ಲಕ್ಷ್ಮೀ ಟಾಕೀಸ್ ವೃತ್ತದಿಂದ ರಾಜಕುಮಾರ ವೃತ್ತದವರೆಗೆ ಫುಟ್ ಪಾತ್ ಕಾರ್ಯಾಚರಣೆ- Footpath operation from Lakshmi Talkies Circle to Rajkumar Circle

 SUDDILIVE || SHIVAMOGGA

ಲಕ್ಷ್ಮೀ ಟಾಕೀಸ್ ವೃತ್ತದಿಂದ ರಾಜಕುಮಾರ ವೃತ್ತದವರೆಗೆ ಫುಟ್ ಪಾತ್ ಕಾರ್ಯಾಚರಣೆ- Footpath operation from Lakshmi Talkies Circle to Rajkumar Circle     


ಶಿವಮೊಗ್ಗ ನಗರದ 100 ಅಡಿ ರಸ್ತೆ ವ್ಯಾಪ್ತಿಯಲ್ಲಿರುವ ಲಕ್ಷ್ಮೀ ಟಾಕೀಸ್ ವೃತ್ತದಿಂದ ರಾಜಕುಮಾರ ವೃತ್ತ ಹಾಗೂ ಮೇದಾರ ಕೇರಿ ರಸ್ತೆ ಪ್ರದೇಶದಲ್ಲಿ, ಜೊತೆಗೆ ಫ್ರೀಡಂ ಪಾರ್ಕ್ ಎದುರು ಭಾಗದಲ್ಲಿ, ಮಹಾನಗರ ಪಾಲಿಕೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯವರ ಸಹಕಾರದೊಂದಿಗೆ ಪಾದಚಾರಿ ಮಾರ್ಗ  ತೆರವು ಕಾರ್ಯಾಚರಣೆ ಕೈಗೊಳ್ಳಲಾಗಿದೆ. 

ಕಾರ್ಯಾಚರಣೆ ವೇಳೆ ಪಾದಚಾರಿ ಮಾರ್ಗದಲ್ಲಿ  ಇರಿಸಲಾದ ಅಂಗಡಿ ಫಲಕಗಳು, ಫಾಸ್ಟ್ ಫುಡ್ ಗಾಡಿಗಳು ಹಾಗೂ ಇತರೆ ವಸ್ತುಗಳನ್ನು ತೆರವುಗೊಳಿಸಲಾಯಿತು. ಪಾದಚಾರಿಗಳು ಹಾಗೂ ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆ ಉಂಟಾಗುವ ರೀತಿಯಲ್ಲಿ ಪಾದಚಾರಿ ಮಾರ್ಗ ಮತ್ತು ರಸ್ತೆಯ ಮೇಲಿನ ಯಾವುದೇ ವಸ್ತುಗಳನ್ನು ಇಟ್ಟುಕೊಳ್ಳಬಾರದು ಎಂದು ಸಂಬಂಧಿತರಿಗೆ ಕಟ್ಟು ನಿಟ್ಟಿನ ಸೂಚನೆಗಳನ್ನು ನೀಡಲಾಯಿತು.

ಟ್ರಾಫಿಕ್ ಸಿಪಿಐ ದೇವರಾಜ್, ಪಾಲಿಕೆಯ ನಲ್ಮ್ ವಿಭಾಗದ ಅನುಪಮ, ಸಿಬ್ಬಂದಿಗಳು ಹಾಗೂ ಮೊದಲಾದವರು ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

Footpath operation from Lakshmi Talkies Circle to Rajkumar Circle

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close