ಶರಾವತಿ ಪಂಪ್ಡ್ ಸ್ಟೋರೇಜ್ ವಿರುದ್ಧ ಫೆ.12 ರಂದು ಪ್ರತಿಭಟನೆ, ಆಗುಂಬೆಯಲ್ಲಿ ಟನಲ್ ಬೇಡ ಎಂದ ಪರಿಸರಾಸಕ್ತರು! Protest against Sharavathi Pumped Storage on Feb. 12th

 SUDDILIVE || SHIVAMOGGA

ಶರಾವತಿ ಪಂಪ್ಡ್ ಸ್ಟೋರೇಜ್ ವಿರುದ್ಧ ಫೆ.12 ರಂದು ಪ್ರತಿಭಟನೆ, ಆಗುಂಬೆಯಲ್ಲಿ ಟನಲ್ ಬೇಡ ಎಂದ ಪರಿಸರಾಸಕ್ತರು!Protest against Sharavathi Pumped Storage on Feb. 12th, environmentalists say no to tunnel in Agumbe!

Sharavathi, Pumpedstorage


ಶರವತಿ ಪಂಪ್ ಸ್ಟೋರೇಜ್ ಯೋಜನೆ ವಿರೋಧಿಸಿ ಪರಿಸರಕ್ಕಾಗಿ ನಾವು ಮತ್ತು ರಾಷ್ಟ್ರಭಕ್ತರ ಬಳಗದ ವತಿಯಿಂದ ಫೆಬ್ರವರಿ 12ರಂದು ಗುರುವಾರ ಬೆಳಗ್ಗೆ 10 ಗಂಟೆಗೆ ಗೋಪಿರುತದಿಂದ ಜಿಲ್ಲಾಧಿಕಾರಿಗಳ ಕಚೇರಿಯವರಿಗೆ ಬೃಹತ್ ಪ್ರತಿಭಟನಾ ಜಾತವನ್ನು ಹಮ್ಮಿಕೊಳ್ಳಲಾಗಿದೆ

ಈ ಕುರಿತು ಸುದ್ದಿಗೋಷ್ಠಿ ನಡೆಸಿದ ನಿವೃತ್ತ ಪ್ರೊಫೆಸರ್ ಡಿಎಂ ಕುಮಾರಸ್ವಾಮಿ ಅವರು ಯೋಜನೆಯಲ್ಲಿ 16,000 ಮರಗಳನ್ನು ಪಡೆಯುವ ಪ್ರಸ್ತಾವನೆ ಇದೆ ವನ್ಯಜೀವಿಗಳ ಆವಾಸಸ್ಥಾನಕ್ಕೆ ದಕ್ಕೆ ಬರುತ್ತಿದೆ ಭೂಕುಸಿತ ಜಲ ಮಾಲಿನ್ಯ ನದಿ ಕಣಿವೆಗಳು ಹುಳು ತೊಂಬು ಕೊಳ್ಳುವ ಸಾಧ್ಯತೆ ಇದೆ. ಯೋಜನೆಯು ಘೋಷಿತ ಸಿಂಹಬಾಲದ ತಿಂಗಳಿಕ ಅಭಯಾರಣ್ಯದ ಹೃದಯ ಭಾಗದಲ್ಲಿ ಜಾರಿಯಾಗುತ್ತಿರುವುದರಿಂದ ಇದು ವನ್ಯಜೀವಿ ಕಾಯ್ದೆ 1972ರ ಆಶಯಕ್ಕೆ ವಿರುದ್ಧವಾಗಿದೆ ಎಂದರು.

ಯೋಜನೆಯ ಅವಶ್ಯಕತೆ ಕುರಿತು ಯಾವುದೇ ಸಮರ್ಥ ದಾಖಲೆ ಇರುವುದಿಲ್ಲ ಮತ್ತು ಈ ಯೋಜನೆಯ ಪರ್ಯಾಯಮಾರ್ಗಗಳ ಕುರಿತು ತುಲಾನಾತ್ಮಕ ಅಧ್ಯಯನ ನಡೆಸಿಲ್ಲ. ಜನತೆಯ ಮೇಲೆ ಆರ್ಥಿಕ ಹೊರೆ ಹೊರೆಸುವ ಯೋಜನೆ ಇದಾಗಿದೆ ಬ್ಯಾಟರಿ ಸ್ಟೋರೇಜ್ ತಂತ್ರಜ್ಞಾನವು ಪಂಪುಡ್ ಸ್ಟೋರೇಜ್ ತಂತ್ರಜ್ಞಾನಕ್ಕಿಂತ ಲಾಭದಾಯಕ ಮತ್ತು ಪರಿಸರಸ್ತೆಯಾಗಿದೆ ಶರಾವತಿ ಕಣಿವೆ ಯೋಜನೆಗಳಿಂದ ಈಗಾಗಲೇ ಸಂತ್ರಸ್ತರಿಗಿರುವ ಸಾವಿರಾರು ಕುಟುಂಬಗಳನ್ನು ಮತ್ತು ನದಿ  ಕೆಳಭಾಗದ ಜನರನ್ನು ಇದು ಮತ್ತಷ್ಟು ಸಂಕಷ್ಟಕ್ಕೆ ದುಡುತ್ತಿದೆ. ಯೋಜನಾ ಪ್ರದೇಶದಲ್ಲಿರುವ ಐತಿಹಾಸಿಕ ಸ್ಮಾರಕಗಳನ್ನು ಮತ್ತು ಸ್ಥಳಗಳನ್ನು ಯೋಜನೆ ನಾಶ ಮಾಡುತ್ತಿದೆ. ಹಾಗಾಗಿ ಈ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ಪ್ರತಿಭಟನೆಯಲ್ಲಿ ಮಾಜಿ ಡಿಸಿಎಂ ಕೆ ಎಸ್ ಈಶ್ವರಪ್ಪ ಪರಿಸರಕ್ಕಾಗಿ ನಾವು ಸಂಘಟನೆಯ ರಾಜ್ಯಾಧ್ಯಕ್ಷ ಏ ಟಿ ರಾಮಸ್ವಾಮಿ ಉಪಾಧ್ಯಕ್ಷ ರಾದ ಕವಿತಾ ಎಸ್ ಎಲೆದಳ್ಳಿ ಪ್ರಧಾನ ಕಾರ್ಯದರ್ಶಿಗಳಾದ ಪರಶುರಾಮ ಗೌಡ ರಾಷ್ಟ್ರ ಭಕ್ತರ ಬಳಗದ ಕೆ ಕಾಂತೇಶ್ ಬಂಗಾರುಮುಕ್ಕಿ ಮಠದ ಶ್ರೀ ಮಾರುತಿ ಸ್ವಾಮಿಗಳು ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.

