SUDDILIVE || SHIVAMOGGA
ಶಿವಮೊಗ್ಗದಲ್ಲಿ ಎಫ್ ಎಂ ರೇಡಿಯೋ ಲೋಕಾರ್ಪಣೆ- FM radio inaugurated in Shivamogga
ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನ ಎದುರಿನಲ್ಲಿರುವ ಟಿವಿ ಟವರ್ ನಲ್ಲಿ ಶಿವಮೊಗ್ಗ 101.4MHz 10 ಕಿಲೋವ್ಯಾಟ್ ಸಾಮರ್ಥ್ಯದ ಎಫ್ ಎಂ ರೇಡಿಯೋ ಕೇಂದ್ರ ಸರ್ಕಾರದ ಮಾಹಿತಿ ಮತ್ತು ಪ್ರಸಾರ ರಾಜ್ಯ ಸಚಿವ ಡಾ.ಎಲ್ ಮುರುಗನ್ ಲೋಕಾರ್ಪಣೆ ಮಾಡಿದರು. ಇಂದಿನಿಂದ ಶಿವಮೊಗ್ಗದಿಂದ 150-200 ಕಿಮಿ ದೂರ ಈ ಎಫ್ ಎಂ ರೇಡಿಯೋ ಕವರ್ ಆಗಲಿದೆ.
ಎಫ್ ಎಂ ಮತ್ತು ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೇಂದ್ರ ಸಚಿವ ಎಫ್ ಎಂಲೋಕರ್ಪಣೆ ಎರಡೂ ಅವಳಿ ನಗರಕ್ಕೆ ಕೇಂದ್ರ ಸರ್ಕಾರದ ಗಿಫ್ಟ್ ಆಗಿದೆ. ಪ್ರಬಲ ಮಾಧ್ಯಮವಾಗಿ ಎಫ್ ಎಂ ನ್ನ ಬಳಸಿಕೊಳ್ಳಬಹುದಾಗಿದೆ. ಇದನ್ನ ಕ್ರಿಯೇಟರ್ ಎಕ್ನಾಮಿಕ್ಸ್ ಆಗಿ ಬಳಸಿಕೊಳ್ಳಬಹುದಾಗಿದೆ. ದೇಶದಲ್ಲಿ 150000 ಶಾಲೆಯಲ್ಲಿ ಕ್ರಿಯೇಟಿವ್ ಲ್ಯಾಬ್ ಗಳನ್ನಆರಂಭಿಸಲಾಗಿದೆ. ಮಾಧ್ಯಮಗಳೆ ಇಲ್ಲದ ಸಮಯದಲ್ಲಿ ಆಕಾಶವಾಣಿ ಸ್ಥಳೀಯರನ್ನ ಉತ್ತೇಜಿಸುತ್ತಿದೆ. ಸ್ಥಳೀಯರಿಂದ ವಿಶ್ವ ಮಟ್ಟಕ್ಕೆ ಸ್ಥಳೀಯರನ್ನ ಕರೆದಿಯ್ದಿದೆ ಎಂದರು.
ನೈಸರ್ಗಿಕ ಉಲ್ಬಣ, ನೈಜ ಮಾಹಿತಿಯನ್ನ ಆಕಾಶವಾಣಿ ನೀಡಿತ್ತು. ಇತ್ತೀಚಿನ ದಿನಗಳಲ್ಲಿ ತಕ್ಷಣದ ಮಾಹಿತಿ ನೀಡಿ ಬ್ರೇಕಿಂಗ್ ನ್ಯೂಸ್ ಕೊಡುತ್ತಿರಲಿಲ್ಲ. ನೈಜತೆಗೆ ಒತ್ತು ನೀಡಿತ್ತು. ಪ್ರಸಾರ ಭಾರತಿಗೆ ದೇಶದಲ್ಲಿ 2500 ಕೋಟಿ ವೆಚ್ಚ ಮಾಡಲಾಗಿತ್ತು. ಡಿಜಿಟಲ್ ರೇಡೊಯೋ ಟೆಕ್ನಾಲಜಿಯನ್ನ ದೇಶಕ್ಕೆ ಲೋಕರ್ಪಣೆ ಮಾಡಲಾಗಿದೆ. ಉತ್ತಮಗುಣಮಟ್ಟದ ಶ್ರವಣ ಮಾಧ್ಯಮಕ್ಕೆ ಉತ್ತೇಜನ ನೀಡಲಾಗಿದೆ. 23 ಭಾಷೆಯಲ್ಲಿ ಆಕಾಶವಾಣಿ ಪ್ರಸಾರವಾಗುತ್ತಿದೆ ಎಂದರು.
