ಬೈಪಾಸ್ ನಲ್ಲಿ ಮುಂದುವರೆದ ದಂಡ ಪ್ರಕ್ರಿಯೆ-Penalty proceedings continued in the bypass

SUDDILIVE || SHIVAMOGGA

ಬೈಪಾಸ್ ನಲ್ಲಿ ಮುಂದುವರೆದ ದಂಡ ಪ್ರಕ್ರಿಯೆ-Penalty proceedings continued in the bypass

Penalty, bypass



ನಗರದ ಬೈಪಾಸ್ ನಲ್ಲಿ ಕಸದ ರಾಶಿಯನ್ನ ತಂದು ಸುರಿಯುವವರಿಗೆ ಮಹಾನಗರ ಪಾಲಿಕೆ ದಂಡ ವಿಧಿಸುವುದಾಗಿ ಸೂಚಿಸಿದರು, ಕಸದ ರಾಶಿಯನ್ನ ಬಿಸಾಕುವ ಚಾಳಿಯನ್ನ ಕೆಲವರು ಮುಂದುವರೆಸಿದ್ದಾರೆ. ಪರಿಣಾಮ ಪಾಲಿಕೆಯ ದಂಡ ವಸೂಲಿ ಮುಂದುವರೆದಿದೆ. 

ಸಾರ್ವಜನಿಕವಾಗಿ ಬೈಪಸ್ ಬಳಿ ಕಟ್ಟಡದ ಅವಶೇಷಗಳನ್ನ ತಂದು ಸುರಿಯುತ್ತಿದ್ದು, ಇದನ್ನ ಕಂಡ ಕಂಡಲ್ಲಿ ಬಿಸಾಕದಂತೆ ಸೂಚಿಸಿ ಫೆ.7 ರಂದು ಟ್ಯಾಕ್ಟರ್ ನಲ್ಲಿ ಕಸಗಳ ತಂದವರಿಗೆ ಸಾವಿರ ರೂ. ದಂಡ ಸಂಗ್ರಹಿಸಲಾಯಿತು. ಆದರೆ ದಂಡ ವಸೂಲಿ ಮಾಡಿದರು ಬುದ್ದಿಕಲಿಯದ ಕೆಲಸವರು ತಮ್ಮ ಚಾಳಿಯನ್ನ ಮುಂದುವರೆಸಿದ್ದರಿಂದ ದಂಡ ಸಂಗ್ರಹಿಸಿ ಜಾಗೃತಿ ಮೂಡಿಸಲಾಗಿದೆ. 

ಮಹಾನಗರ ಪಾಲಿಕೆ ಆಯುಕ್ತರ ನಿರ್ದೇಶನದಂತೆ  ಸಾರ್ವಜನಿಕ ಪ್ರದೇಶದಲ್ಲಿ ಅನಧಿಕೃತವಾಗಿ  ಬೈಪಾಸ್ ರಸ್ತೆಯಲ್ಲಿ ತ್ಯಾಜ್ಯ  ಸುರಿಯುತ್ತಿರುವವರಿಗೆ ದಂಡ ವಿಧಿಸಿ, ಇನ್ನು ಮುಂದೆ ಈ ರೀತಿ ಸಾರ್ವಜನಿಕ ಪ್ರದೇಶದಲ್ಲಿ ಎಲ್ಲಿಯೂ ಕೂಡ ಸುರಿಯದಂತೆ ಸೂಚಿಸಲಾಗಿದೆ. ಈ ಕಾರ್ಯಚರಣೆಯಲ್ಲಿ ಆರೋಗ್ಯ ನಿರೀಕ್ಷಕರಾದ ವಿಕಾಸ್ ಆರ್ ಮತ್ತು ಶಿವಮೂರ್ತಪ್ಪ ಲಕ್ಕಣ್ಣನವರ್ ರವರು ಭಾಗಿಯಾಗಿದ್ದರು. 

Penalty proceedings continued in the bypass

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close