡು ಠಾಣೆಗಳಲ್ಲಿ ವರ್ಗಾವಣೆಯಾಗಿದೆ.
ಈ ಹಿಂದೆ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪಿಐಆಗಿದ್ದ ಸತ್ಯನಾರಾಯಣ ಅವರನ್ನು ಶಿವಮೊಗ್ಗದ ಪೊಲೀಸ್ ಠಾಣೆಯಲ್ಲಿ ವರ್ಗಾವಣೆಗೊಳಿಸಲಾಗಿದೆ ಸತ್ ನಾರಾಯಣ ಅವರು ಗ್ರಾಮಾಂತರ ಪೊಲೀಸ್ ಠಾಣೆಯಿಂದ ಲೋಕಾಯುಕ್ತ ಪೊಲೀಸ್ ಗೆ ವರ್ಗವಾಗಿದ್ದರು. ಈಗ ದೊಡ್ಡಪೇಟೆ ಪೊಲೀಸ್ ಠಾಣೆಗೆ ಪಿ ಐ ಆಗಿ ವರ್ಗವಾಗಿದ್ದಾರೆ.
ಪಿಎಸ್ಐಯಿಂದ ಪಿ ಐ ಗೆ ಮುಂಬಡ್ತಿ ಪಡೆದು ಲೋಕಾಯುಕ್ತ ಪೊಲೀಸ್ ಇಗೆ ನಿರೀಕ್ಷಣೆಯಲ್ಲಿದ್ದ ಸುರೇಶ್ ಅವರನ್ನು ಮಹಿಳ ಪೊಲೀಸ್ ಠಾಣೆಗೆ ವರ್ಗವಾಗಿದ್ದಾರೆ. ಮಹಿಳಾ ಠಾಣೆಯಲ್ಲಿ ಪಿಐ ಯಾಗಿದ್ದ ಭರತ್ ಕುಮಾರ್ ಅವರನ್ನು ನಾಗರಿಕ ಜಾರಿ ಹಕ್ಕು ನಿರ್ದೇಶನಾಲಯ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ
ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪಿ ಐ ಆಗಿದ್ದ ರವಿ ಸಂಗಣ್ಣ ಪಾಟೀಲ್ ಅವರನ್ನು ಜಯನಗರ ಪಿಐ ಆಗಿ ಜಯನಗರ ಪಿಎ ಆಗಿದ್ದ ಸಿದ್ದನಗೌಡ ಅವರನ್ನು ಲೋಕಾಯುಕ್ತ ಗೆ ವರ್ಗ ಮಾಡಿ ಪೋಲಿಸ್ ಇಲಾಖೆಯ ಮಹಾನಿರ್ದೇಶಕರು ಹಾಗೂ ಆರಕ್ಷಕ ಮಹಾನ್ ನಿರೀಕ್ಷಕರು ಆದ ಸೌವೆಂದು ಮುಖರ್ಜಿ ಆದೇಶಿಸಿದ್ದಾರೆ.
PIs transferred in Shivamogga
