SUDDILIVE || SHIVAMOGGA
ಏನಿದು ತೀ.ನಾ. ಶ್ರೀನಿವಾಸರ 'ಒಣ ಸಗಣಿ ಹಸಿ ಸಗಣಿ' ಹೇಳಿಕೆ? What is T.N. Srinivas's 'dry dung and wet dung' statement?
ಹಾವೇರಿಯಲ್ಲಿ 1000 ದಿನಗಳ ಸದನಾ ಸಮಾವೇಶ ನಡೆದರೆ, ಶಿವಮೊಗ್ಗದಲ್ಲಿ ರೈತರ ಭೂಮಿ ಕಸಿದುಕೊಳ್ಳು ಸಮಾವೇಶ ನಡೆಯುತ್ತಿದೆ ಎಂದು ಮಲೆನಾಡ ಹೋರಾಟ ಸಮಿತಿ ತೀ.ನಾ.ಶ್ರೀನಿವಾಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಡಮನೆಯಲ್ಲಿ 16 ಮನೆಗಳಲ್ಲಿ 11 ಮನೆಗಳು ಒಕ್ಕಲೆಬ್ಬಿಸಲಾಗಿದೆ. ಐದು ಕುಟುಂಬ ಆ ಬೆಟ್ಟಗುಡ್ಡಗಳಲ್ಲಿ ವಾಸವಾಗಿದೆ. ಕಂದಾಯ ಮಂತ್ರಿ, ಕಂದಾಯ ಇಲಾಖೆಯನ್ನ ಕಿತ್ತುಹಾಕಬೇಕು. ರೈತ ಜಮೀನಿನ ಪೋಡಿ ಮಾಡಲು ಆದೇಶ ಮಾಡಿರುವ ಕಂದಾಯ ಸಚಿವರು ಮಲೆನಾಡಿನ ರೈತರ ಸಮಸ್ಯೆ ಬಂದಾಗ ಗಪ್ ಚುಪ್ ಆಗಿ ಬಿಡುತ್ತಾರೆ. ಪ್ರಗತಿ ಪರಿಶೀಲನೆ ಸಭೆ ನಡೆಸಲು ಅವರಿಗೆ ಇದುವರೆಗೂ ಸಾಧ್ಯವಾಗಿಲ್ಲ. ಪೋಡಿ ಪ್ರಕರಣಗಳು ಜಿಲ್ಲೆಯಲ್ಲಿ 10 ಪ್ರಕರಣ ನಡೆದಿಲ್ಲ. ಕಾಡು ಮಂತ್ರಿ ಶಿವಮೊಗ್ಗಕ್ಕೆ ಪಿಕ್ ನಿಕ್ ಗೆ ಬಂದಿದ್ದರು ಎಂದು ದೂರಿದರು.
ಜನರ ಸಮಸ್ಯೆ ಬಗೆಹರಿಯದೆ ಇರಲು ಕಾಂಗ್ರೆಸ್ ಬಿಜೆಪಿಯವರ ಹೊಂದಾಣಿಕೆ ರಾಜಕಾರಣ ಕಾರಣವಾಗಿದೆ. ಸಾಗರದ ಶಾಸಕರು, ಜಿಲ್ಲಾ ಉವರಿಸಚಿವರು ಸದನದಲ್ಲಿಮಲೆನಾಡಿನ ರೈತರ ಬಗ್ಗೆ ಮಾತನಾಡಿಲ್ಲ. ಸಂಸದರು ಕೇವಲ ರೈಲು, ವಿಮಾನ ನಿಲ್ದಾಣ ರಸ್ತೆಯ ಬಗ್ಗೆ ಮಾತ್ರ ಮಾತನಾಡುತ್ತಿದ್ದಾರೆ. ಹೋರಾಟ ಕಣ್ಮರೆಯಾಗಿದೆ.
ಕಾಗೋಡು, ದಲಿತ ಸಂಘರ್ಷ ಸಮಿತಿ, ಹೋರಾಟ ನಡೆಸಿದ್ದರು. ಈಗ ಆ ಹೋರಾಟ ಕಾಣುತ್ತಿಲ್ಲ. ಬೆಳಗಾವಿಯಲ್ಲಿ ಕಬ್ಬಿನ ದರಕ್ಕಾಗಿ ದಂಗೆಯಂತಹ ಹೋರಾಟ ನಡೆದಿದೆ. ಮಲೆನಾಡಿನಲ್ಲಿ ರೈತರ ಭೂಮಿ ಕಸಿದುಕೊಂಡರೂ ಚಳುವಳಿ ಕಾಣುತ್ತಿಲ್ಲ. ರಾಜಕಾರಣಿಗಳು ಒಣ ಸಗಣಿ ಹಸಿ ಸಗಣಿಯಾಗಿದ್ದಾರೆ. ಯಡಮನೆ ಪ್ರಕರಣದಲ್ಲಿ ಒಕ್ಕಲೆಬ್ಬಿಸಲ್ಲ ಎಂದು ಮಾಧ್ಯಮಗಳಲ್ಲಿ ರಾಜಕಾರಣಿಗಳು ಹೇಳುತ್ತಿದ್ದಾರೆ. ಮಲೆನಾಡಿನಲ್ಲಿ ಇನ್ನೊಂದು ಜನ್ಮ ಹುಟ್ಟಿ ಬಂದರೂ ಒಕ್ಖೆಬ್ಬಿಸಲು ಆಗೊಲ್ಲ ಎಂದರು.
ಇದೇ ನೆಲದಿಂದ ಹೋರಾಟ ನಡೆಸಿದ ಜಿಲ್ಲಾ ಉಸ್ತುವಾರಿ ಸಚಿವರು ಒಕ್ಜಲೆಬ್ಬಿಸೊಲ್ಲ ಎಂಬುದಕ್ಕೆ ಒಂದು ಪ್ರಗತಿ ಪರಿಶೀಲನ ಸಭೆ ನಡೆಸೊಲ್ಲ. ಹೀಗೆ ಮಾಧ್ಯಮಗಳಲ್ಲಿ ಹೇಳಿಕೆಕೊಟ್ಟು ಪಲಾಯಯನ ಆದರೆ ರೈತರ ಸಮಸ್ಯೆ ಬಗೆಹರಿಯೋದು ಹೇಗೆ? ಬಾಯಿ ಮಾತಲ್ಲಿ ಒಕ್ಕಲೆಬ್ಬಿಸೊಲ್ಲ ಎಂದರೆ ಹೇಗೆ ಸಭೆ ನಡೆಸಿ ಅಧಿಕಾರಿಗಳಿಗೆ ತಾಕೀತು ಮಾಡಿ. ಆಗ ಜನನೆಮ್ಮದಿಯ ಬದುಕು ಕಾಣುತ್ತಾರೆ ಎಂದರು.
What is T.N. Srinivas's 'dry dung and wet dung' statement?
