SUDDILIVE || SHIVAMOGGA
ಪ್ರೇಮ ವೈಫಲ್ಯಕಂಡವನಿಂದ ಆತ್ಮಹತ್ಯೆಗೆ ಯತ್ನ ಪೊಲೀಸರಿಂದ ರಕ್ಷಣೆ- Police rescue man who attempted suicide after failing in love
ಪ್ರೇಮ ವೈಫಲ್ಯದ ಹಿನ್ನಲೆಯಲ್ಲಿ ರೈಲಿಗೆ ತಲೆವೊಡ್ಡಿ ಆತ್ಮಹತ್ಯೆಗೆ ಮುಂದಾಗಿದ್ದ ಯುವಕನನ್ನ ಭದ್ರಾವತಿ ಪೊಲೀಸರು ಆತನನ್ನ ರಕ್ಷಿಸಿ ಆತನ ಪೋಷಕರಿಗೆ ಒಪ್ಪಿಸಿರುವ ಘಟನೆ ವರದಿಯಾಗಿದೆ.
ಫೆ. 22 ರಂದು ರಾತ್ರಿ ಭದ್ರಾವತಿ ಹುತ್ತ ರೈಲ್ವೆ ಟ್ರ್ಯಾಕ್ ಮೇಲೆ 18 ವರ್ಷದ ಯುವಕನೊಬ್ಬನು ಮಲಗಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸುತ್ತಿರುವ ಬಗ್ಗೆ ಮಾಹಿತಿ ಬಂದ ಕೂಡಲೇ, ರಾತ್ರಿ ಗಸ್ತು ಕರ್ತವ್ಯದಲ್ಲಿದ್ದ ನ್ಯೂಟೌನ್ ನ ನಾಗರಾಜ ಹೆಚ್.ಸಿ ಹಾಗೂ ಸಲೀಂ, ಹೆಚ್.ಜಿರವರು ಸ್ಥಳಕ್ಕೆ ಹೋಗಿ, ಸಾರ್ವಜನಿಕರ ಸಹಾಯದಿಂದ ಯುವಕನನ್ನು ರಕ್ಷಿಸಿ ಠಾಣೆಗೆ ಕರೆತಂದಿದ್ದಾರೆ.
ವಿಚಾರಿಸಿದಾಗ ಯುವಕ, ಪ್ರೇಮ ವೈಫಲ್ಯದಿಂದ ಮನನೊಂದು, ಆತ್ಮಹತ್ಯೆಗೆ ಯತ್ನಿಸಿರುವುದಾಗಿ ತಿಳಿಸಿದ್ದು, ಆತನಿಗೆ ಬುದ್ಧಿವಾದ ಹೇಳಿ ಪೋಷಕರನ್ನು ಕರೆಸಿ ಅವರೊಂದಿಗೆ ಕಳುಹಿಸಿ ಕೊಟ್ಟಿದ್ದಾರೆ. ಭದ್ರಾವತಿ ನ್ಯೂ ಟೌನ್ ಪೊಲೀಸರ ಉತ್ತಮವಾದ ಕಾರ್ಯವನ್ನು ಎಸ್ಪಿ ನಿಖಿಲ್.ಬಿ ರವರು ಪ್ರಶಂಸಿಸಿ ಅಭಿನಂದಿಸಿರುತ್ತಾರೆ.
Police rescue man who attempted suicide after failing in love

