ಕಂದಾಯ ಇಲಾಖೆಯಲ್ಲಿ ಭೂ ಸುರಕ್ಷ ಯೋಜನೆ ಅಡಿ ದಾಖಲೆಗಳು ಡಿಜಿಟಲೈಜೇಷನ್-ಕೃಷ್ಣ ಭೈರೇಗೌಡ-Records digitization under the Land Security Scheme in the Revenue Department-Krishna Bhairegowda

 SUDDILIVE || SHIVAMOGGA

ಕಂದಾಯ ಇಲಾಖೆಯಲ್ಲಿ ಭೂ ಸುರಕ್ಷ ಯೋಜನೆ  ಅಡಿ ದಾಖಲೆಗಳು ಡಿಜಿಟಲೈಜೇಷನ್-ಕೃಷ್ಣ ಭೈರೇಗೌಡ-Records digitization under the Land Security Scheme in the Revenue Department-Krishna Bhairegowda    

Krishna, Bhairegowda


ಆರುವರೆ ಸಾವಿರ ವಸತಿ ಪ್ರದೇಶದಲ್ಲಿರುವ 3 ಲಕ್ಷ ಕುಟುಂಬಗಳಿಗೆ  ಫೆ.14 ರಂದು ಹಾವೇರಿಯಲ್ಲಿ ನಡೆಯುವ ಸರ್ಕಾರದ ಸಾಧನ ಕಾರ್ಯಕ್ರಮದಲ್ಲಿ ಹಕ್ಕು ಪತ್ರಗಳನ್ನ ನೀಡಲಾಗುವುದು ಎಂದು ಕಂದಾಯ ಸಚಿವರಾದ ಕೃಷ್ಣಭೈರೆಗೌಡರು ಶಿವಮೊಗ್ಗದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. 

6½ ಸಾವಿರ ವಸತಿ ಪ್ರದೇಶದಲ್ಲಿ ವಾಸವಾಗಿದ್ದರೂ ಹಕ್ಕುಪತ್ರಗಳಿರಲಿಲ್ಲ. ದಾಖಲೆ ರಹಿತ ವಸತಿ ಪ್ರದೇಶಗಳಾಗಿವೆ. ವಾಸವಾಗಿರುವ ಜನರಿಗೆ ದಾಖಲೆ ಇರಲಿಲ್ಲ. ಕಳೆದ 5-60 ವರ್ಷದಿಂದ ವಾಸವಾಗಿದ್ದ ಜನರಿಗೆ ಹಕ್ಕು ಪತ್ರವಿರಲಿಲ್ಲ. ಈ ಪ್ರದೇಶಗಳನ್ನ ಕಂದಾಯ ಭೂಮಿ ಎಂದು ಘೋಷಿಸಿ  ಹಕ್ಕುಪತ್ರ ನೀಡಲಾಗುತ್ತಿದೆ. ಇದುವರೆಗೂ 2.20 ಲಕ್ಷ ಜನರಿಗೆ ಹಕ್ಕುಪತ್ರ ನೀಡಲಾಗಿದೆ. ಕಳೆದ ವರ್ಷ 36 ಸಾವಿರ ಕುಟುಂಬಗಳಿಗೆ ಹಕ್ಕು ಪತ್ರ ನೀಡಲಾಗಿದೆ. ಈ ವರ್ಷ 1 ಲಕ್ಷದ 6 ಸಾವಿರ ಜನರಿಗೆ ಹಕ್ಕುಪತ್ರ ನೀಡಲಾಗುವುದು ಎಂದರು. 

ನಾಳೆ ನಡೆಯುವ ಹಾವೇರಿ ಕಾರ್ಯಕ್ರಮಕ್ಕೆ ರಾಹುಲ್ ಗಾಂಧಿ ಬರಲ್ಲ. ಒಂದು ಲಕ್ಷ ಕುಟುಂಬಗಳಿಗೆ ಹಕ್ಕು ಪತ್ರ ನೀಡುವ ಕಾರ್ಯಕ್ರಮ ಅದಾಗಿದೆ. ಹಕ್ಕುಪತ್ರವನ್ನು ಹಾವೇರಿಯಲ್ಲಿ ಫೆಬ್ರವರಿ 14ರಂದು ಸಮರ್ಪಣೆ ಮಾಡುತ್ತಿದ್ದೇವೆ. ಇದು ಸರ್ಕಾರದ 1000 ದಿನಗಳ ಪೂರೈಕೆಯ ಹಿನ್ನಲೆಯ ನೀಡಲಾಗುವುದು. 

