ಎರಡು ಪ್ರತ್ಯೇಕ ರಸ್ತೆ ಅಪಘಾತ ಮೂವರು ಬೈಕ್ ಸವಾರರು ಸಾವು-Three bikers killed in two separate road accidents

 SUDDILIVE || SHIKARIPURA

ಎರಡು ಪ್ರತ್ಯೇಕ ರಸ್ತೆ ಅಪಘಾತ ಮೂವರು ಬೈಕ್ ಸವಾರರು ಸಾವು-Three bikers killed in two separate road accidents    

Road, accident
ಶಿಕಾರಿಪುರದ ಅಂಬರಗೊಪ್ಪ-ಕುಟ್ರಳ್ಳಿ ನಡುವೆ ನಡೆದ ಘಟನಸ್ಥಳಕ್ಕೆ ಪೊಲೀಸರ ಭೇಟಿ



ಶಿವಮೊಗ್ಗದ ತಾವರೆಕೊಪ್ಪದ ಬಳಿ ನಡೆದ ಅಪಘಾತದಲ್ಲಿ ಮೃತ ಪಟ್ಟ ನಾಗರಾಜ್


ಎರಡು ಪ್ರತ್ಯೇಕ ರಸ್ತೆ ಅಪಘಾತದಲ್ಲಿ ಮೂವರು ಬೈಕ್ ಸವಾರರು ಸಾವನ್ನಪ್ಪಿರುವುದು ತಿಳಿದು ಬಂದಿದೆ. 

ಶಿಕಾರಿಪುರ ತಾಲೂಕಿನ ಅಂಬರಗೊಪ್ಪ ಕ್ರಾಸ್ ನಿಂದ ಕುಟ್ರಳ್ಳೀ ಫಾರಂ ಮಧ್ಯೆ ರಸ್ತೆಯಲ್ಲಿ ಹೋಗುತ್ತಿದ್ದ ಬೈಕ್ ಗೆ ಹಿಂದಿನಿಂದ ಬಂದ ಬುಲೇರೋ ವಾಹನದ ಚಾಲಕನು ಅಪಘಾತ ಪಡಿಸಿದ್ದಾರೆ. ಬೈಕ್ ನಲ್ಲಿದ್ದ ಸವಾರ ಹಾಗೂ ಹಿಂಬದಿ ಸವಾರರಿಬ್ಬರೂ ಮೃತ ಪಟ್ಟಿದ್ದಾರೆ.

ಮೃತಪಟ್ಟವರನ್ನ ಶಿವರಾಜ್ ತಂದೆ ಈರಪ್ಪ (42) ಕಿರಣ ತಂದೆ ಗೋಪಾಲಪ್ಪ (40) ಎಂದು ಗುರುತಿಸಲಾಗಿದೆ. ಇಬ್ಬರೂ ಭದ್ರಾಪುರದ ನಿವಾಸಿಗಳಾಗಿದ್ದು ಕಟ್ಟಡಕಾರ್ಮಿಕರಾಗಿದ್ದಾರೆ. ಉಡುಗಣಿ ಜಾತ್ರೆಗೆ ಹೋಗಿ ರಾತ್ರಿ 11-30 ರ ವೇಳೆಯಲ್ಲಿ ಕುಟ್ರಳ್ಳಿ ಕ್ರಾಸ್ ಬಳಿ ಬೊಲೆರೋ ಡಿಕ್ಕಿ ಹೊಡೆದು ಅರ್ಧ ಮೀಟರ್ ದೂರ ಎಳೆದುಕೊಂಡು ಹೋಗಿದೆ. ಮತ್ತೊಬ್ಬ ದ್ವಿಚಕ್ರ ವಾಹನ ಸವಾರರು ಇದನ್ನ ನೋಡಿ ಬೊಲೆರೋ ವಾಹನ ಸವಾರರು ನಿಲ್ಲಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಪ್ರಕರಣ ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 

ಇಂದು ಬೆಳಿಗ್ಗೆ 5-30 ಕ್ಕೆ ತಾವರೆಕೊಪ್ಪದ ಬಳಿ ಸರಣಿ ಅಪಘಾತವಾಗಿದ್ದು, ಸರಣಿ ಅಪಘಾತದಲ್ಲಿ ತಮ್ಮಡಿ ಹಳ್ಳಿ ಗ್ರಾಮದ ನಿವಾಸಿ ಹಾಗೂ ಬೈಕ್ ಸವಾರ ನಾಗರಾಜ್ (60) ಎಂಬಾತ ಸಾವುಕಂಡಿದ್ದಾನೆ. ಶಿವಮೊಗ್ಗದಿಂದ ತಮಡಿಹಳ್ಳಿ ಗ್ರಾಮಕ್ಕೆ ಹೋಗುವಾಗ ಈ ಘಟನೆ ನಡೆದಿದೆ. 

Three bikers killed in two separate road accidents

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close