ಮುಕ್ಬುಲ್ ಅಹಮದ್ ಅವರ ನೇತೃತ್ವದಲ್ಲಿ ಪ್ರತಿಭಟಿಸಿದ್ದಾರೆ- Protest led by Mukbul Ahmed

 SUDDILIVE || SHIVAMOGGA

ಮುಕ್ಬುಲ್ ಅಹಮದ್ ಅವರ ನೇತೃತ್ವದಲ್ಲಿ ಪ್ರತಿಭಟಿಸಿದ್ದಾರೆ-Protest led by Mukbul Ahmed    

Protest, mukbul


ಶಿವಮೊಗ್ಗದ ಸೋಮಿನಕೊಪ್ಪದಲ್ಲಿ ಸಾರ್ವಜನಿಕ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಕೊಡುವಂತೆ ಆಗ್ರಹಿಸಿ ರಾಷ್ಟ್ರೀಯ ಮುಜುದೂರು ಕಾಂಗ್ರೆಸ್ ಕರ್ನಾಟಕ ರಾಜ್ಯ ಶಾಖೆ ಶಿವಮೊಗ್ಗ ಘಟಕ ಮುಕ್ಬುಲ್ ಅಹಮದ್ ಅವರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆದಿದೆ.

ವಾರ್ಡ್ ನಂಬರ್ ಒಂದರ ನಿವಾಸಿಗಳಾದ ಸೋಮಿನಕೊಪ್ಪದಲ್ಲಿ ಸ್ಮಾರ್ಟ್ ಸಿಟಿ ಮಾಡಿದ್ದರು ಸಹ ಈ ಬಡಾವಣೆಯಲ್ಲಿ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರಿನ ಸೌಲಭ್ಯ ಅಷ್ಟೇ ದೀಪ ಒಳಚರಂಡಿ ಸಿಟಿ ಬಸ್ ಗಳು ಇಲ್ಲದೆ ತುಂಬಾ ತೊಂದರೆ ಉಂಟಾಗುತ್ತಿದೆ ಈ ಕುರಿತು ಅನೇಕ ಬಾರಿ ಮನವಿ ಮಾಡಿದರು ಸಹ ಯಾವುದೇ ಪ್ರಯೋಜನವಾಗಿಲ್ಲವೆಂದು ಪ್ರತಿಭಟನೆ ಯಲ್ಲಿ ಆಗ್ರಹಿಸಿದ್ದಾರೆ.

ಚರಂಡಿಗಳಲ್ಲಿ ನೀರು ನಿಂತು ಇದರ ಸೊಳ್ಳೆ ಕಾಟದಿಂದ ಸಾಂಕ್ರಾಮಿಕ ರೋಗ ಹೊರಡುವುದಲ್ಲದೆ ನಿಂತ ಚರಂಡಿ ನೀರಿನಿಂದ ಕೆಟ್ಟ ವಾಸನೆ ಬರುತ್ತಿದೆ ನಮ್ಮ ತೊಂದರೆಗಳನ್ನು ಮಹಾನಗರ ಪಾಲಿಕೆ ಆಯುಕ್ತರಾಗಲಿ ಮಾಜಿ ಸದಸ್ಯರಾದ ಆಶಾ ಚಂದ್ರಪ್ಪ ರಾಗಲಿ ತಿರುಗಿ ನೋಡದ ಸ್ಥಿತಿಯಲ್ಲಿ ಇರುವುದರಿಂದ ಪ್ರತಿಭಟನೆ ಅನಿವಾರ್ಯವಾಗಿದೆ ಎಂದು ಪ್ರತಿಭಟನಾಕಾರರು ಮನವಿಯಲ್ಲಿ ಆಗ್ರಹಿಸಿದ್ದಾರೆ ಸ್ಥಳೀಯ ಶಾಸಕರು ನಮ್ಮವಾಡಿಗೆ ಬಂದ ಅನುದಾನವನ್ನು ದುರುಪಯೋಗಪಡಿಸಿಕೊಂಡು ಬೇರೆ ಕಡೆ ಅನುದಾನವನ್ನು ಹಾಕಿಸಿಕೊಂಡು ಶಿವಮೊಗ್ಗ ನೀತಿಯನ್ನು ಅನುಸರಿಸುತ್ತಿದ್ದಾರೆ ವಾರ್ಡ್ ನಂಬರ್ ಒಂದರಲ್ಲಿ ಇತ್ತಕಡೆ ಎಂದಿಗೂ ಸ್ಪಂದಿಸದೆ ಇರುವುದು ದುರದೃಷ್ಟಕರವಾಗಿದೆ ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಪ್ರತಿಭಟನೆ ಸ್ಥಳಕ್ಕೆ ಭಾವಿಸಿ ನಮ್ಮ ಕುಂದುಕೊರತೆಗಳನ್ನು ಬಗೆಹರಿಸಬೇಕೆಂದು ಆಗ್ರಹಿಸುವ ಪ್ರತಿಭಟನೆಕಾರರು ಇಲ್ಲವಾದಲ್ಲಿ ಜಿಲ್ಲಾಧಿಕಾರಿ ಕಚೇರಿಯ ಮುಂದೆ ಅಮರನಾಥಿಕ ಧರಣಿ ನಡೆಸಲಾಗುವುದೆಂದು ಎಚ್ಚರಿಸಿದ್ದಾರೆ.

Protest led by Mukbul Ahmed

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close