ಅರಣ್ಯ ಇಲಾಖೆ ಒಪ್ಪುತ್ತಿಲ್ಲ

ಇತಿಹಾಸದಲ್ಲಿ ಸಿಎಂ ಸಿದ್ದರಾಮಯ್ಯ ಸುದೀರ್ಘ ಕೆಲಸ ಮಾಡಿದ ಮುಖ್ಯಮಂತ್ರಿ ಗಳಾಗಿದ್ದಾರೆ. ಮಲೆನಾಡಿನ ಕಾನು ಸೊಪ್ಪಿನ ಬೆಟ್ಟಗಳಿಗೆ ವಾಸಿಸುವವರಿಗೆ ಹಕ್ಕು ಪತ್ರ ಇಡಲು ಅರಣ್ಯ ಇಲಾಖೆಯ ಸಹಮತಿ ಸಿಕ್ಕಿಲ್ಲ. ಸುಪ್ರೀಂಕೋರ್ಟ್ ನಿರ್ದೇಶನದ ಮೇರೆ ಅರಣ್ಯ ಇಲಾಖೆ ಅನುಮತಿ ನೀಡುತ್ತಿಲ್ಲ. ಕಾನೂನಾತ್ಮಕವಾಗಿ ಪರಿಹಾರ ಸಿಕ್ಕರೆ ಮಾತ್ರ ಹಕ್ಕು ಪತ್ರ ಕೊಡಲು ಸಾಧ್ಯ ಎಂದರು. 

ಅರಣ್ಯ ಇಲಾಖೆ ಕೊಡಲು ಬರುವದಿಲ್ಲ ಎಂಬ ನಿಲುವು ತಳೆದಿದ್ದಾರೆ. ಸುಪ್ರೀಂ ಕೋರ್ಟ್ ನಲ್ಲೂ ಕೂಡ ಹಕ್ಕುಪತ್ರ ಕೊಡಲು ಬರುವುದಿಲ್ಲ ಎಂಬ ತೀರ್ಪುಗಳು ಬಂದಿವೆ ಎಂದು ಹೇಳಿದರು. 

ದಾಖಲಾತಿ ಡಿಜಿಟಲೈಜೇಷನ್

ರಾಜ್ಯದಲ್ಲಿ ಕಂದಾಯ ಇಲಾಖೆಯ ಸರ್ವರ್ ಗಳ ಸಮಸ್ಯೆ ಇಲ್ಲ. ದಿನಕ್ಕೆ 9,000 ದಿಂದ 13 ಸಾವಿರದವರೆಗೆ ಪ್ರತಿದಿನ ರಿಜಿಸ್ಟ್ರೇಷನ್ ಆಗುತ್ತಿದೆ. ಮಧ್ಯದಲ್ಲಿ ಒಂದೊಂದು ದಿನ ಸಮಸ್ಯೆ ಆಗುತ್ತಿದೆ ಅದನ್ನು ಕೂಡ ಸರಿಪಡಿಸುವ ಕೆಲಸ ಆಗುತ್ತಿದೆ. ಕಂದಾಯ ಇಲಾಖೆಯಲ್ಲಿ ದಾಖಲಾತಿ ಡಿಜಿಟಲೈಸ್ ಮಾಡಲಾಗುತ್ತಿದೆ. ದಾಖಲೆಗಳನ್ನು ತಿದ್ದುವ ಕಳೆದುಹೋಗುವ ನಕಲಿ ಮಾಡುವ ಕೆಲಸ ಆಗುತ್ತಿದೆ ಎಂದು ತಿಳಿಸಿದರು. 

