ಮಾರಿ ಜಾತ್ರೆಗೆ ಸಕಲ ಸಿದ್ಧತೆ- All set for the Mari fair

 SUDDILIVE || SHIVAMOGGA

ಮಾರಿ ಜಾತ್ರೆಗೆ ಸಕಲ ಸಿದ್ಧತೆ- All set for the Mari fair    

Mari, fair

ನಾಳೆಯಿಂದ ಕೋಟೆ ಶ್ರೀ ಮಾರಿಕಾಂಬ ಜಾತ್ರೆ ಆರಂಭವಾಗಿದ್ದು ಸಕಲ ಸಿದ್ಧತೆಗಳನ್ನ ಮಾಡಿಕೊಳ್ಳಲಾಗಿದೆ. ದೀಪದ ಅಲಂಕಾರ, ಜಾತ್ರೆಗೆ ಬರುವ ಭಕ್ತರಿಗೆ ಜರ್ಮನ್ ಟಾರ್ಪಲ್ ಅಳವಡಿಕೆ ಸೇರಿದಂತೆ ಬಹುತೇಕ ಸಿದ್ದತೆಗಳನ್ನ ಮಾಡಿಕೊಳ್ಳಲಾಗಿದೆ ಎಂದು ಮಾರಿಕಾಂಬ ಜಾತ್ರ ಸೇವಾ ಸಮಿತಿ ಅಧ್ಯಕ್ಷ ಎಸ್ ಕೆ ಮರಿಯಪ್ಪ ತಿಳಿಸಿದರು. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗಾಂಧಿ ಬಜಾರ್ ಮತ್ತು ಗದ್ದುಗೆ ಬಳಿ ದೇವಿಯ ದರ್ಶನಕ್ಕೆ ಬರುವ ಭಕ್ತರಿಗೆ ಕುಡಿಯುವ ನೀರಿನ ವ್ಯವಸ್ಥೆ, ಸಾಲಾಗಿ ಬರುವ ಭಕ್ತರಿಗೆ ಬಿಸಿಲಿನ ಬೇಗೆ ತಟ್ಟದಂತೆ ಜರ್ಮನ್ ಟಾರ್ಪಲ್ ವ್ಯವಸ್ಥೆ ಸೇರಿದಂತೆ ಹಲವು ಸಿದ್ಧತೆಗಳನ್ನ ಮಾಡಿಕೊಳ್ಳಲಾಗಿದೆ.  ಪಾಲಿಕೆ, ಪೊಲೀಸರ ಜೊತೆ ಮಾತುಕತೆ ನಡೆಸಲಾಗಿದೆ ಗಾಂಧಿ ಬಜಾರ್ ನ ಮಹಾದ್ವಾರದಲ್ಲಿ 48 ಅಡಿ ಕಾಳಿ ದೇವಿಯ ಪ್ರತಿಮೆ ನಿರ್ಮಿಸಲಾಗಿದೆ. ನಿನ್ನೆ ರಾತ್ರಿ 9-30 ಕ್ಕೆ ಸ್ಥಳಕ್ಕೆ ತಂದು ಪ್ರತಿಷ್ಠಾಪಿಸಲಾಗಿದೆ. ಎಡ ಮತ್ತು ಬಲಭಾಗದಲ್ಲಿ ಬರುವ ಭಕ್ತರಿಗೆ ದರ್ಶನಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ ಎಂದರು. 

