ಶಿಕಾರಿಪುರ-ನ್ಯಾಯವಾದಿ ನೇಣಿಗೆ ಶರಣು-Shikaripura-Lawyers surrender to the gallows

 SUDDILIVE || SHIVAMOGGA

ಶಿಕಾರಿಪುರ-ನ್ಯಾಯವಾದಿ ನೇಣಿಗೆ ಶರಣು-Shikaripura-Lawyers surrender to the gallows

Shikaripura, lawyer


ಪಟ್ಟಣದ ನ್ಯಾಯವಾದಿ ಹಾಗೂ ತಾಲೂಕು ಪದವೀಧರ ಸಹಕಾರ ಸಂಘದ ಉಪಾಧ್ಯಕ್ಷ ಶ್ರೀಧರ್ (38) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಶ್ರೀಧರ್‌ ಮೂಲತಃ ಕಣಸೋಗಿ ಗ್ರಾಮದವರು. ಚಿಕ್ಕಂದಿನಿಂದಲೇ ತಮ್ಮ ಚಿಕ್ಕಪ್ಪ ಹಾಗೂ ವಕೀಲರ ಸಂಘದ ಮಾಜಿ ಅಧ್ಯಕ್ಷ ಕೋಡಪ್ಪ ಅವರ ಶಿಕಾರಿಪುರದ ಮನೆಯಲ್ಲಿಯೇ ವಾಸವಿದ್ದರು. ಚಿಕ್ಕಪ್ಪನ ಮನೆಯ ಮಹಡಿ ಮೇಲೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಸಿಪಿಐ ಸಂತೋಷ್ ಪಾಟೀಲ್ ಹಾಗೂ ಪಿಎಸ್‌ಐ ಶರತ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.


ಡೆತ್ ನೋಟ್ ದೊರೆತಿದೆ ಎಂದು ಹೇಳಲಾಗುತ್ತಿದೆ. ಘಟನೆಗೆ ನಿಖರ ಕಾರಣ ಇನ್ನಷ್ಟೆ ತಿಳಿದು ಬರಬೇಕಿದೆ. ಕಣಸೋಗಿ ಗ್ರಾಮದ ಅವರ ಕೃಷಿ ಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ಮೃತ ಶ್ರೀಧರ್‌ ಅವರಿಗೆ ಪತ್ನಿ ಹಾಗೂ ಪುತ್ರಿ ಇದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close