SUDDILIVE || BANGALORE
ಭಾಗಶಃ ರದ್ದಾಗಿದ್ದ ರೈಲು ಸಂಚಾರ ಪುನರಾರಂಭ-Cancelled train services resume
ಮೈಸೂರು ಮತ್ತು ಮೈಸೂರು ನ್ಯೂ ಗೂಡ್ಸ್ ಟರ್ಮಿನಲ್ ಬೈಪಾಸ್ ನಡುವೆ ನಡೆಯುತ್ತಿದ್ದ ರಸ್ತೆ ಕೆಳಸೇತುವೆ (RUB) ಕಾಮಗಾರಿಯ ಹಿನ್ನೆಲೆಯಲ್ಲಿ ಈ ಹಿಂದೆ ಫೆಬ್ರವರಿ 11, 14, 28 ಹಾಗೂ ಮಾರ್ಚ್ 02, 05, 07, 21, 24 ರಂದು ಭಾಗಶಃ ರದ್ದುಗೊಳಿಸಲಾಗಿದ್ದ ಈ ಕೆಳಗಿನ ರೈಲು ಸೇವೆಗಳನ್ನು ಇದೀಗ ಫೆಬ್ರವರಿ 28 ಮತ್ತು ಮಾರ್ಚ್ 02 ರಂದು ಪುನರಾರಂಭಿಸಲಿವೆ.
1. ರೈಲು ಸಂಖ್ಯೆ 56267 ಅರಸೀಕೆರೆ–ಮೈಸೂರು ಪ್ಯಾಸೆಂಜರ್ ರೈಲು ಈ ಮೊದಲು ಬೆಳಗುಳ ಮತ್ತು ಮೈಸೂರು ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಿದ್ದ ಈ ರೈಲನ್ನು ಈಗ ಪೂರ್ಣವಾಗಿ ಮರುಸ್ಥಾಪಿಸಲಾಗಿದೆ. ಇದು ಫೆಬ್ರವರಿ 28 ಮತ್ತು ಮಾರ್ಚ್ 02 ರಂದು ಅರಸೀಕೆರೆಯಿಂದ ಮೈಸೂರಿನವರೆಗೆ ಎಂದಿನಂತೆ ಸಂಚರಿಸಲಿದೆ.
2. ರೈಲು ಸಂಖ್ಯೆ 16225 ಮೈಸೂರು–ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್ ಫೆಬ್ರವರಿ 28 ಮತ್ತು ಮಾರ್ಚ್ 02 ರಂದು ಮೈಸೂರು ಮತ್ತು ಬೆಳಗುಳ ನಡುವೆ ಭಾಗಶಃ ರದ್ದಾಗಿದ್ದ ಈ ರೈಲು, ಈಗ ನಿಗದಿತ ವೇಳಾಪಟ್ಟಿಯಂತೆ ಮೈಸೂರಿನಿಂದಲೇ ತನ್ನ ಪ್ರಯಾಣವನ್ನು ಆರಂಭಿಸಲಿದೆ.
Cancelled train services resume
