ಪತಿಯ ಹಿಂದೆಯೇ ಪತ್ನಿಯೂ ನೇಣಿಗೆ ಶರಣು ಆತ್ಮಹತ್ಯೆ ಕುರಿತು ಮೃತಳ ತಾಯಿಗೆ ಮೆಸೆಜ್! Wife hangs herself right behind her husband, message to deceased's mother about suicide!

 SUDDILIVE || BHADRAVATHI

ಪತಿಯ ಹಿಂದೆಯೇ ಪತ್ನಿಯೂ ನೇಣಿಗೆ ಶರಣು ಆತ್ಮಹತ್ಯೆ ಕುರಿತು ಮೃತಳ ತಾಯಿಗೆ ಮೆಸೆಜ್! Wife hangs herself right behind her husband, message to deceased's mother about suicide!      

Wife, hangs

ಹೊಸ ಸಿದ್ದಾಪುರದಲ್ಲಿ ಶಿವರಾತ್ರಿ ದಿನದದಂದು ಕೆಎಸ್ಐಎಫ್ ಎಸ್ ನಲ್ಲಿ ಡಿ ದರ್ಜೆ ನೌಕರರೊಬ್ಬರು ನೇಣು ಹಾಕಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಪತ್ನಿ ಇಂದು ಮನೆಯಲ್ಲೇ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಭದ್ರಾವತಿಯ ಹೊಸ ಸಿದ್ದಾಪುರದಲ್ಲಿ ಡಿ ದರ್ಜೆ ನೌಕರರಾಗಿದ್ದ ಜಗದೀಶ್ ಮನೆಯಲ್ಲೇ ನೇಣು ಬಿಗಿದು ಸಾವನ್ನಪ್ಪಿದ್ದರು. ಈ ವೇಳೆ ಭದ್ರಾವತಿಯ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಅಸ್ವಭಾವಿಕ ಸಾವು ಎಂದು ದೂರು ದಾಖಲಾಗಿತ್ತು. 


ಆದರೆ ಅವರ ಪತ್ನಿ ಸ್ವಾತಿ (26) ಸಹ ಅವರ ಮನೆಯಲ್ಲೇ  ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ. ನೇಣು ಬಿಗಿದು ಸಾವನ್ನಪ್ಪಿರುವ ಜೊತೆಗೆ ಸ್ವಾತಿ ತನ್ನ ತಾಯಿಗೆ ಕಳುಹಿಸಿದ ವಾಟ್ಸಪ್ ನಲ್ಪಿ ಮೆಸೇಜ್ ಕಳುಹಿಸಿರುವುದು ಪ್ರಕರಣಕ್ಕೆ ತಿರುವು ನೀಡಿದೆ. ಇವರ ಆತ್ಮಹತ್ತೆಯ ವೇಳೆ ಸ್ವಾತಿ ಮೈಮೇಲೆ ತಾಳಿ, ಮತ್ತು ಇತರೆ ಚಿನ್ನಾಭರಣವನ್ನ ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕುತೂಹಲ ಮೂಡಿಸಿದೆ. 

ಶಿವಮೊಗ್ಗದ ಮಾಳೂರು ಪೊಲೀಸ್ ಠಾಣೆಯೊಂದರಲ್ಲಿ  ದಫೇದಾರ್ ಆಗಿದ್ದವರೊಬ್ಬರು ಸ್ವಾತಿಗೆ 'ನಿನ್ನ ಪತಿ' ಸಾವಿಗೆ ನೀನೆ ಕಾರಣ ಎಂದು ಆರೋಪಿಸಿರುವುದನ್ನ ಉಲ್ಲೇಖಿಸಿ ತನ್ನ ತಾಯಿಗೆ ಮೆಸೇಜ್ ಮಾಡಿರುವುದು ಈಗ ಸಂಚಲನ ಉಂಟು ಮಾಡಿದೆ. ಪ್ರಕರಣ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಜಗದೀಶ್ ಮತ್ತು ಸ್ವಾತಿ ಅವರ ಆತ್ಮಹತ್ಯೆಯಿಂದ ಇವರ ಮಕ್ಕಳು ಅನಾಥವಾಗಿದ್ದಾರೆ. 

Wife hangs herself right behind her husband, message to deceased's mother about suicide

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close