ಜನರು ದಾಖಲೆಗಳನ್ನು ಪಡೆದುಕೊಳ್ಳಲು ಅಲೆದಾಟ ಶೀಥಲಾವಸ್ಥೆಯಲ್ಲಿರುವ ದಾಖಲೆಗಳ ಹಿನ್ನೆಲೆಯಲ್ಲಿ 67500 ಸಾವಿರ ಕೋಟಿ ಪುಟಗಳ ಸ್ಕ್ಯಾನಿಂಗ್ ಆಗಿದೆ. ಭೂ ಸುರಕ್ಷಾ ಯೋಜನೆ ಜಾರಿಗೆ ತಂದಿದ್ದೇವೆ. 100 ತಾಲೂಕುಗಳಲ್ಲಿ ಸ್ಕ್ಯಾನಿಂಗ್ ಕಂಪ್ಲೀಟ್ ಆಗಿದೆ. ಆನ್ ಲೈನ್ ನಲ್ಲಿ ಭೂ ಸುರಕ್ಷಾ ದಲ್ಲಿ ಜನರು ನೇರವಾಗಿ ಅಪ್ಲೈ ಮಾಡಿ ಮನೆಯಲ್ಲಿಯೇ ದಾಖಲೆಗಳನ್ನು ಪಡೆಯಬಹುದು ಎಂದರು. 


ವಂಶವೃಕ್ಷ ನಕಲಿ ಮಾಡಲು ಬರೊಲ್ಲ

ಮುಂದಿನ ವರ್ಷ ಸರ್ವೆ ಕಚೇರಿ ಹಾಗೂ ರಿಜಿಸ್ಟರ್ ಕಚೇರಿಗಳಲ್ಲಿ ಸ್ಕ್ಯಾನಿಂಗ್ ಕಾರ್ಯ ಪೂರ್ಣಗೊಳ್ಳಲಿದೆ. ಬೆರಳ ತುದಿಯಲ್ಲಿ ಜನತೆಗೆ ದಾಖಲೆ ಸಿಗಲಿದೆ. ವಂಶವೃಕ್ಷಗಳನ್ನು ನಕಲಿ ಮಾಡುತ್ತಿರುವ ವಿಚಾರಕ್ಕೂ ಪ್ರತಿಕ್ರಿಯಿಸಿದ ಅವರು ನಾವು ನೀಡುವ ವಂಶವೃಕ್ಷ ಆನ್ ಲೈನ್ ನಲ್ಲಿ ಇದೆ ಅದು ನಕಲಿ ಮಾಡಲು ಬರಲ್ಲ ಎಂದರು. 

ಬ್ಯಾಂಕ್ ಮತ್ತು ಕೋರ್ಟ್ಗಳಲ್ಲಿ ವಂಶವೃಕ್ಷವನ್ನು ಆನ್ಲೈನಲ್ಲಿ ಚೆಕ್ ಮಾಡಬಹುದು ಎಂದ ಅವರು ಮೊದಲು ಮಾಧ್ಯದವರು ಕೇಳಿದ ಶಾಸಕರ ವಿದೇಶ ಪ್ರವಾಸ, ಸಿಎಂ ಬದಲಾವಣೆ ಮೊದಲಾದ ರಾಜಕೀಯ ವಿಷಯದ ಕುರಿತು ಕಂದಾಯ ಸಚಿವ ಕೃಷ್ಣ ಬೈರೇಗೌಡರು ಮಾಧ್ಯಮಗಳಿಗೆ ಪ್ರತಿಕ್ರಿಯೆಸಲು ನಿರಾಕರಿಸಿದ್ದರು. ಗೊತ್ತಿಲದ ವಿಷಯಗಳಿಗೆ ನನ್ನ ಪ್ರತಿಕ್ರಿಯಿಸುವುದಿಲ್ಲ ಎಂದು ಸ್ಪಷ್ಟವಾಗಿ ನಿರಾಕರಿಸಿದ್ದಾರೆ.

Records digitization under the Land Security Scheme in the Revenue Department-Krishna Bhairegowda    

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close