SUDDILIVE || SORABA
ಶ್ರೀಧರ ಭಂಡಾರಿ ಅವರ ತಾಯಿ ಇನ್ನಿಲ್ಲ-Sridhar Bhandari's mother is no more
ಪಟ್ಟಣದ ಬಿಜೆಪಿ ನಗರ ಮಾಜಿ ಉಪಾಧ್ಯಕ್ಷ ಶ್ರೀಧರ್ ಭಂಡಾರಿ ಅವರ ತಾಯಿ ರಾಧಮ್ಮ ಚಂದ್ರಪ್ಪ ಭಂಡಾರಿ (86) ಇಂದು ಬೆಳಗ್ಗೆ ವಯೋಸಹಜ ಕಾಯಿಲೆಯಿಂದ ನಿಧನರಾದರು.
ಅವರಿಗೆ ಓರ್ವ ಪುತ್ರ, ನಾಲ್ವರು ಪುತ್ರಿಯರು ಇದ್ದಾರೆ. ಪಟ್ಟಣದ ಹಿಂದೂ ರುದ್ರಭೂಮಿಯಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ.
ಸಂತಾಪ: ರಾಧಮ್ಮ ಚಂದ್ರಪ್ಪ ಭಂಡಾರಿ ಅವರ ನಿಧನಕ್ಕೆ ಸವಿತಾ ಸಮಾಜದ ತಾಲೂಕು ಅಧ್ಯಕ್ಷ ತೇಜಪ್ಪ, ಟೌನ್ ಅಧ್ಯಕ್ಷ ನಾಗರಾಜ್, ಬಿಜೆಪಿ ತಾಲೂಕು ಅಧ್ಯಕ್ಷ ಪ್ರಕಾಶ್ ಅಗಸನಹಳ್ಳಿ, ಸಾರ್ವಜನಿಕ ಹಿತರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಜೆ.ಎಸ್. ಚಿದಾನಂದ ಗೌಡ ಸೇರಿದಂತೆ ವಿವಿಧ ಸಂಘ ಸಂಸ್ಥೆಯವರು ಸಂತಾಪ ಸೂಚಿಸಿದ್ದಾರೆ.
Sridhar Bhandari's mother is no more
