SUDDILIVE || SHIVAMOGGA
ವಿದ್ಯುತ್ ಶಾಕ್ ನಿಂದ ಮೃತ ಪಟ್ಟ ಪ್ರಕರಣ, ಇಬ್ಬರಿಗೆ ಶಿಕ್ಷೆ- Two persons are sentenced for death due to electric shock case
ವಿದ್ಯುತ್ ಶಾಕ್ ನಿಂದ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರಿಗೆ ಮಾನ್ಯ ಘನ ನ್ಯಾಲಯ ಇಬ್ಬರಿಗೆ ಶಿಕ್ಷೆ ನೀಡಿ ತೀರ್ಪು ನೀಡಿದೆ.
ಗಿರೀಶ್ ರವರ ತಂದೆ ಗಾಮಪ್ಪ ಎಂಬುವರು ದಿನಾಂಕ: 25-09-2021 ರಂದು ರಾತ್ರಿ 08-45 ರ ಸಮಯದಲ್ಲಿ ತಮ್ಮ ಮನೆಯ ಹಿಂಭಾಗದಲ್ಲಿರುವ ಲಕ್ಷ್ಮಣಪ್ಪ ಮತ್ತು ಲಿಂಗಪ್ಪರವರ ಎಂಬುವರ ಜಮೀನಿಗೆ ಬಹಿರ್ದೆಸೆಗೆ ಹೋಗಿದ್ದರು. ಆರೋಪಿತರು ಜಮೀನಿನಲ್ಲಿ ಬೋರ್ ವೆಲ್ ಹಾಕಿಸಿದ್ದು ಅದಕ್ಕೆ ವಿದ್ಯುತ್ ಇಲಾಖೆಯಿಂದ ಪರವಾನಿಗೆ ಪಡೆಯದೇ ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಪಡೆದಿದ್ದು, ಜಮೀನಿನ ಕೇಳಭಾಗ ಹಾಗೂ ಮೇಲ್ಬಾಗದಲ್ಲಿ ತಂತಿ ಬೇಲಿಗೆ ಬೋರ್ ವೆಲ್ ಮೋಟಾರ್ ನ ವಿದ್ಯುತ್ ಬೋರ್ಡ್ ನಿಂದ ವಿದ್ಯುತ್ ಸಂಪರ್ಕ ನೀಡಿದ್ದು, ಗಾಮಪ್ಪರವರು ಜಮೀನು ಮದ್ಯೆ ಕಟ್ಟಿದ್ದ ಕಬ್ಬಿಣದ ತಂತಿ ಬೇಲಿಯನ್ನು ದಾಟುವಾಗ ಕಾಲುಗಳು ತಾಗಿ ವಿದ್ಯುತ್ ಶಾಕ್ ತಗಲಿ ಸ್ಥಳದಲ್ಲಿಯೇ ಮೃತ ಪಟ್ಟಿದ್ದರು.
ಆರೋಪಿತರ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕಾಗಿ ನೀಡಿದ ದೂರಿನ ಮೇರೆಗೆ ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಆಗಿನ ತನಿಖಾಧಿಕಾರಿಗಳಾದ ಪಿಐ ಅಭಯ್ ಪ್ರಕಾಶ್ ಸೋಮನಾಳ ತನಿಖೆ ಪೂರೈಸಿ, ಘನ ನ್ಯಾಯಾಲಂಯಕ್ಕೆ ಆರೋಪಿತರ ವಿರುದ್ಧ ದೋಷಾರೋಪಣ ಪತ್ರವನ್ನು ಸಲ್ಲಿಸಿದ್ದರು.
ಘನ ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ ಶಾಂತರಾಜ್ ಸರ್ಕಾರಿ ಅಭಿಯೋಜಕರವರು ವಾದ ಮಂಡಿಸಿದ್ದು 3 ನೇ ಹೆಚ್ಚುವರಿ ಘನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿವಮೊಗ್ಗದಲ್ಲಿ ಪ್ರಕರಣದ ವಿಚಾರಣೆ ನಡೆಸಿದ್ದರು. ಆರೋಪಿತರ ವಿರುದ್ಧ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ಮಾನ್ಯ ನ್ಯಾಯಾಧೀಶರಾದ ಶ್ರೀ ಯಶವಂತ ಕುಮಾರ್ ರವರು ಇಂದು 1) ಲಕ್ಷ್ಮಣಪ್ಪ ಬಿನ್ ಹುಚ್ಚಪ್ಪ, 48 ವರ್ಷ, ವಾಸ ಕೊನೆಹೊಸುರು ಗ್ರಾಮ, ಶಿವಮೊಗ್ಗ. 2) ಲಿಂಗಪ್ಪ ಬಿನ್ ಹುಚ್ಚಪ್ಪ, 43 ವರ್ಷ, ವಾಸ ಕೊನೆಹೊಸುರು ಗ್ರಾಮ, ಶಿವಮೊಗ್ಗ. ಇವರಿಗೆ 1 ವರ್ಷ ಕಾರಾವಾಸ ಮತ್ತು 11,000 ರೂ ದಂಡವನ್ನು ವಿಧಿಸಿ ಆದೇಶಿಸಿರುತ್ತದೆ.
Two persons are sentenced for death due to electric shock case
