SUDDILIVE || SHIVAMOGGA
ಲಾಡ್ಜ್ ನಲ್ಲಿದ್ದ ನಿರಾಶ್ರಿತ ಮಹಿಳೆಯ ರಕ್ಷಣೆ- Rescue of homeless woman in lodge
ಶಿವಮೊಗ್ಗದಲ್ಲಿ ಮಹಿಳೆಯರು ಬಹಳ ಅಪಾಯಕಾರಿ ಸ್ಥಿತಿಯಲ್ಲಿ ಪತ್ತೆಯಾಗುತ್ತಿದ್ದಾರೆ. ಅಂತಹವರನ್ನ ರಕ್ಷಿಸಿ ಅಕ್ಕಪಡೆ ಅವರನ್ನ ಸಖಿ ನಿರಾಶ್ರಿತ ಕೇಂದ್ರಕ್ಕೆ ಬಿಡಲಾಗುತ್ತಿದೆ.
ಅಂತಹದ್ದೇ ಒಂದು ಕಾರ್ಯಕ್ಕೆ ಅಕ್ಕಪಡೆ ಸಾಕ್ಷಿಯಾಗಿದೆ. ನಗರದ ಬಸ್ ನಿಲ್ದಾಣದಲ್ಲಿ ಮಹಿಳೆಯೊಬ್ವರನ್ನ ಇರಲು ಮನೆಯಿಲ್ಲ ಎಂಬ ಕಾರಣಕ್ಕೆ ಲಾಡ್ಜ್ ನಲ್ಲಿ ಇರಿಸಿದ್ದ. ಅಂತಹ ಮಹಿಳೆಯನ್ನ ಗುರುತಿಸಿ ಸಖಿ ಕೇಂದ್ರಕ್ಕೆ ಅಕ್ಕಪಡೆ ಬಿಟ್ಟಿದೆ.
ಇರಲು ಮನೆಯಿಲ್ಲದೆ ಬೀದಿಯಲ್ಲಿ ಮಲಗುವ ಸ್ಥಿಯಲ್ಲಿದ್ದಾಗ ಅಪರಿಚತನೋರ್ವ ಈ ಮಹಿಳೆಯರಿಗೆ ಮನೆ ಮಾಡಿಕೊಡುತ್ತೇನೆ. ಅಲ್ಲಿಯ ವರೆಗೆ ರೂಮ್ ನಲ್ಲಿ ಇರಲು ಹೇಳಿ ನಾಪತ್ತೆಯಾಗಿದ್ದ. ಈ ನಾಪತ್ತೆಯ ಹಿನ್ನಲೆಯಲ್ಲಿ ರೂಂ ಬಾಡಿಗೆ ಸಹ ಕಟ್ಟಲು ಮಹಿಳೆಗೆ ಸಾಧ್ಯವಾಗಿರಲಿಲ್ಲ.
ಇಂತಹ ಅಪಾಯದ ಸ್ಥಿತಿಯಲ್ಲಿದ್ದ ಮಹಿಳೆಯನ್ನ ಅಕ್ಕಪಡೆ ಗುರುತಿಸಿ ರಕ್ಷಿಸಿದೆ. ಸಖಿ ಒನ್ ಸ್ಟೆಪ್ ಸೆಂಟರ್ ನಲ್ಲಿ ನಿರಾಶ್ರಿತ ಕೇಂದ್ರದಲ್ಲಿ ಮಹಿಳೆಯನ್ನ ರಕ್ಷಿಸಲಾಗಿದೆ. ಅಕ್ಕಪಡೆಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
Rescue of homeless woman in lodge
