ಕಾರ್ಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ‘ಕೆಂಪು ಕಲ್ಲು’ ದಂಧೆ-ಪೊಲೀಸರ ವಿರುದ್ದ ಹಣಕ್ಕೆ ಬೇಡಿಕೆ ಆರೋಪ-'Red stone' racket in Kargal police station limits - police accused of demanding money

SUDDILIVE || SAGARA

ಕಾರ್ಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ‘ಕೆಂಪು ಕಲ್ಲು’ ದಂಧೆ-ಪೊಲೀಸರ ವಿರುದ್ದ ಹಣಕ್ಕೆ ಬೇಡಿಕೆ ಆರೋಪ-'Red stone' racket in Kargal police station limits - police accused of demanding money     

Red, stone

ತಾಲ್ಲೂಕಿನ ಕಾರ್ಗಲ್ ಆರಕ್ಷಕ ಠಾಣಾ ವ್ಯಾಪ್ತಿಯ ಕೊಗಾರು ಎಂಬಲ್ಲಿ ಕಳೆದ ಹಲವು ಸಮಯದಿಂದ ಕೆಂಪು ಕಲ್ಲು ಕ್ವಾರೆ ದಂಧೆ ಎಗ್ಗಿಲ್ಲದೆ ನಡೆಯುತ್ತಿದ್ದರೂ ತಿಂಗಳಿಂದ ಕಣ್ಣು ಮುಚ್ಚಿ ಕುಳಿತಿದ್ದ ಪೊಲೀಸ್ ಇಲಾಖೆ ಇದೀಗ ಏಕಾಏಕಿ ಕಾರ್ಯಾಚರಣೆಗೆ ಇಳಿದಿರುವುದು ಸಾರ್ವಜನಿಕರ ಸಂಶಯಕ್ಕೆ ಕಾರಣವಾಗಿದೆ.

ಬ್ಯಾಕೋಡು ಸಮೀಪದ ಸಸಿಗೊಳ್ಳಿ ಬಳಿ ಶುಕ್ರವಾರ ಬೆಳಿಗ್ಗೆ ಕಲ್ಲು ತುಂಬಿದ ಲಾರಿಯನ್ನು ತಡೆದ ಪೊಲೀಸರು, ಪ್ರಕರಣ ದಾಖಲಿಸದೆ 20 ಸಾವಿರ ರೂಪಾಯಿ ಹಣಕ್ಕಾಗಿ ಬೇಡಿಕೆಯಿಟ್ಟಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

​ಘಟನೆಯ ಹಿನ್ನೆಲೆ:

​ತಾಳಗುಪ್ಪದಿಂದ  ಕೆಂಪು ಕಲ್ಲನ್ನು ತುಂಬಿಕೊಂಡು ಸಾಗುತ್ತಿದ್ದ ಲಾರಿಯನ್ನು ಸಸಿಗೊಳ್ಳಿ ಬಳಿ ತಡೆದ ಪೊಲೀಸರು, ತಾಳಗುಪ್ಪದ ಮೂಲದ ಹೇಮಂತ್ ಎಂಬುವರಿಗೆ ಸೇರಿದ ಲಾರಿಯನ್ನು ವಶಕ್ಕೆ ಪಡೆದಿದ್ದಾರೆ. ಲಾರಿಯನ್ನು ಬ್ಯಾಕೋಡು ಠಾಣೆಯ ಪಕ್ಕದ ಖಾಲಿ ಜಾಗದಲ್ಲಿ ನಿಲ್ಲಿಸಲಾಗಿದ್ದು, ಈವರೆಗೆ ಯಾವುದೇ ಅಧಿಕೃತ ಪ್ರಕರಣ ದಾಖಲಾಗಿಲ್ಲ ಎಂದು ಪೋಲಿಸ್ ಇಲಾಖೆ ತಿಳಿಸಿದೆ. 

​ಲಂಚದ ಬೇಡಿಕೆ ಮತ್ತು ಸಾರ್ವಜನಿಕರ ಆಕ್ರೋಶ:

​ಲಾರಿಯನ್ನು ಬಿಡಲು ಪೊಲೀಸರು 2,0000 ರೂಪಾಯಿ ಹಣದ ಬೇಡಿಕೆ ಇಟ್ಟಿದ್ದಾರೆ ಎಂದು ಲಾರಿಯ ಚಾಲಕ ದೂರಿದ್ದಾರೆ. ಕೋಗಾರು ಸಮೀಪದ ಹೊಂಡಗದ್ದೆಯಿಂದ ಬರುವ ಯಾವುದೇ ಲಾರಿಗಳನ್ನು ಪರಿಶೀಲನೆ ನಡೆಸದೇ ಇರುವುದು ಪೋಲಿಸ್ ಅಧಿಕಾರಿ ಯಾವ ಮರ್ಜಿಗೆ ಸಿಲುಕಿದ್ದಾರೆ ಎಂಬುದು ಸಾರ್ವಜನಿಕ ಚರ್ಚೆಗೆ ಗ್ರಾಸವಾಗಿದೆ. 