ಪಾರ್ಕಿಂಗ್ ವ್ಯವಸ್ಥೆಗೆ ಚರ್ಚ್, ಸೈನ್ಸ್ ಮೈದಾನ, ಮೈನ್ ಮಿಡ್ಲಸ್ಕೂಲ್,  ಕಾರ್ಪರೇಷನ್ ಜಾಗ ಬಳಸಿಕೊಳ್ಳಲಾಗಿದೆ. ನಿನ್ನೆ ಶಿವಮೊಗ್ಗದಲ್ಲಿ ವ್ಯವಸ್ಥಿತ ಅಲಂಕಾರ ಮಾಡಿದೆ ಎಂದು ಸಾರ್ವಜನಿಕರು ತಮ್ಮ ಅಭಿಪ್ರಾಯ ವ್ಯಕ್ತ ಮಾಡಿದ್ದಾರೆ. ರಾಜ್ಯದಲ್ಲಿ ಶಿವಮೊಗ್ಗದ ಮಾರಿ ಜಾತ್ರೆ ಮಾದರಿಯಾಗಲಿದೆ. ವಿಐಪಿ ಪಾಸ್ ಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಯಾರಿಗೂ ತೊಂದರೆ ಯಾಗದಂತೆ ನೋಡಿಕೊಳ್ಳಲಾಗಿದೆ ಎಂದರು

ಜಾತ್ರೆಗೆ ಪ್ಲಾಸ್ಟಿಕ್ ನಿಷೇಧಿಸಲಾಗಿದೆ. ಗೋಧಿ ಬ್ಯಾಗ್ ಬಳಕೆಗೆ ಒತ್ತು ನೀಡಲಾಗಿದೆ. 25 ಸಾವಿರ ಬ್ಯಾಗ್ ನಲ್ಲಿ ಪ್ರಸಾದ ಹಂಚಲಾಗುತ್ತಿದೆ ಎಂದರು. ಕಾರ್ಯದರ್ಶಿ ಮಂಜುನಾಥ್ ಮಾತನಾಡಿ, ದೇವಸ್ಥಾನದ ಒಳಗೆ ಮತ್ತು ಗಾಂದಿ ಬಜಾರ್ ನಲ್ಲಿ ದೇವಿ ದರ್ಶನಕ್ಕಾಗಿ ಅಲಂಕಾರ ಮಾಡಲಾಗಿದ್ದು,  ಕಳೆದ ಬಾರಿಗಿಂತ ಈ ಬಾರಿ ಸಾರ್ವಜನಿಕ ಮೆಚ್ಚುಗೆ ಪಡೆದಿತ್ತು. ಈ ಬಾರಿ ಎಂ.ಶ್ರೀಕಾಂತ್ ತಮ್ಮ ಸಾಮರ್ಥ್ಯ ಮೀರಿ ವ್ಯವಸ್ಥೆ ಮಾಡಿದ್ದಾರೆ. ಜಾತ್ರೆಗೆ 15 ಉಪಸಮಿತಿ ಮಾಡಿಕೊಳ್ಳಲಾಗಿದೆ ಎಂದರು.

ಕಳೆದ ಬಾರಿ ವ್ಯವಸ್ಥೆ ಮಾಡಿರಲಾಗಿರಲಿಲ್ಲ. ಈ ಬಾರಿ ವಿಶೇಷ ದರ್ಶನದ ಸಾಲನ್ನ ವಿಕಲಚೇತನರು ಮತ್ತು ವಿಐಪಿಗೆ ವಿಶೇಷ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ ಮಾರಿಗದ್ದುಗೆ ಮತ್ತು ಬಜಾರ್ ನಲ್ಲಿ ಅಮ್ಮನ ದರ್ಶನ ಪಡೆಯಲು ಸ್ಥಳದಲ್ಲಿಯೇ ಪಾಸ್ ವ್ಯವಸ್ಥೆ ಮಾಡಲಾಗಿದೆ.  ಕುಟುಂಬಕ್ಕೆ 200 ರೂ ನಿಗದಿ ಪಡಿಸಲಾಗಿದೆ. ದರ್ಶನಕ್ಕೆ ಎರಡು ಸಾಲು ಇರಲಿದೆ. ಜರ್ಮನ್ ಟೆಂಟ್ ಹಾಕಿಸಿ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮಡಲಕ್ಕಿಗೆ ರಾಮಯ್ಯ ನೇತೃತ್ವದ ತಂಡ ಕಾರ್ಯ ನಿರ್ವಹಿಸಲಿದೆ. ಕಾಯಿ ಒಡೆಯಲು ವ್ಯವಸ್ಥೆ ಮಾಡಲಾಗಿದೆ. ಕಾಯಿ ಒಡೆಯಲು ಯಾವುದೇ ಶುಲ್ಕವಿರಲ್ಲ ಎಂದರು. 

