SUDDILIVE || SHIVAMOGGA
ನಮಗೂ ಸಚಿವ ಸ್ಥಾನ ಕೇಳುವ ಹಕ್ಕಿದೆ-ಶಾಸಕ ಬೇಳೂರು- We also have the right to ask for ministerial berths - MLA Belur
ಮಂತ್ರಿ ಸ್ಥಾನದ ಬೇಡಿಕೆ ಮತ್ತೆ ಮುನ್ನೆಲೆಗೆ ಬಂದಿದ್ದು, ಶಾಸಕ ಬೇಳೂರು ಗೋಪಾಲ ಕೃಷ್ಣ ಸಹ ಮಂತ್ರಿಸ್ಥಾನದ ಆಸೆ ಹೊರ ಹಾಕಿದ್ದಾರೆ.
ಸಾಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನೂ ಸಿಎಂ ಆಗೋ ಆಸೆ ಇಲ್ಲ, ಸಿಎಂ ಅಗೊದು ಬಿಡೋದು ಹೈಕಂಮಾಡ್ ಬಿಟ್ಟ ವಿಚಾರವಾಗಿದೆ. ನಾನೂ ಒಂದು ಮಂತ್ರಿ ಸ್ಥಾನ ಕೊಡಿ ಎಂದು ಕೇಳಿದ್ದೆನೆ. ನಮಗೆ ಎಂಥ ಬೇಡ ಒಂದು ಮಂತ್ರಿ ಸ್ಥಾನ ಒಂದು ಕೊಡಿ ಎಂದು ಕೇಳಿಕೊಳ್ಳುತ್ತೇನೆ ಎಂದರು.
ಸಚಿವ ಜಾರಕಿಹೊಳೆಯವರು ಹಸಿರುಮಕ್ಕಿ ಸೇತುವೆ ಪರಿಶೀಲನೆ ನಡೆಸಿ ನಂತರ ಮಾಧ್ಯಮಗಳಿಗೆ ಗೋಪಾಲ ಕೃಷ್ಣ ಬೇಳೂರು ಸಿಎಂ ಯಾಕೆ ಆಗಬಾರದು ಎಂಬ ಕಿಡಿಯನ್ನ ಹಚ್ವಿದ್ದರು. ಇದರ ಬೆನ್ನಲ್ಲೇ ಪ್ರತಿಕ್ರಿಯಿಸಿದ ಶಾಸಕರು ಸಿಎಂ ಆಗೋ ಅಷ್ಟು ದೊಡ್ಡ ವ್ಯಕ್ತಿ ನಾನಲ್ಲ. ಇಡೀ ರಾಜ್ಯದಲ್ಲಿ ಕೆಲವು ಹಿರಿಯ ನಾಯಕರು ಇದ್ದಾರೆ. ಕೆಲವರನ್ನು ಬದಲಾಯಿಸಿ ಯುವಕರಿಗೆ ಅವಕಾಶ ಕೊಡಬೇಕು. ನಿಗಮ ಮಂಡಳಿಯ ಅಧ್ಯಕ್ಷರಿಗೆ ಸಂಪುಟ ಸ್ಥಾನಮಾನ ಕೊಟ್ಟು ನಮಗೆ ಮೂಗಿಗೆ ತುಪ್ಪ ಒರಿಸ ಬಾರದು ಎಂದು ಅಸಮಾಧಾನ ಹೊರಹಾಕಿದರು.
ಏನಾದರೂಒಂದು ಕೇಂದ್ರದ ನಾಯಕರು ಮಾಡಬೇಕು. ಉಳಿದವರಿಗೂ ಒಂದು ಅವಕಾಶ ಕೊಡಿ, ನಾನೂ ಮೂರು ಬಾರಿ ಗೆದ್ದಿದ್ದೇನೆ - ನಮ್ಮಗೂ ಕೇಳುವ ಹಕ್ಕಿದೆ. ಈ ಸರ್ಕಾರಕ್ಕರ ಇನ್ನು ಕೇವಲ ಎರಡುವರ್ಷ ಬಾಕಿ ಇದೆ. ಹಾಗಾಗಿ ನಮಗೂ ಒಂದು ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ರಾಜ್ಯದ ಮುಂದಿನ ಚುನಾವಣೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಅವಕಾಶ ಮಾಡಿಕೊಡಬೇಕು ಎಂದ ಬೇಳೂರು ಗೋಪಾಲಕೃಷ್ಣ ಪುನರುಚ್ಚರಿಸಿದ್ದಾರೆ.
