ಫೀಡರ್ ಬಾಕ್ಸ್ ಬಳಿ ಯುಜಿ ಕೇಬಲ್ ಬ್ಲಾಸ್ಟ್! ಕೇಬಲ್ ವೈಯರ್ ಗಳು ಭಸ್ಮ- UG cable blast near feeder box! Cable wires burnt to ashes

 SUDDILIVE || SHIVAMOGGA

ಫೀಡರ್ ಬಾಕ್ಸ್ ಬಳಿ ಯುಜಿ ಕೇಬಲ್ ಬ್ಲಾಸ್ಟ್! ಕೇಬಲ್ ವೈಯರ್ ಗಳು ಭಸ್ಮ- UG cable blast near feeder box! Cable wires burnt to ashes    

UG, cable

ನಗರದಲ್ಲಿ ಸ್ಮಾರ್ಟ್ ಸಿಟಿ ಆದಾಗಿನಿಂದ ಒಂದಲ್ಲ ಒಂದು ಸಮಸ್ಯೆಗಳು ಎದುರಾಗುತ್ತಿವೆ. ಸ್ಮಾರ್ಟ್ ಸಿಟಿಯಿಂದ ಸ್ವರ್ಗನೇ ಧರೆಗಿಳಿಸಲಾಗುವುದು ಎನ್ನುತ್ತಿದ್ದ ಪುಡಾರಿಗಳು ಯಾವ ಬಿಲದಲ್ಲಿ ಹೊಕ್ಕಿ ಕುಳಿತಿದ್ದಾರೆ ಎಂಬುದನ್ನ ಹುಡುಕುವಂತಾಗಿದೆ. 

ಆರಂಭದಲ್ಲಿ ಸ್ಮಾರ್ಟ್ ಸಿಟಿಯ ಅಡಿಯಲ್ಲಿ ನಡೆದ ಕಾಮಗಾರಿಯಲ್ಲಿ ಅಳವಡಿಸಿದ ಭೂಗತ ಕೇಬಲ್ ಗಳೆ ಸ್ಪೋಟಗೊಳ್ಳುತ್ತಿದ್ದವು. ಇದರಿಂದ ಕೋಟ್ಯಾಂತರ ರೂ. ವೆಚ್ಚ ಮಾಡಿದ್ದ ಯುಜಿ ಕೇಬಲ್ ಕಾಮಗಾರಿಯನ್ನ ಬಿಟ್ಟು ಹಳೆಯ ಪದ್ಧತಿಗಳಾದ ವಿದ್ಯುತ್ ಕಂಬಗಳ ಮೂಲಕ ಮನೆಗಳ ವಿದ್ಯುತ್ ಸಂಪರ್ಕಗಳನ್ನ ಮುಂದು ವರೆಸಲು ಮೆಸ್ಕಾಂ ನಿರ್ಧರಿಸಿತ್ತು. 

ಮೆಸ್ಕಾಂನ ಈ ನಿರ್ಧಾರ ಕೋಟ್ಯಾಂತರ ರೂ ಸಾರ್ವಜನಿಕರ ತೆರಿಗೆ ಹಣವನ್ನ ಪೋಲು ಮಾಡಿದಂತಾಗಿತ್ತು. ಇದನ್ನ ಮನಗೊಂಡ ಸಂಘಟನೆಯೊಂದು ಬೀದಿಗಳಿದು ತೆರಿಗೆ ಹಣದಲ್ಲಿ ನಿರ್ಮಿಸಿರುವ ಯುಜಿ ಕೇಬಲ್ ಮೂಲಕವೇ ಮನೆಗಳಿಗೆ ವಿದ್ಯುತ್ ಸಂಪರ್ಕ ಒದಗಿಸಬೇಕು ಎಂದು ಪಟ್ಟು ಹಿಡಿದಿತ್ತು. 

ಈಗ ಸ್ಮಾರ್ಟ್ ಸಿಟಿ ಕಾಮಗಾರಿಯಲ್ಲಿ ನಡೆದಿರುವ ಯುಜಿ ಕೇಬಲ್ ಮೂಲಕವೇ ವಿದ್ಯುತ್ ಸಂಪರ್ಕ ಒದಗಿಸಲು ಮೆಸ್ಕಾಂ ನಿರ್ಧರಿಸಿತು. ಬೀದಿ ಮೇಲೆ ಇದ್ದ ಕಂಬಗಳನ್ನ ತೆಗೆದು ಯುಜಿ ಕೇಬಲ್ ಗಳ ಮೂಲಕ ವಿದ್ಯುತ್ ಸಂಪರ್ಕ ಒದಗಿಸಲಾಗುತ್ತಿದೆ. ಈಗಲೂ 15 ವಾರ್ಡ್ ಗಳಲ್ಲಿ ನಡೆದ ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ಬರುವ ಬಡಾವಣೆಗಳಲ್ಲಿ ವಿದ್ಯುತ್ ಕಂಬಗಳನ್ನ ಹಂತ ಹಂತವಾಗಿ ತೆಗೆಯಲಾಗುತ್ತಿದೆ. 

ಇದರಿಂದ ಫೈಬರ್ ಕೇಬಲ್ ಗಳ ಸಂಪರ್ಕದಲ್ಲಿ ವ್ಯತ್ಯಾಸವಾಗುತ್ತಿವೆ. ಮೊದಲು ಈ ಕಂಬಗಳ ಮೂಲಕವೇ ಟಿವಿ ಸಂಪರ್ಕದ ಕೇಬಲ್ ಗಳನ್ನ ಸಂಪರ್ಕಿಸಲಾಗಯತ್ತಿತ್ತು. ಈಗ ಕಂಬಗಳನ್ನ ತೆಗೆದಿರುವುದರಿಂದ ಸ್ಮಾರ್ಟ್ ಸಿಟಿ ಯೋಜನೆಯ ವಿದ್ಯುತ್ ಕಂಬಗಳನ್ನ ಕೇಬಲ್ ಆಪರೇಟರ್ ಗಳು ಅವಲಂಬಿಸುವಂತಾಗಿದೆ. ಈ ಕೇಬಲ್ ಗಳು ಯುಜಿ ಕೇಬಲ್ ನ ಬ್ಲಾಸ್ಟ್ ನಿಂದಾಗಿ ಸುಟ್ಟು ಹೋಗಿದೆ. 

ನಿನ್ನೆ ತಿಲಕ್ ನಗರದ ಮೊದಲನೆ ತಿರವಿನಲ್ಲಿ ಭೂಗತ ಕೇಬಲ್ ಗಳು ಫೀಡರ್ ಬಳಿ ಒಳಗಡೆಯೇ ಬ್ಲಾಸ್ಟ್ ಆಗಿ ಕಂಬದ ಮೇಲೆ ಇದ್ದ  ಟಿವಿ ಕೇಬಲ್ ಗಳು ಸುಟ್ಟು ಹೋಗಿವೆ. ನಿನ್ನೆ ರಾತ್ರಿ ಈ ಘಟನೆ ಸಂಭವಿಸಿದೆ. ಸಧ್ಯಕ್ಕೆ ಸಣ್ಣಮಟ್ಟದಲ್ಲಿ ಅವಘಡ ಸಂಭವಿಸಿದ್ದು ಏನೂ ಸಂಭವಿಸಿಲ್ಲ. ಸ್ಥಳಕ್ಕೆ ಅಗ್ನಿಶಾಮಕ ದಳದವರು ದಾವಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. 

UG cable blast near feeder box! Cable wires burnt to ashes

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close