SUDDILIVE || SHIVAMOGGA || ANANDAPURA
ಎರಡು ಪ್ರತ್ಯೇಕ ಆತ್ಮ*ಹತ್ಯೆ ಪ್ರಕರಣ-Two separate cases of sui*cide
ಎರಡು ಪ್ರತ್ಯೇಕ ಆತ್ಮಹತ್ಯೆ ಘಟನೆ ಶಿವಮೊಗ್ಗ ಮತ್ತು ಸಾಗರ ತಾಲೂಕು ಆನಂದಪುರದಲ್ಲಿ ನಡೆದಿದೆ. ಶಿವಮೊಗ್ಗದಲ್ಲಿ ಆತ್ಮಹತ್ಯೆಗೆ ಶರಣಾದ ವ್ಯಕ್ತಿಯನ್ನ ವಿಠಲ (32) ಎಂದು ಆನಂದಪುರದಲ್ಲಿ ನೇಣಿಗೆ ಶರಣಾದವನನ್ನ ನವೀನ್( 27) ಎಂದು ಗುರುತಿಸಲಾಹಿದೆ. ಎರಡೂ ಘಟನೆ ನಿನ್ನೆ ನಡೆದಿದೆ.
ಶಿವಮೊಗ್ಗದ ಮೇದಾರಕೇರಿಯಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದ ವಿಠಲ ಎಂಬ ವ್ಯಕ್ತಿ ಬೆಳಗಿನ ಜಾವ ಮನೆಯಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದನು. ಈತನಿಗೆ ಕುಡಿತದ ಚಟವಿತ್ತು ಎಂದು ಹೇಳಲಾಗುತ್ತಿದೆ. ಪ್ರಕರಣ ವಿನೋಬ ನಗರ ಪೊಲೀಸ್ ಠಾಣೆಯಲ್ಲಿ ಸಂಭವಿಸಿದೆ.
ಆನಂದಪುರದಲ್ಲಿ ನವೀನ್ ಎಂಬ 27 ವರ್ಷದ ಯುವಕ ಮನೆಯಲ್ಲಿ ತಂದೆ ಜಾತ್ರೆಗಾಗಿ ಸ್ವಚ್ಛ ಮಾಡುತ್ತಿದ್ದ ವೇಳೆ ಮನೆಯ ಒಳಗಡೆ ನೇಣಿಗೆ ಶರಣಾಗಿದ್ದಾನೆ. ಸಣ್ಣದಾಗಿ ಅಡಿಕೆ ವ್ಯಾಪಾರ ಮಾಡಿಕೊಂಡಿದ್ದ ನವೀನ ಇತ್ತೀಚೆಗೆ ಮೌನಿಯಾಗಿದ್ದನು.
ತಂದೆ ಹಲವು ಬಾರಿ ಕೇಳಿದರೂ ಏನೂ ಇಲ್ಲ ಎಂದು ಸುಮ್ಮನಾಗುತ್ತಿದ್ದನು. ನಿನ್ನೆ ಮನೆಯಲ್ಲೇ ಇದ್ದಾಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನೆ ಆನಂದಪುರ ಪೊಲೀಸ್ ಠಾಣೆಯಲ್ಲಿ ಸಂಭವಿಸಿದೆ.
Two separate cases of sui*cide
