SUDDILIVE || SHIVAMOGGA
ಫೆ.16 ರಂದು ಮೈಸೂರಿಗೆ ಹೋಗುವ ರೈಲುಗಳು ಭಾಗಶಃ ರದ್ಧತಿ, ನಿಯಂತ್ರಣ ಹಾಗೂ ಮರುನಿಗದಿ- Partial cancellation, restriction and rescheduling of trains to Mysuru on Feb. 16
ಫೆ.16 ರಂದು ರೈಲುಗಳ ರದ್ದತಿ, ಭಾಗಶಃ ರದ್ದತಿ, ನಿಯಂತ್ರಣ ಹಾಗೂ ಮರುನಿಗಡಿಪಡಿಸಲಾಗಿದೆ. ವಿಶ್ವೇಶ್ವರಯ್ಯ ಜಲ ನಿಗಮ ಲಿಮಿಟೆಡ್ (ವಿಜೆಎನ್ಎಲ್) ವತಿಯಿಂದ ಹಬ್ಬನಘಟ್ಟ – ಅರಸೀಕೆರೆ ಸೆಕ್ಷನ್ ನಡುವೆ ನಡೆಯಲಿರುವ ಕಾಲುವೆ ಕ್ರಾಸಿಂಗ್ ಕಾಮಗಾರಿ ಹಿನ್ನೆಲೆಯಲ್ಲಿ, ಕೆಳಗಿನ ರೈಲು ಸೇವೆಗಳನ್ನು ರದ್ದುಪಡಿಸಲಾಗಿದೆ, ಭಾಗಶಃ ರದ್ದುಪಡಿಸಲಾಗಿದೆ, ನಿಯಂತ್ರಿಸಲಾಗಿದೆ ಮತ್ತು ಮರುನಿಗದಿ ಮಾಡಲಾಗಿದೆ:
ರದ್ದುಪಡಿಸಲಾದ ರೈಲುಗಳು:
ದಿನಾಂಕ 16.02.2026 ರಂದು ಹೊರಡಲಿರುವ ರೈಲು ಸಂಖ್ಯೆ. 56267 ಅರಸೀಕೆರೆ – ಮೈಸೂರು ಪ್ಯಾಸೆಂಜರ್, ರೈಲು ಸಂಖ್ಯೆ. 16206 ಮೈಸೂರು – ತಾಳಗುಪ್ಪ ಎಕ್ಸಪ್ರೆಸ್ ಮತ್ತು ರೈಲು ಸಂಖ್ಯೆ. 16205 ತಾಳಗುಪ್ಪ – ಮೈಸೂರು ಎಕ್ಸಪ್ರೆಸ್ ರೈಲು ಸೇವೆಗಳು ರದ್ದಾಗಲಿವೆ.
ಭಾಗಶಃ ರದ್ದುಪಡಿಸಲಾದ ರೈಲು:
ಅದೇ ರೀತಿ ರೈಲು ಸಂಖ್ಯೆ. 16225 ಮೈಸೂರು – ಶಿವಮೊಗ್ಗ ಟೌನ್ ಎಕ್ಸಪ್ರೆಸ್, ದಿನಾಂಕ 16.02.2026 ರಂದು ಮೈಸೂರು ಮತ್ತು ಅರಸೀಕೆರೆ ನಡುವಿನ ಮಾರ್ಗದಲ್ಲಿ ಭಾಗಶಃ ರದ್ದುಪಡಿಸಲಾಗಿದ್ದು, ಈ ರೈಲು ಅರಸೀಕೆರೆಯಿಂದ ತನ್ನ ನಿಗದಿತ ಸಮಯದಲ್ಲಿ ಹೊರಡಲಿದೆ.
ನಿಯಂತ್ರಿಸಲಾದ ರೈಲು:
ಅದೇ ದಿನ ರೈಲು ಸಂಖ್ಯೆ. 56266 ಮೈಸೂರು – ಅರಸೀಕೆರೆ ಪ್ಯಾಸೆಂಜರ್, ತನ್ನ ಪ್ರಯಾಣದಲ್ಲಿ 110 ನಿಮಿಷಗಳವರೆಗೆ ಮತ್ತು ರೈಲು ಸಂಖ್ಯೆ. 16221 ತಾಳಗುಪ್ಪ - ಮೈಸೂರು ಎಕ್ಸಪ್ರೆಸ್, ತನ್ನ ಪ್ರಯಾಣದಲ್ಲಿ 100 ನಿಮಿಷಗಳವರೆಗೆ ಮಾರ್ಗ ಮಧ್ಯೆ ನಿಯಂತ್ರಿಸಲಾಗುವುದು.
ಮರುನಿಗದಿ ಮಾಡಲಾದ ರೈಲುಗಳು:
ರೈಲು ಸಂ. 56265 ಅರಸೀಕೆರೆ – ಮೈಸೂರು ಪ್ಯಾಸೆಂಜರ್, ಅರಸೀಕೆರೆ ಯಿಂದ 100 ನಿಮಿಷ ಮತ್ತು ರೈಲು ಸಂಖ್ಯೆ. 06269 ಮೈಸೂರು – ಎಸ್ಎಂವಿಟಿ ಬೆಂಗಳೂರು ವಿಶೇಷ ಪ್ಯಾಸೆಂಜರ್, ಮೈಸೂರಿನಿಂದ 100 ನಿಮಿಷಗಳವರೆಗೆ ಮರುನಿಗದಿಪಡಿಸಿಲಾಗಿದೆ.
Partial cancellation, restriction and rescheduling of trains to Mysuru on Feb. 16
