ಪ್ರೀತಿ ನಿರಾಕರಿಸಿದ ಯುವತಿಗೆ ಬಿಯರ್ ಬಾಟಲಿನಿಂದ ಹಲ್ಲೆ- Young woman attacked with beer bottle for rejecting love

SUDDILIVE || THIRTHAHALLI

ಪ್ರೀತಿ ನಿರಾಕರಿಸಿದ ಯುವತಿಗೆ ಬಿಯರ್ ಬಾಟಲಿನಿಂದ ಹಲ್ಲೆ-  Young woman attacked with beer bottle for rejecting love  

Beer, bottle


ಪ್ರೀತಿ ನಿರಾಕರಿಸಿದಕ್ಕೆ ಬಿಯರ್ ಬಾಟಲಿಯಿಂದ  ಪಾಗಲ್ ಪ್ರೇಮಿಯೊಬ್ಬ ಯುವತಿಗೆ ಚುಚ್ಚಿದ್ದಾನೆ. ಯುವತಿಯ ಮನೆ ಒಳಗೆ ನುಗ್ಗಿ ಯುವತಿಗೆ ಘಾಸಿಗೊಳಿಸಿದ್ದಾನೆ. 

ತೀರ್ಥಹಳ್ಳಿಯ ತೂದೂರು ಗ್ರಾಮದ ಯುವಕ ಸ್ವರೂಪ್ ನಿಂದ ಕೃತ್ಯ ನಡೆದಿದೆ. ಆರು ತಿಂಗಳಿಂದ ಪ್ರೀತಿಸುವಂತೆ ಪೀಡಿಸುತ್ತಿದ್ದ ಯುವಕ ಸ್ವರೂಪ್, ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದನು. ಸ್ವರೂಪ್ ಪ್ರೀತಿಯನ್ನು ನಿರಾಕರಿಸಿದ್ದ ಯುವತಿ ಅಪೂರ್ವ ಳನ್ನ ಬಿಯರ್ ಬಾಟಲಿನಿಂದ ಹಲ್ಲೆಗೊಳಿಸಿದ್ದಾನೆ. 


ನಿನ್ನೆ ಸಂಜೆ ವೇಳೆ ಏಕಾಏಕಿ ಮನೆಗೆ ನುಗ್ಗಿ ದಾಂದಲೇ ನಡೆಸಿದ ಸ್ವರೂಪ್ ಕಂಠ ಪೂರ್ತಿ ಕುಡಿದು ಬಂದು ಯುವತಿಯ ಮನೆಗೆ ನುಗ್ಗಿದ್ದ. ಸ್ವರೂಪ್ ಮನೆಗೆ ನುಗ್ಗುತ್ತಿದಂತೆ ವಿರೋಧ ವ್ಯಕ್ತ ಪಡಿಸಿದ ಅಪೂರ್ವ ತಾಯಿ ಪೂರ್ಣಿಮಾರನ್ನ ಹೊರಗೆ ತಳ್ಳಿದ್ದಾನೆ. 

ತಾಯಿ ಪೂರ್ಣಿಮಾರನ್ನು ಹೊರಗೆ ತಳ್ಳಿ ಮನೆಯ ಬಾಗಿಲು ಹಾಕಿ ಯುವತಿ ಅಪೂರ್ವ ಮೇಲೆ  ಸ್ವರೂಪ್ ಹಲ್ಲೆ ನಡೆಸಿದ್ದಾನೆ. ಮನೆಯ ಒಳಗೆ ಅಪೂರ್ವಳನ್ನು ಲಾಕ್ ಮಾಡಿ ಮೊದಲೇ ತಂದಿದ್ದ ಬಿಯರ್ ಬಾಟಲ್ ನಿಂದ ಮನಸೋಚ್ಚೆ ಚುಚ್ಚಿ್ದಾನೆ. ಯುವತಿ ಅಪೂರ್ವ ಕತ್ತಿನ ಭಾಗ ಹಾಗೂ ಹೊಟ್ಟೆ, ಬೆನ್ನಿನ ಭಾಗಕ್ಕೆ ಬಾಟಲಿಯಿಂದ ಹಲ್ಲೆ ನಡೆಸಿದ್ದಾನೆ.

ನಂತರ ಸ್ವಲ್ಪ ದೂರದಲ್ಲೇ ಇದ್ದ ಯುವತಿ ತಂದೆ ಸುಧಾಕರ್ ಬಾಗಿಲು ಒಡೆದು ಯುವತಿಯ ರಕ್ಷಣೆ ಮಾಡಿದ್ದಾರೆ. ಈ ವೇಳೆ ಘಟನಾ ಸ್ಥಳದಿಂದ  ಸ್ವರೂಪ್ ಕಾಲುಕಿತ್ತಿದ್ದಾನೆ. ಹತ್ತಿರದ ತಾಲೂಕು ಆಸ್ಪತ್ರೆಯಲ್ಲಿ ಯುವತಿಗೆ ಚಿಕಿತ್ಸೆ ಕೊಡಿಸಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲಿಗೆ ಸಾಗಿಸಲಾಗಿದೆ. ಪಾಗಲ್ ಪ್ರೇಮಿ ಸ್ವರೂಪ್ ನನ್ನು  ತೀರ್ಥಹಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. 

Young woman attacked with beer bottle for rejecting love

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close