ಊರಗಡೂರಿನಲ್ಲಿ ಸಹಪಾಠಿಗಳಿಂದ ಅಪ್ರಾಪ್ತ ಬಾಲಕನ ಹತ್ಯೆ- Minor boy murdered by classmates in Uragadur

 SUDDILIVE || SHIVAMOGGA

ಊರಗಡೂರಿನಲ್ಲಿ ಸಹಪಾಠಿಗಳಿಂದ ಅಪ್ರಾಪ್ತ ಬಾಲಕನ ಹತ್ಯೆ- Minor boy murdered by classmates in Uragadur   


ಊರಗಡೂರಿನ 10 ನೇ ತಿರುವಿನಲ್ಲಿ ಎಸ್ ಎಸ್ ಎಸಲ್ ಸಿ ಹುಡುಗನೋರ್ವನ ಹತ್ಯೆಯಾಗಿದೆ. ಎಸ್ ಎಸ್ ಎಲ್ ಸಿ ಮಕ್ಕಳಿಗೆ ವಿಶೇಷ ತರಬೇತಿ ಮುಗಿಸಿಕೊಂಡು ಹೊರಬಂದ ನಂತರ ನಡೆದ ಜಗಳದಿಂದಾಗಿ ಹತ್ಯೆಯಾಗಿದೆ ಎನ್ನಲಾಗಿದೆ. 

ಊರಗಡೂರಿನಲ್ಲಿ 14 ನೇ ತಿರುವಿನಲ್ಲಿ ಸರ್ಕಾರಿ ಶಾಲೆಯಿದ್ದು ಕಳೆದ ಎರಡು ತಿಂಗಳಿಂದ ವಿಶೇಷ ತರಗತಿ ನಡೆಯುತ್ತಿದೆ. ಇಂದು ಸಂಕೇತ್ ಮತ್ತು ಇತರೆ ಸಹಪಾಠಿಯೊಂದಿಗೆ ಗಲಾಟೆಯಾಗಿದೆ. ರಾತ್ರಿ 8 ಗಂಟೆಯ ವೇಳೆಗೆ ತರಗತಿ ಮುಗಿದಿದೆ. ಹೊರಗೆ ಬಂದ ತಕ್ಷಣ ಜಗಳವಾಗಿ ಬಾಲಕನ ಹತ್ಯೆಯಾಗಿದೆ. 

ಅಪ್ರಾಪ್ತರಿದ್ದಾರೆ.ಕೇತ್ (15) ಎಂದು ತಿಳಿದು ಬಂದಿದೆ. ಸಂಕೇತ್ ಊರಗಡೂರು ನಿವಾಸಿ ಕುಮಾರ್ ಅವರ ಮಗ ಆಗಿದ್ದಾನೆ. ಕುಮಾರ ಚಾಲಕ ವೃತ್ತಿ ಮಾಡಿಕೊಂಡಿದ್ದಾರೆ. ಹತ್ಯೆ ಮಾಡಿದ ಮೂವರು ಓಡಿಹೋದವರನ್ನ  ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶಾಲೆ ಹಿಂಭಾಗದಲ್ಲಿರುವ ಬಯಲಿನಲ್ಲಿ ಘಟನೆ ನಡೆದಿದೆ.

ಊರಗಡೂರಿನಲ್ಲಿ ಸ್ಥಳದಲ್ಲಿ ಮೃತನಕಡೆಯವರು ಗುಂಪು ಸೇರಿದ್ದಾರೆ. ಎಸ್ಪಿ ನಿಖಿಲ್.ಬಿ ಡಿವೈಎಸ್ಪಿ ಸಂಜೀವ್ ಕುಮಾರ್, ಪೊಲೀಸ್ ಇನ್ ಸ್ಪೆಕ್ಟರ್ ಗುರುರಾಜ್ ಕೆಟಿ, ರಾಘವೇಂದ್ರ ಖಂಡಿಕೆ, ದೀಪಕ್ ಮೊದಲಾದವರು ಮೊಕ್ಕಂ ಹೂಡಿದ್ದಾರೆ. ಕ್ರಿಕೆಟ್ ಆಟದ ವಿಷಯದಲ್ಲಿ ಗಲಾಟೆ ಆಗಿದೆ ಎಂಬುದು ಸ್ಥಳೀಯ ಮಾಹಿತಿ ಸಂಗ್ರಹವಾಗಿದೆ. ಮರ್ಡರ್ ರಾಜಕೀಯ ಬಣ್ಣ ಪಡೆದುಕೊಳ್ಳುವ ಸಾಧ್ಯತೆಯಿದೆ. ಅನ್ಯಕೋಮಿನ ಬಾಲಕರಿಂದ ಹತ್ಯೆ ನಡೆದಿರುವ ಕೆ ವ್ಯಕ್ತವಾಗುತ್ತಿದೆ.

ಈ ಕುರಿತು ಮಾತನಾಡಿದ ಎಸ್ಪಿ ನಿಖಿಲ್ ಮೃತ ಪಟ್ಟವನ ಕುಟುಂಬದವರ ಜೊತೆ ಮಾತನಾಡಲಾಗಿದೆ. ಆಕಸ್ಮಿಕವಾಗಿ ನಡೆದಿರುವ ಘಟನೆಯಾಗಿದೆ ಎಂದು ಮನವರಿಕೆ ಮಾಡಿಕೊಡಲಾಗಿದೆ. ಎಲ್ಲಾ ಅಪ್ರಾಪ್ತರಿದ್ದಾರೆ. ಗಲಾಟೆ ಬಿಡಿಸಲು ಹೋದವನನ್ನ ಕೊಲೆ ಮಾಡಲಾಗಿದೆ ಎಂದರು

Minor boy murdered by classmates in Uragadur  

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close