SUDDILIVE || SHIVAMOGGA
ಅಮ್ಮನವರ ದರ್ಶನ ಆರಂಭ- The darshan of Maramma begins
ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುವ ಶಿವಮೊಗ್ಗದ ಮಾರಿ ಚಾತ್ರೆಗೆ ಚಾಲನೆ ದೊರೆತಿದೆ. ಸುಮಾರು 7 ಗಂಟೆಗೆ ಗಾಂಧಿ ಬಜಾರಿನ ನಾಡಿಗರ ಮನೆಯ ಮುಂದೆ ದೇವಿಯನ್ನ ಪ್ರತಿಷ್ಠಾಪಿಸಿ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ.
ದೇವಿ ದರ್ಶನಕ್ಕೆ ಬೆಳಗ್ಗಿನ ಜಾವ 3 ಗಂಟೆಯಿಂದಲೇ ಜನ ಸರದಿ ಸಾಲಿನಲ್ಲಿ ನಿಂತಿದ್ದರು. ಎಡಭಾಗದಲ್ಲಿ ಆರಂಭಗೊಂಡ ಸಾಲು ಬೆಳ್ಳಂಬೆಳಿಗ್ಗೆನೆ ಮೈಲಾರೇಶ್ವರ ದೇವಸ್ಥಾನದ ವರಗೆ ತಲುಪಿತ್ತು. ದರ್ಶನ ಬೆಳಗ್ಗೆನೆ ಆರಂಭವಾಗಲಿದೆ ಎಂಬ ಕಾರಣಕ್ಕೆ ಈ ಸರದಿ ಸಾಲು ನಿರ್ಮಾಣವಾಗಿತ್ತು ಎನ್ನಬಹುದಾಗಿದೆ.
ಗಾಂಧಿ ಬಜಾರ್ ನ ಕಾಳಿ ಪ್ರಮುಖದ್ವಾರದಿಂದ ಎರಡು ಸರದಿ ಸಾಲಿನಲ್ಲಿ ಜನಕ್ಕೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಬಲಭಾಗದ ಸರದಿ ಸಾಲು ಸಧ್ಯ ತಾಜ್ ಹೋಟೆಲ್ ನವರೆಗೂ ತಲುಪಿದೆ. ಈ ಬಾರಿ ಬ್ಯಾರಿಕೇಡ್ ಹಾಕಿ ದೇವಿ ದರ್ಶನಕ್ಕೆ ಎಡ ಭಾಗದಿಂದ ಬರುವ ಭಕ್ತರಿಗೆ ದೇವಿಯ ದರ್ಶನ ಪಡೆದು ಬಲಭಾಗದಿಂದ ಹೊರ ಹೋಗಬಹುದಾಗಿದೆ. ಬಲಭಾಗದಿಂದ ಬರುವವರಿಗೆ ಎಡಭಾಗದಿಂದ ಹೊರ ಹೋಗಲು ಅವಕಾಶ ಮಾಡಿಕೊಡಲಾಗಿದೆ.
ದರ್ಶನಕ್ಕೆ ವಿಐಪಿ ಪಾಸ್ ನ್ನೂ ಸಹ ಅವಕಾಶವಿರುವುದರಿಂದ ಅಲ್ಲೂ ಸಹ ಜನರ ಸಂಖ್ಯೆ ಹೆಚ್ಚಾಗಿದೆ. ತವರು ಮನೆಯಲ್ಲಿರುವಾಗ ಅಮ್ಮನ ದರ್ಶನಕ್ಕೆ ಪ್ರತಿಬಾರಿಯಂತೆ ಈ ಬಾರಿಯೂ ಹೆಚ್ಚಿನ ಜನಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ಮಡಲಕ್ಕಿ ನೀಡಿ ತಾಯಿಯ ಆಶೀರ್ವಾದ ಪಡೆಯುತ್ತಿದ್ದಾರೆ.
ಈ ಹಿಂದೆ ತಾಯಿಯ ಮಡಿಲಲ್ಲಿ ಹಾಕಿ ಪುಟಾಣಿ ಮಕ್ಕಳಿಗೆ ಅವಕಾಶಕಲ್ಪಿಸಲಾಗುತ್ತಿತ್ತು. ಆದರೆ ಈ ಬಾರಿ ಆ ದೃಶ್ಯಗಳು ಲಭ್ಯವಿಲ್ಲ. ದೇವಿಯ ಮುಂಭಾಗದಲ್ಪಿ ಮಕ್ಕಳಿಗೆ ಭಂಡಾರ ಹಚ್ಚಿ ಕಳುಹಿಸಲಾಗುತ್ತಿದೆ. ಒಟ್ಟಿನಲ್ಲಿ ಈ ಬಾರಿ ದರ್ಶನಕ್ಕೆ ವ್ಯವಸ್ಥೆ ಚೆನ್ನಾಗಿ ಕಲ್ಪಿಸಲಾಗಿದೆ.
The darshan of Maramma begins