ಮಾಜಿ ಡಿಸಿಎಂ ಈಶ್ವರಪ್ಪ ಅವರು ಮಾತನಾಡಿ ಭೂಮಿ ಮೇಲೆ ಆಗುತ್ತಿರುವ ಅತ್ಯಾಚಾರ, ಪ್ರಾಣಿ ಪಕ್ಷ ನಾಶ, 10200 ಕೋಟಿ ಲೂಟಿ ಮಾಡುವ ಯೋಜನೆಯಿದಾಗಿದೆ. ಕೇಂದ್ರ ಸರ್ಕಾರದ ಫೈನಲ್ ಅಪ್ರೂವಲ್ ಆಗಿಲ್ಲ. ಪರಿಸರ ಎಕ್ಸಪರ್ಟ್ ಗಳು ಕೆಪಿಎಸ್ ಸಿ ಅಧಿಕಾರಿಗಳ ಜೊತೆ ಚರ್ಚಿಸಲಾಗಿದೆ. 

12 ನೇ ತಾರಿಕಿನಲ್ಲಿ ಉತ್ತರ ಕೊಡುವುದಾಗಿ ಡಿಸಿ ಪ್ರಭುಲಿಂಗ ಕವಳಿಕಟ್ಟಿ ಹೇಳಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಇದರ ಮಾಹಿತಿ ಇದ್ದಂಗೆ ಇಲ್ಲ. ಇದರ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಇಂಧನ ಸಚಿವ ಜಾರ್ಜ್ ಗಮನಕ್ಕೂ ತರುತ್ತೇವೆ. ಯಾರೂ ಕೇಳದಿದ್ದರೆ ಸುಪ್ರೀಂ ಕೋರ್ಟ್ ವರೆಗೂ ಹೋಗುತ್ತೇವೆ ಎಂದರು.


ಟನಲ್ ಬೇಡ


ಪರಿಸರ ತಜ್ಞ ಆಗುಂಬೆಯಲ್ಲಿ ಟನಲ್ ಬೇಡವಾಗಿದೆ. ರಸ್ತೆ ಸಂಚಾರದ ಒತ್ತಡದ ಮೇರೆಗೆ ಟನಲ್ ರಚಿಸಲಾಗುತ್ತಿದೆ ಎಂಬುದುದನ್ನ‌ ಮಾಧ್ಯಮಗಳಲ್ಲಿ ತಿಳಿಯಲ್ಲಪಟ್ಟಿದ್ದೇನೆ. ಟನಲ್  ಭೂಕುಸಿತವಾಗುತ್ತೆ. ಇವುಗಳ ಜಾಗ ಸ್ಥಾನಪಲ್ಲಟವಾಗಲಿದೆ.  ಟನಲ್ ಗಿಂತ ಪಿಲ್ಲರ್ ಹಾಕಿ ರಸ್ತೆ ಅಗಲೀಕರಣ. ಮಾಡುವುದು ಉಪಯುಕ್ತವಾಗಲಿದೆ.  ಆದರೆ  ಇದರ ಸಾಧಕ ಬಾಧಕಗಳ ಬಗ್ಗೆ ಮಾಹಿತಿ ಬೇಕಿದೆ. ರಸ್ತೆ ಸಂಚಾರದ ಒತ್ತಡದ ಮೇಲೂ ರಾಜಕಾರಣವೂ ನಡೆದಿದೆ ಎಂಬ ಒಳಗುಟ್ಟು ಬಿಟ್ಟುಕೊಟ್ಟರು. 

ಆದರೆ ಆಗುಂಬೆಯಲ್ಲಿ 3500 ಕೋಟಿ ರೂ ವೆಚ್ಚದಲ್ಲಿ ಮೇಗರವಳ್ಳಿಯಿಂದ ಮಡಮಕ್ಕಿಯ ವರೆಗೆ ನಡೆಯುವ ಟನಲ್ ಗೆ ಒಂದು ವಾರ 10 ದಿನಗಳಲ್ಲಿ ಡಿಪಿಆರ್ ರೆಡಿಯಾಗುವ ಸಾಧ್ಯತೆಯಿದೆ. 

Protest against Sharavathi Pumped Storage on Feb. 12th

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close