ಇಂಟಲಿ ಜೆಂಟ್ ಮಾಹಿತಿ ಪ್ರಕಾರ ಹೆಚ್ಚು ಜನ ಬರಲಿದ್ದಾರೆ. ಮೈನ್ ಮಿಡ್ಲು ಸ್ಕೂಲ್ ನಲ್ಲೂ ಪಾರ್ಕಿಂಗ್ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. 5-10 ಸಾವಿರ ಜನ ಮದ್ಯಾಹ್ನ 3 ಗಂಟೆಯ ವರೆಗೆ ಮಾರಿಕಾಂಬ ದೇವಸ್ಥಾನದಲ್ಲಿ ಐದು ದಿನಗಳಲ್ಲೂ ನೀಡಲಾಗುವುದು. ಗದ್ದಿಗೆಗೆ ಎಡೆ ಹಾಕಲು ಐದು ಜನ ಭಟ್ಟರ ತಂಡ ಮಾಡಲಾಗಿದೆ. ಬೆಳಿಗ್ಗೆ ಐದು ವರೆಯಿಂದ ಬಜಾರ್ ನಲ್ಲಿ ದೇವಿ ದರ್ಶನಕ್ಕೆ ಆರಂಭಿಸಲಾಗುವುದು ಎಂದರು. 

ಎಲ್ಲಾ ಸಮಿತಿ ಜಾತ್ರೆಗಾಗಿ ದೇಣಿಗೆ ಸಂಗ್ರಹಿಸಿಲ್ಲ. ಜನರೆ ಸ್ವಯಂಘೋಷಿತವಾಗಿ ಅಕ್ಕಿ ಬೇಳೆ ನಗದನ್ನ ನೀಡುತ್ತಿದ್ದಾರೆ. ಹಿಂದೆಂದು ಕಂಡರಿಯದ ರೀತಿಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಅಲಂಕಾರ ವ್ಯವಸ್ಥೆಗೆ ವಿಶೇಷವಾಗಿ ಕೇರ್ ಮಾಡಲಾಗಿದೆ. ಮಳಿಗೆಗಳನ್ನ ದೇವಸ್ಥಾನ ಸುತ್ತಮುತ್ತ ತ್ರಿಭುಜಾಕಾರದಲ್ಲಿ ಇರಲ್ಲ. ವೀರಭದ್ರ  ಚಲನಚಿತ್ರ ಮಂದಿರದ ಬಳಿ ಜಾಯಿಂಟ್ ವೀಲ್ ಹಾಕಲಾಗಿದೆ. ಬಜಾರ್ ಮತ್ತು ದೇವಸ್ಥಾನದ ಸುತ್ತ ಸಿಸಿಟಿವಿ, 8 ವಾಚ್ ಟವರ್ ನಿರ್ಮಿಸಲಾಗಿದೆ. ವಾರ ಕರೆಂಟ್ ಕಟ್ ಆಗದಂತೆ ಮೆಸ್ಕಾಂ ಅಧಿಕಾರಿಗಳಿಗೆ ಕೇಳಿಕೊಳ್ಳಲಾಗಿದೆ. ಪಾಲಿಕೆ ಆಯುಕ್ತರಾದ ಮಾಯಣ್ಣ ಗೌಡರ ಸಹಾಯವನ್ನ ಕೋರಲಾಗಿದೆ. 

ಐದು ದಿನ ಕೋಟೆ ನಿವಾಸಿಗಳಿಗೆ ತಮ್ಮ ವಾಹನವನ್ನ ತೆಗೆಯದಂತೆ ಸಮಿತಿ ಕೋರಿದೆ. ಗದ್ದಿಗೆಗೆ ಬರುವ ವಾಹನಕ್ಕೆ ಕೋಟೆ ರಸ್ತೆಯಲ್ಲಿರುವ ಸಿಟಿಕೊಆಪ ಎಂದರು. 

All set for the Mari fair  

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close