ಇಷ್ಟು ದಿನ ಕೊಗಾರು ವ್ಯಾಪ್ತಿಯಲ್ಲಿ ಅಕ್ರಮವಾಗಿ ಕಲ್ಲು ಕ್ವಾರೆ ನಡೆಯುತ್ತಿದ್ದಾಗ ಮೌನವಾಗಿದ್ದ ಪೊಲೀಸರು, ಇದೀಗ ಇದ್ದಕ್ಕಿದ್ದಂತೆ ರಸ್ತೆಗಿಳಿದಿರುವುದು ಕಾನೂನು ರಕ್ಷಣೆಗಾಗಿಯೋ ಅಥವಾ ಹಫ್ತಾ ವಸೂಲಿಗಾಗಿಯೋ? ಎಂಬ ಪ್ರಶ್ನೆಯನ್ನು ಸಾರ್ವಜನಿಕರು ಎತ್ತುತ್ತಿದ್ದಾರೆ.

ತಿಂಗಳಿಂದ ​ಅಕ್ರಮ ಕ್ವಾರೆ: 

ಕೊಗಾರು ಭಾಗದಲ್ಲಿ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದರೂ ಪೊಲೀಸರು ಕ್ರಮ ಕೈಗೊಂಡಿರಲಿಲ್ಲ ಇಂದು ಬೆಳಗ್ಗೆ 9 ಗಂಟೆಗೆ ವಾಹನ ವಶಕ್ಕೆ ಪಡೆದರೂ ಪ್ರಕರಣ ದಾಖಲಿಸದೆ ಕಾಲಹರಣ ಮಾಡಲಾಗುತ್ತಿದ್ದು  ಈ ಪ್ರಕರಣದಲ್ಲಿ ಭಾಗಿಯಾಗಿರುವ ಅಧಿಕಾರಿಗಳ ವಿರುದ್ಧ ಮೇಲಧಿಕಾರಿಗಳು ತನಿಖೆ ನಡೆಸಿ ಶಿಸ್ತು ಕ್ರಮ ಜರುಗಿಸಬೇಕು. ​"ನಿಯಮಬಾಹಿರವಾಗಿ ಕಲ್ಲು ಸಾಗಾಟ ನಡೆಯುತ್ತಿದ್ದರೆ ಕಾನೂನು ರೀತಿ ಕ್ರಮ ಜರುಗಿಸಲಿ. ಅದನ್ನು ಬಿಟ್ಟು ಪ್ರಕರಣ ದಾಖಲಿಸದೆ ಹಣಕ್ಕಾಗಿ ಗಾಡಿಯನ್ನು ತಡೆದು ನಿಲ್ಲಿಸುವುದು ಎಷ್ಟರ ಮಟ್ಟಿಗೆ ಸರಿ?" ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

​ಈ ಕುರಿತು ಉನ್ನತ ಪೊಲೀಸ್ ಅಧಿಕಾರಿಗಳು ಮಧ್ಯಪ್ರವೇಶಿಸಿ, ಅಕ್ರಮ ಕ್ವಾರೆಗೆ ಕಡಿವಾಣ ಹಾಕುವುದರ ಜೊತೆಗೆ ಲಂಚದ ಆರೋಪ ಎದುರಿಸುತ್ತಿರುವ ಸಿಬ್ಬಂದಿಗಳ ವಿರುದ್ಧ ತನಿಖೆ ನಡೆಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಪೊಲೀಸರು ಏನು ಮಾಡಬಹುದಿತ್ತು?

