SUDDILIVE || SHIVAMOGGA
ಲಾಟರಿ ಹೊಡೆದ ಡಾ.ಬಿ.ಡಿ.ಭೂಕಾಂತ್-Dr. B.D. Bhookanth won the lottery
ಒಂದಲ್ಲಾ ಒಂದು ಸನ್ನಿವೇಶದಲ್ಲಿ ಮಾಜಿ ಸಿಎಂ ಯಡೂರಪ್ಪ, ಅಥವಾ ಅವರ ಕುಟಂಬ ಅಥವಾ ಅವರ ಆಪ್ತವಲಯಕ್ಕೆ ಲಾಟರಿ ಹೊಡೆಯುತ್ತದೆ. ಆ ಲಾಟರಿ ಭಾಗ್ಯ ಈಗ ಬಿಎಸ್ ವೈ ಆಪ್ತ ವಲಯಕ್ಕೆ ಲಭಿಸಿದೆ. ಬಿಎಸ್ ವೈ ಆಪ್ತರಾದ ಡಾ.ಬಿ.ಡಿ ಭೂಕಾಂತ್ ರಿಗೆ ರಾಜ್ಯ ಸಚಿವ ಸ್ಥಾನಮಾನ ಲಭ್ಯವಿರುವ ರಾಜ್ಯ ಸಹಕಾರಿ ತೋಟಕಾರಿಕೆ ಮಾರಾಟ ಮಹಾಮಂಡಳಿ ನಿಯಮಿತದ ಅಧ್ಯಕ್ಷ ಸ್ಥಾನ ಲಭಿಸಿದೆ.
ಫೆ.15 ಕ್ಕೆ ಈ ಸ್ಥಾನಕ್ಕೆ ಈ ನಿಗಮದ ನಿರ್ದೇಶಕ ಸ್ಥಾನಕ್ಕೆ ಚುನಾವಣೆಯಾಗಬೇಕಿತ್ತು. ಚುನಾವಣೆ ಪ್ರಕ್ರಿಯ ನಡೆದಿರುವಾಗಲೇ ಸರ್ಕಾರ ಈ ನಿಗಮವೂ ಸೇರಿದಂತೆ 54 ನಿಗಮ ಮಂಡಳಿಗೆ ಅಧ್ಯಕ್ಷ ಸ್ಥಾನವನ್ನ ಘೋಷಿಸಿ ಆದೇಶಿಸಿದೆ. ಈ ಆದೇಶ ಅಧಿಕಾರಿಗಳ ಯಡವಟ್ಟಿನಿಂದ ಆಗಿದೆಯೋ, ಅಥವಾ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಬದುಕಿದೆಯೋ ಸತ್ತಿದೆಯೋ ಎಂಬುದಕ್ಕೆ ಇದು ಕೈಗನ್ನಡಿಯಾಗಿದೆ.
ಬಿಜೆಪಿಯಲ್ಲಿದ್ದರೂ ಭೂಕಾಂತಪ್ಪನವರಿಗೆ ಈ ಲಾಟರಿ ಹೊಡೆದಿದ್ದು ಹೇಗೆ ಎಂಬುದನ್ನ ಒಂದೋ ಜಿಲ್ಲಾಕಾಂಗ್ರೆಸ್ ಸ್ಪಷ್ಟಪಡಿಸಬೇಕು, ಇಲ್ಲ ಅಧಿಕಾರಿಗಳು ಮೈಮರೆತು ಸ್ಥಾನ ಮಾನ ನಿಗದಿಪಡಿಸಿರಬೇಕು. ಬಿಜೆಪಿಅಧಿಕಾರದಲ್ಲಿ ಹಂಚಿದ ನಿಗಮ ಮಂಡಳಿಯ ಅವಧಿ ಮುಗಿದಿದೆ. 2021 ರಲ್ಲಿ ಈ ನಿಗಮಮಂಡಳಿಯ ಅಧ್ಯಕ್ಚ ಸ್ಥಾನಕ್ಕೆ ಡಾ.ಬಿ.ಡಿ ಭೂಕಾಂತ್ ನಿಯೋಜನೆಗೊಂಡಿದ್ದರು.
2026 ಜನವರಿ 15 ರಂದು ಭೂಕಾಂತಪ್ಪನವರ ಅವಧಿ ಮುಕ್ತಾಯಗೊಂಡಿದೆ. ಮುಕ್ತಾಯಗೊಂಡರೂ, 2025 ಕ್ಕೆ ಇಲ್ಲಿ ಜಿಲ್ಲಾ ಹಾಪ್ ಕಾಮ್ಸ್ ಅಧ್ಯಕ್ಚ ವಿಜಯಕುಮಾರ್ ಅವರನ್ನ ಡೆಲಿಗೇಷನ್ ಮಾಡಿ ಕಳುಹಿಸಲಾಗಿತ್ತು. ಈ ಸ್ಥಾನಕ್ಕೆ ಫೆ.15 ರಂದು ನಿರ್ದೇಶಕರು ಆಯ್ಕೆಗೊಂಡು ನಂತರ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಆಯ್ಕೆಯಾಗಬೇಕಿದೆ. ಅಷ್ಟರೊಳಗೆ ಅವರ ಅವಧಿ ಮುಂದುವರೆಯಿಸಲಾಗಿದೆ. ಸರ್ಕಾರದ ಈ ಆದೇಶವೇ ತಪ್ಪಾಗಿದೆ ಎಂಬುದು ಕೆಲವರ ವಾದ.
ಆದರೆ ಭೂಕಾಂತಪ್ಪನವರಿಗೆ ಲಾಟರಿ ಹೊಡೆದಿದೆ. ಸರ್ಕಾರ ಈ ಆದೇಶವನ್ನ ಹಿಂಪಡೆದು ಮತ್ತೆ ಆದೇಶಿಸಬಹುದು.ಅಲ್ಲಿಯವರೆಗೆ ಅವರಿಗೆ ಹೊಡೆದ ಲಾಟರಿ ಕಾಂಗ್ರೆಸ್ ನಲ್ಲಿ ಚರ್ಚೆಗೆ ಗ್ರಾಸವಾಗಿದೆ ಸಾಮಾಜಿಕ ಜಾಲತಾಣದ ತುಂಬ ಭರ್ಜರಿ ಚರ್ಚೆಗೆ ಬಿಜೆಪಿ ಭೂಕಾಂತಪ್ಪನವರ ರಾಜ್ಯ ಸಚಿವ ಸ್ಥಾನ ಮಾನದ ಅಧ್ಯಕ್ಷಗಿರಿ ಸಿಕ್ಕಿರುವುದರ ಬಗ್ಗೆ ವಾದ ವಿವಾದಗಳು ನಡೆಯುತ್ತಿದೆ. ಒಟ್ಟಿನಲ್ಲಿ ಯಡಿಯೂರಪ್ಪನವರ ಕಡೆಯವರಾದರೆ ಕಾಂಗ್ರೆಸ್ ಅವಧಿಯಲ್ಲಿಯೂ ಸಹ ಲಾಟರಿಯೋ ಲಾಟರಿ ಎಂಬುದಕ್ಕೆ ಭೂಕಾಂತಪ್ಪನವರೆ ಸಾಕ್ಷಿ.
Dr. B.D. Bhookanth won the lottery

