SUDDILIVE || SORABA
ನಕಲಿ ಕೀ ಬಳಸಿ ಬೈಕ್ ಕಳುವು- Bike theft using a fake key
ಪಟ್ಟಣದ ಶ್ರೀರಂಗನಾಥ ದೇವಸ್ಥಾನ ಸಮೀಪ ಪಾರ್ಕಿಂಗ್ ನಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನವನ್ನು ನಕಲಿ ಕೀ ಬಳಸಿ ಕಳ್ಳತನ ಮಾಡಿರುವ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ.
ರಾಘವೇಂದ್ರ ಬಡಾವಣೆ ನಿವಾಸಿ ಜೆ.ಎಸ್. ರಾಘವೇಂದ್ರ ಗುಡಿಗಾರ್ ಅವರು ಹೋಟೆಲ್ ಒಂದರಲ್ಲಿ ಊಟಕ್ಕೆಂದು ತೆರಳಿದ್ದರು. ಊಟ ಮುಗಿಸಿ ಹೊರ ಬಂದಾಗ ಹೀರೋ ಫ್ಯಾಷನ್ ಪ್ರೋ ಕಂಪನಿಯ ( ಕೆ.ಎ.15. ವೈ. 7692) ಬೈಕ್ ಕಳುವಾಗಿರುವುದು ತಿಳಿದಿದೆ. ಸಮೀಪದ ಅಂಬಿಕಾ ವೈನ್ಸ್‌ನ ಸಿಸಿ ಕ್ಯಾಮಾರವನ್ನು ಪರಿಶೀಲಿಸಿದಾಗ ಇಬ್ಬರು ಕಳ್ಳರು ಬೈಕ್ ಕಳುವು ಮಾಡಿರುವುದು ಬೆಳಕಿಗೆ ಬಂದಿದೆ.
ಈ ಸಂಬಂಧ ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Bike theft using a fake key