ಆಲ್ ಇಂಡಿಯಾ ರೇಡಿಯೋ ವನ್ನ ಆಲ್ ಇಂಡಿಯಾ ಎಫ್ ಎಂ ಆಗಿ ಬದಲಿಸಲಾಗುತ್ತಿದೆ. 560 ಕಮ್ಯೂನಿಟಿ ಸ್ಟೇಷನ್ ಸಹ ಆರಂಭಿಸಲಾಗಿದೆ. ಕಳೆದ ವರ್ಷ ಜನವರಿಯಲ್ಲಿ ಭೂಮಿ ಪೂಜೆ ಮಾಡಲಾಗಿತ್ತು. ಇಂದು ಎಫ್ ನ್ನ ಲೋಕಾರ್ಪಣೆ ಮಾಡಲಾಗಿದೆ. ನಮ್ಮ ಸರ್ಕಾರ ಅಭಿವೃದ್ಧಿಯನ್ನ ನಿಗದಿತ ಸಮಯದಲ್ಲಿ ಬದ್ಧವಾಗಿದೆ ಎಂದರು.
14 ಕಾರ್ಯಕ್ರಮ ನಿರ್ಮಿಸುವ ಸ್ಟೇಷನ್ ಉದೆ. 10 ಅದಕ್ಕೆ ಸಪೋರ್ಟ್ ಆಗಿ ಕಾರ್ಯನಿರ್ವಹಿಸಲಾಗಿದೆ. 3500 ಸ್ಕ್ವಾರ್ ಫೀಟ್ ನಲ್ಲಿ ಶಿವಮೊಗ್ಗ ಎಫ್ ಎಂ ಕಾರ್ಯನಿರ್ವಹಿಸುತ್ತಿದೆ. ಶಾಸಕರು ಪಾರ್ಕ್ ನಲ್ಲಿ ರೇಡಿಯೋ ಸ್ಟೇಷನ್‌ಆರಂಭಿಸುವ ಯೋಜನೆಗೆ ಬೇಡಿಕೆಯಿಟ್ಟಿದ್ದಾರೆ. ಅದಕ್ಕೆ ಶಿವಮೊಗ್ಗದಲ್ಲಿ ಪಾರ್ಕ್ ರೇಡಿಯೋ ಸ್ಟೇಷನ್ ಗೆ ಪೈಲೆಟ್ ಪ್ರಾಜೆಕ್ಟ್ ಆಗಿ ಆರಂಭಿಸಲಾಗುವುದು.
ಗುಡ್ಡೇಕಲ್ ದೇವಸ್ಥಾನದಲ್ಲಿ ಬಾಲಸುಬ್ರಹ್ಮಣ್ಯ ದೇವಸ್ಥಾನದಲ್ಲಿ 150 ಅಡಿ ಪ್ರತಿಮೆ ನಿರ್ಮಿಸಲಾಗುವುದು ಸಂಸ್ಕೃತಿ ಇಲಾಖೆಯಿಂದ ನಿರಗಮಿಸಲಾಗುವುದು ಎಂದು ಭರವಸೆ ನೀಡಿದರು.
