SUDDILIVE || SHIVAMOGGA
ಹೂವಿನ ಗಿಡ ಕಡಿಯ ಬೇಡ ಎಂದ ಮಹಿಳೆಯನ್ನ ಮಚ್ಚಿನಿಂದ ಹಲ್ಲೆ ನಡೆಸಿದವನಿಗೆ ಶಿಕ್ಷೆ-Man sentenced for attacking woman with machete after she refused to cut down flower plant
ಭದ್ರಾವತಿ ತಾಲೂಕಿನ ಗಡುಮಘಟ್ಟದಲ್ಲಿ ಹೂವಿನ ಗಿಡ ಕಡಿಯ ಬೇಡಿ ಎಂದ ವೃದ್ಧೆಯ ಮೇಲೆ ಹಲ್ಲೆ ನಡೆಸಿದ ಘಟನೆಗೆ ಸಭಂಧಿಸಿದಂತೆ ಎರಡು ವರ್ಷ ಕಾರಾಗೃಹ ವಾಸ 10 ಸಾವಿರ ರೂ. ದಂಡ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.
ಗುಡುಮಘಟ್ಟೆ ಗ್ರಾಮದ ನಿವಾಸಿ ಸುನಿಲ್ ಕುಮಾರ್ ಎಂಬುವರ ಮನೆಯ ಮುಂಭಾಗದಲ್ಲಿನ ಖಾಲಿ ಸೈಟಿನಲ್ಲಿ ಹೂವಿನ ಗಿಡ ಹಾಕಿದ್ದು, ಅದರ ಪಕ್ಕದಲ್ಲಿ ರಮೇಶ್ ಪೂಜಾರ್ ರವರ ವಾಸದ ಮನೆ ಇದ್ದು ಅವರ ಗೋಡೆಗೆ ತಾಗಿಕೊಂಡು ಗಿಡ ಗಂಟೆ ಬೆಳೆದಿತ್ತು.
ದಿನಾಂಕ: 28-09-2021 ರಂದು ಬೆಳಗ್ಗೆ ಹೂವಿನ ಗಿಡಗಳನ್ನು ಕಡಿಯುತ್ತಿದ್ದಾಗ ಸುನೀಲ್ ಅವರ ತಾಯಿ ಶಾರದಮ್ಮ ಇವರು ಗಿಡವನ್ನು ಕಡಿಯಬೇಡಿ ಅಂತಾ ಹೇಳಲು ಹೋದಾಗ ಏಕಾಏಕಿ ರಮೇಶನು ಶಾರದಮ್ಮನವರ ಜೊತೆ ಜಗಳಕ್ಕೆ ಬಂದು, ಕೈಯಲ್ಲಿದ್ದ ಮಚ್ಚಿನಿಂದ ಶಾರದಮ್ಮ ರವರ ಬಲಗಾಲಿನ ಪಾದಕ್ಕೆ ಹೊಡೆದು, ದೊಣ್ಣೆಯಿಂದ ತಲೆಗೆ ಹೊಡೆದು ರಕ್ತಗಾಯಪಡಿಸಿದನು.
ಸುನೀಲ್ ಎಂಬುವರಿಗೂ ಸಹ ಅದೇ ದೊಣ್ಣೆಯಿಂದ ಹೊಡೆದು ರಕ್ತಗಾಯಪಡಿಸಿದ್ದು, ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲವೆಂದು ಜೀವ ಬೆದರಿಕೆ ಹಾಕಿರುತ್ತಾನೆ. ಎಂದು ನೀಡಿದ ದೂರಿನ ಮೇರೆಗೆ ಹೊಳೆಹೊನ್ನೂರು ಪೊಲೀಸ್ ಠಾಣೆ ಗುನ್ನೆ ನಂ 271/2021 ಕಲಂ:504, 324, 506, 354 ರೀತ್ಯಾ ಪ್ರಕರಣ ದಾಖಲಾಗಿರುತ್ತದೆ.
ಪ್ರಕರಣದ ಆಗಿನ ತನಿಖಾಧಿಕಾರಿಗಳಾದ ಹೊಳೆಹೊನ್ನೂರು ಪೊಲೀಸ್ ಠಾಣೆಯ ಎಎಸ್ಐ ಕೃಷ್ಣ ನಾಯ್ಕ್ ಪ್ರಕರಣದ ತನಿಖೆ ಪೂರೈಸಿ, ಘನ ನ್ಯಾಯಾಲಯಕ್ಕೆ ಆರೋಪಿತರ ವಿರುದ್ಧ ದೋಷಾರೋಪಣ ಪತ್ರವನ್ನು ಸಲ್ಲಿಸಿರುತ್ತಾರೆ.
ಘನ ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ ತಿಪ್ಪೇಶ್ ರಾವ್ ಅಪರ ಸರ್ಕಾರಿ ಅಭಿಯೋಜಕರವರು ವಾದ ಮಂಡಿಸಿದ್ದರು. 1 ನೇ ಎ.ಸಿ.ಜೆ ಮತ್ತು ಜೆಎಂಎಫ್ ಸಿ ನ್ಯಾಯಾಲಯ ಭದ್ರಾವತಿಯಲ್ಲಿ ಪ್ರಕರಣದ ವಿಚಾರಣೆ ನಡೆಸಿದ್ದು, ಆರೋಪಿತನ ವಿರುದ್ಧ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ಮಾನ್ಯ ನ್ಯಾಯಾಧೀಶರಾದ ರವಿ ಕುಮಾರ್ ವಿ. ರವರು ದಿನಾಂಕ: 12-02-2026 ರಂದು ರಮೇಶ್ ಪಿ.ಎಂ @ರಮೇಶ್ ಪೂಜಾರ್, 42 ವರ್ಷ, ಗುಡುಮಘಟ್ಟೆ ಗ್ರಾಮ ಭದ್ರಾವತಿ ತಾಲ್ಲೋಕು ಇವರಿಗೆ 2 ವರ್ಷ ಕಾರಾವಾಸ ಶಿಕ್ಷೆ ಮತ್ತು 10,000 ರೂ ದಂಡವನ್ನು ವಿಧಿಸಿ ಆದೇಶಿಸಿರುತ್ತದೆ.
Man sentenced for attacking woman with machete after she refused to cut down flower plant
