SUDDILIVE || SHIVAMOGGA
ಪ್ಯಾರಮೆಡಿಕಲ್ ಸೈನ್ಸ್ ಕಾಲೇಜಿಗೆ ಬಂದ ವಿದ್ಯಾರ್ಥಿನಿ ನಾತ್ತೆಯಾಗಿರುವ ಘಟನೆ ವರದಿಯಾಗಿದ್ದು, ನಾಪತ್ತೆಯಾದ ವಿದ್ಯಾರ್ಥಿನಿ ಬಗ್ಗೆ ತಿಳಿದು ಬಂದಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ತಿಳಿಸುವಂತೆ ಪತ್ರಿಕಾ ಪ್ರಕಟಣೆಯಲ್ಲಿ ಪೊಲೀಸರು ತಿಳಿಸಿದ್ದಾರೆ.
ಭದ್ರಾವತಿ ತಾಲೂಕು ರಾಮಿನಕೊಪ್ಪ ವಾಸಿ ಹನುಮಂತನಾಯ್ಕ ಎಂಬುವವರ ಮಗಳು ಭೂಮಿಕಾ ಎಂಬ 18 ವರ್ಷದ ಯುವತಿ ಜ. 30 ರಂದು ಮನೆಯಿಂದ ಬೈಪಾಸ್ ರಸ್ತೆಯ ಗ್ಲೋಬಲ್ ಇನ್ಸ್ಟಿಟ್ಯೂಟ್ ಆಫ್ ಪ್ಯಾರಾಮೆಡಿಕಲ್ ಸೈನ್ಸ್ ಕಾಲೇಜಿಗೆ ಎಂದು ಬಂದವಳು ಈವರೆಗೂ ವಾಪಾಸ್ಸಾಗಿರುವುದಿಲ್ಲ. ಈಕೆಯ ಚಹರೆ 5.2 ಅಡಿ ಎತ್ತರ, ಕೋಲುಮುಖ, ತೆಳುವಾದ ಮೈಕಟ್ಟು, ಗೋಧಿ ಮೈಬಣ್ಣ ಹೊಂದಿದ್ದು, ಕನ್ನಡ ಭಾಷೆ ಮಾತನಾಡುತ್ತಾಳೆ. ಕಪ್ಪುಬಣ್ಣದ ಪ್ಯಾಂಟ್, ಪರ್ಪಲ್ ಬಣ್ಣದ ಟಾಪ್ ಧರಿಸಿರುತ್ತಾಳೆ.
ಈ ವ್ಯಕ್ತಿಯ ಕುರಿತು ಸುಳಿವು ದೊರೆತಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆ ದೂ.ಸಂ.: 08182-261414/ 9480803345/ 9844470744 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆಯ ತಿಳಿಸಿದೆ.
Paramedical student missing