ಶಾಸಕರ ಮಾತು
ಶಾಸಕ ಚೆನ್ನಬಸಪ್ಪ ಕನಸಿನ ಶಿವಮೊಗ್ಗ ಹೇಗಿರಬೇಕು ಎಂಬ ಕಲ್ಪನೆಯಿತ್ತು. ಅಭಿವೃದ್ಧಿಗೆ ಹಣವಿರಲಿಲ್ಲ. ಸಂಸದರ ಯೋಚನಾ ಲಹರಿಯಿತ್ತು. ಹಾಗಾಗಿ ಅವರು ಅಭಿವೃದ್ಧಿ ಹರಿಕಾರರು. ಅಭಿವೃದ್ಧಿಯಲ್ಲಿ ತಂದೆ ಯಡಿಯೂರಪ್ಪನವರನ್ನೂ ಮುಗಿಲು ಮೀರಿ ಬೆಳೆದವರು ಸಂಸದರು ಬೆಳೆದಿದ್ದಾರೆ. ಸಾವರ್ಕರ್ ಅವರ ಪುಣ್ಯತಿಥಿಯ ದಿನ ಎಫ್ ಎಂ ಶಿವಮೊಗ್ಗದಲ್ಲಿ ಲೋಕಾರ್ಪಣೆಯಾಗಿದೆ ಎಂದರು.
ಪಾರ್ಕ್ ನಲ್ಲಿ ಬಾನುಲಿ ಪ್ರಸಾರವಾಗುವ ಹಾಗೆ ಬಳಸಿಕೊಳ್ಳಲಾಗುವುದು. ಇದಕ್ಕೆ ಹಣ ಜೋಡಿಸುವ ಕೆಲಸ ಮಾಡಿಕೊಡುವೆ ಸಂಸದರು ಸಹಕಾರ ನೀಡಲಿ ಎಂದರು. ಭದ್ರಾವತಿ ಆಕಾಶವಾಣಿ ಆರಂಭವಾಗಿ 62 ವರ್ಷ ಕಳೆದಿದೆ. ಇಂದು ಎಫ್ ಎಂ ಲೊಕಾರ್ಪಣೆಯನ್ನಜನ ಬಳಸಿಕೊಳ್ಳಲಿ ಎಂದರು.
ಸಂಸದರ ಮಾತು
ಸಂಸದ ರಾಘವೇಂದ್ರ ಮಾತನಾಡಿ, 2024 ರಲ್ಲಿ ಟ್ರಾನ್ಸ್ ಮೀಟರ್ ಗೆ ಅಡಿಗಲ್ಲು ಹಾಕಿದ್ದರು ಇಂದು ಅದರ ಲೋಕಾರಗಪಣೆ ಮಾಡಿದ್ದಾರೆ. ಆಕಾಶವಾಣಿ ಶಿವಮೊಗ್ಗದಲ್ಲಿ ವಿಶೇಷ ವೇನೆಂದರೆ, ಕನ್ನಡಿಗರನ್ನ ಕವರ್ ಮಾಡಲಿದೆ. 60 ವರ್ಷದ ಹಿಂದೆ ಭದ್ರಾವತಿಯಲ್ಲಿ ಆಕಾಶವಾಣಿ ಆಯಿತು. 1987 ರಲ್ಲಿ ಅಪಗ್ರೇಡ್ ಆಯಿತು.
1994 ರಲ್ಲಿ ಅಪ್ ಗ್ರೇಡ್ ಮಾಡಲಾಗಿದೆ. ದೂರದರ್ಶನ್ ಟವರ್ ನಿಷ್ಕ್ರೀಯವಾಗಿತ್ತು. ಭದ್ರಾವತಿ ಆಕಾಶವಾಣಿ ಶಿವಮೊಗ್ಗ ಹಾವೇರಿ, ದಾವಣಗೆರೆ, ಚಿತ್ರದುರ್ಗ, ಉಡುಪಿಗೆ ಕವರ್ ಆಗಲಿದೆ. ಪಾರ್ಕ್ ನಲ್ಲಿ ರೇಡಿಯೋ ಸ್ಟೇಷನ್ ಶಾಸಕರು ಕೇಳಿದ್ದಾರೆ. ಎಲ್ಲ ಪಾರ್ಕನಲ್ಲಿ ಅಳವಡಿಸಲಾಗುವುದು ಎಂದು ಭರವಸೆ ನೀಡಿದರು.
FM radio inaugurated in Shivamogga