ಆಕ್ರಮಣ ಕಲ್ಲು ಸಾಗಿಸುವ ವಾಹನದ ಪರವಾನಿಗೆ ದಾಖಲೆಗಳು ಸರಿಯಿಲ್ಲದಿದ್ದರೆ ಅಥವಾ ಅಕ್ರಮ ಸಾಗಾಣಿಕೆ ಕಂಡುಬಂದಲ್ಲಿ ವಾಹನ ಜಪ್ತಿ ಕರ್ನಾಟಕ ಪೋಲಿಸ್ ಕಾಯ್ದೆ ಅಥವಾ ಎಂ.ಎಂ.ಆರ್.ಡಿ (MMRD) ಕಾಯ್ದೆಯಡಿ ವಾಹನವನ್ನು ವಶಕ್ಕೆ ಪಡೆಯಬಹುದು. ಕೂಡಲೇ ಸಂಬಂಧಪಟ್ಟ ಗಣಿ ಮತ್ತು ಭೂವಿಜ್ಞಾನ ಇಲಾಖೆಯ (Mines and Geology Department) ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಪೊಲೀಸರಿಗೆ ದಂಡ ವಿಧಿಸುವ ಅಧಿಕಾರಕ್ಕಿಂತ ಹೆಚ್ಚಾಗಿ, ಪ್ರಕರಣ ದಾಖಲಿಸಿ ಸಂಬಂಧಿತ ಇಲಾಖೆಗೆ ಹಸ್ತಾಂತರಿಸುವ ಜವಾಬ್ದಾರಿ ಇರುತ್ತದೆ.

ಎಫ್.ಐ.ಆರ್ (FIR): ಗಂಭೀರ ಅಕ್ರಮ ಕಂಡುಬಂದಲ್ಲಿ ಐಪಿಸಿ (IPC) ಸೆಕ್ಷನ್ 379 (ಕಳ್ಳತನ) ಅಡಿಯೂ ಪ್ರಕರಣ ದಾಖಲಿಸಬಹುದು. ಆದರೆ ಇಲ್ಲಿ ಯಾವ ಪ್ರಕರಣವೂ ದಾಖಲಾಗದೆ ಕಲ್ಲು ತುಂಬಿದ ಲಾರಿ ಪೊಲೀಸ್ ಠಾಣೆಯ ಅಂಗಳದಲ್ಲಿ ನಿಲ್ಲಿಸುವುದು ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

ಕ್ವಾರೆಯೂ ಆಕ್ರಮ, ದರವೂ ದುಪ್ಪಟ್ಟು! 

ಸಾಗರ ತಾಲ್ಲೂಕಿನ ಕೋಗಾರು ಸಮೀಪದ ಹೊಂಡಗದ್ದೆ ಕ್ವಾರೆ ಯಿಂದ ದುಪ್ಪಟ್ಟು ದರದಲ್ಲಿ ಕಲ್ಲು ಮಾರಾಟ ಮಾಡುವ ಆರೋಪ ಜೊತೆಗೆ ಲಾರಿಗಳ ಹೆಚ್ಚಿನ ವೇಗಮೀತಿಯಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳು ರಸ್ತೆಯಲ್ಲಿ ಸಂಚಾರ ಮಾಡುವುದು ದುಸ್ತರವಾಗಿದೆ. 2 ವರ್ಷದ ಹಿಂದೆ ಮರಳು ಗಾಡಿಗೆ ಓರ್ವ ಕಾಲೇಜು ವಿದ್ಯಾರ್ಥಿ ಬಲಿಯಾಗಲಿದ್ದ, 

ಬಡವರಿಗೆ ಮನೆ ನಿರ್ಮಾಣ ಮಾಡಲು ಅತೀ ಕಡಿಮೆ ದರದಲ್ಲಿ ಕಲ್ಲು ಪೂರೈಸಬೇಕು ಎಂಬುದು ಗ್ರಾಮಸ್ಥರ ಬೇಡಿಕೆ. ಈ ಹಿಂದೆ ಈ ಬಗ್ಗೆ ಗ್ರಾಮ ಪಂಚಾಯತಿಯ ಕೆ ಡಿ ಪಿ ಸಭೆಯಲ್ಲೂ ಕೂಡ ಪೋಲೀಸ್ ಅಧಿಕಾರಿಗಳ ಅಭಿಪ್ರಾಯವನ್ನು ಸಂಗ್ರಹಿಸಲಾಗಿದೆ. ಆದರೆ ಸ್ಥಳೀಯ ಕಲ್ಲು ಕ್ವಾರೆಯ ಮಾತು ಕೇಳಿ ತಾರತಮ್ಯ ಮಾಡುವುದು ಪೊಲೀಸರ ಇಬ್ಬಗೆಯ ನೀತಿ ಜನಪರವಾದ ನಿಲುವು ಅಲ್ಲ ಎನ್ನುತ್ತಾರೆ ಕುದರೂರು ಗ್ರಾಮ ಪಂಚಾಯ್ತಿ ಮಾಜಿ ಸದಸ್ಯ ಮಂಜುನಾಥ್ ಬೆಸೂರು.

Red stone' racket in Kargal police station limits - police accused of demanding money

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close