ಸುಲಿಗೆ ಪ್ರಕರಣದಲ್ಲಿ ಇಬ್ಬರು ಆರೋಪಿಗಳ ಬಂಧನ-Two accused arrested in extortion case

SUDDILIVE || SHIVAMOGGA

ಸುಲಿಗೆ ಪ್ರಕರಣದಲ್ಲಿ ಇಬ್ಬರು ಆರೋಪಿಗಳ ಬಂಧನ-Two accused arrested in extortion case  


ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನ ಭದ್ರಾವತಿ ಗ್ರಾಮಾಂತರ ಪೊಲೀಸರು ಬಂಧಿಸಿ ಸುಲಿಗೆ ಮಾಡಿದ್ದ 10 ಗ್ರಾಂ ಚಿನ್ನಾಭರಣ, ಬೈಕ್ ನ್ನ ವಶಕ್ಕೆ ಪಡೆದಿದ್ದಾರೆ. 

ದಿನಾಂಕ:30/01/2026 ರಂದು ಪಿರ್ಯಾದಿದಾರರಾದ ಜಯಂತ ರವರು ಭದ್ರಾವತಿ ತಾ: ಕುವೆಂಪು ನಗರ(ಶಂಕರಘಟ್ಟ)ಗ್ರಾಮದ ಹತ್ತಿರ ಶಿವಮೊಗ್ಗ-ತರಿಕೆರೆ ರಾಜ್ಯ ಹೆದ್ದಾರಿ ಟಾರ್ ರಸ್ತೆಯಲ್ಲಿ ಬೈಕ್ ನ್ನು ಚಾಲನೆ ಮಾಡಿಕೊಂಡು ಹೋಗುತ್ತಿದ್ದಾಗ ಯಾರೋ ಇಬ್ಬರು ಮೋಟಾರು ಬೈಕ್ ನಲ್ಲಿ ಬಂದು ಪಿರ್ಯಾದಿಯನ್ನು ಅಡ್ಡ ಹಾಕಿ ತಡೆದು ಹಲ್ಲೆ ಮಾಡಿ 1,50,000/- ರೂ ಬೆಲೆ ಬಾಳುವ ಸುಮಾರು 14 ಗ್ರಾಂ ಬಂಗಾರದ ಸರವನ್ನು ಸುಲಿಗೆ ಮಾಡಿಕೊಂಡು ಹೋಗಿದ್ದು, ಈ ವಿಚಾರವಾಗಿ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. 

ಪ್ರಕರಣದಲ್ಲಿ ಆರೋಪಿ ಹಾಗೂ ಮಾಲು ಪತ್ತೆಗಾಗಿ ನಿಖಿಲ್ ಬಿ ಐಪಿಎಸ್, ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ, ಶ್ರೀ ಕಾರಿಯಪ್ಪ ಎ. ಜಿ. ಹೆಚ್ಚುವರಿ ಪೊಲೀಸ್ ಅಧೀಕ್ಷಕರು -1,  ಶ್ರೀ ರಮೇಶ್ ಕುಮಾರ್ ಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರು, -2 ರವರ ಮಾರ್ಗದರ್ಶನದಲ್ಲಿ,  ಪ್ರಕಾಶ ರಾಠೋಡ್ DySP ಭದ್ರಾವತಿ ಉಪವಿಭಾಗ ರವರ ಮೇಲ್ವಿಚಾರಣೆಯಲ್ಲಿ, ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯ ಚಿದಾನಂದ, ಪೊಲೀಸ್ ಇನ್ಸ್ ಪೆಕ್ಟರ್ ರವರ ನೇತೃತ್ವದಲ್ಲಿ, ಎ.ಎಸ್.ಐ ದಿವಾಕರ್ ರಾವ್, ಸಿಪಿಸಿ ಯದುನಂದನ, ಸಂತೋಷಕುಮಾರ ರವರನ್ನೊಳಗೊಂಡ ತನಿಖಾ ತಂಡವನ್ನು ರಚನೆ ಮಾಡಲಾಗಿರುತ್ತದೆ.

ತಂಡವು ಪ್ರಕರಣದ ಆರೋಪಿತರಾದ 1) ಚಂದನ್ ನಾಯ್ಕ, 20 ವರ್ಷ, ವಾಸ ಮಲ್ಲಿಗೇನಹ ಕ್ಯಾಂಪ್ ಗ್ರಾಮ ಭದ್ರಾವತಿ ಮತ್ತು 2) ವೇಣುಗೋಪಾಲ, 26 ವರ್ಷ, ವಾಸ ಮಲ್ಲಿಗೇನಹಳ್ಳಿ, ಕ್ಯಾಂಪ್ ಗ್ರಾಮ ಭದ್ರಾವತಿ ಎಂಬುವರನ್ನು ಪತ್ತೆ ಮಾಡಿ ಸದರಿ ಆರೋಪಿತರಿಂದ ಸುಲಿಗೆ ಮಾಡಿದ 10ಗ್ರಾಂ ಬಂಗಾರದ ಸರ ಅಂದಾಜು ಮೌಲ್ಯ 1,50,000/- ರೂ ಸದರಿ ಆರೋಪಿತರು ಕೃತ್ಯಕ್ಕೆ ಬಳಸಿದ ಬೈಕ್ ನನ್ನು ಅಮಾನತ್ತು ಪಡಿಸಿರುತ್ತದೆ.  

ಸದರಿ ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಮಾನ್ಯ ಪೊಲೀಸ್ ಅಧಿಕ್ಷಕರು ಶಿವಮೊಗ್ಗ ಜಿಲ್ಲೆ ರವರು ಪ್ರಶಂಸಿಸಿ ಅಭಿನಂದಿಸಿರುತ್ತಾರೆ.

Two accused arrested in extortion case

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close