ಮೀಸಾತಿ ಹೆಚ್ಚಿಗೆಯನ್ನ ಶೆಡ್ಯೂಲ್ 9 ಗೆ ಸೇರಿಸಲು ಎರಡೂಪಕ್ಷ ವಿಫಲ, ಕಾಂಗ್ರೆಸ್ ನ ಸತ್ಯಶೋಧನ ಸಮಿತಿ ವರದಿ ಬಗ್ಗೆ ಉಗ್ರಪ್ಪನವರು ಹೇಳಿದ್ದು ಏನು? What did Ugrappa say about the Congress's fact-finding committee report?

SUDDILIVE || SHIVAMOGGA

ಮೀಸಾತಿ ಹೆಚ್ಚಿಗೆಯನ್ನ ಶೆಡ್ಯೂಲ್ 9 ಗೆ ಸೇರಿಸಲು ಎರಡೂಪಕ್ಷ ವಿಫಲ, ಕಾಂಗ್ರೆಸ್ ನ ಸತ್ಯಶೋಧನ ಸಮಿತಿ ವರದಿಯ ಬಗ್ಗೆ ಉಗ್ರಪ್ಪನವರು ಹೇಳಿದ್ದು ಏನು?Both parties have failed to include the quota increase in Schedule 9. What did Ugrappa say about the Congress's fact-finding committee report?

Ugrappa, factsfinding


ರಾಜ್ಯದಲ್ಲಿ 50 ಲಕ್ಷ ಜನ ವಾಲ್ಮೀಕಿ ಜನಾಂಗವಿದೆ ಎಸ್ ಸಿ ಎಸ್ ಟಿ ಸೇರಿಸಿದರೆ ನಾಲ್ಕು ಕೋಟಿ ಜನ ದಲಿತ ಸಮುದಾಯವಿದೆ ಇವರಿಗೆ ಕೇಂದ್ರ ಸರ್ಕಾರ ಶೆಡ್ಯೂಲ್ 9 ಗೆ ಸೇರಿಸುವ ಕೆಲಸ ಮಾಡುವಲ್ಲಿ ಎರಡೂ ಸರ್ಕಾರಗಳು ವಿಫಲವಾಗಿದೆ ಮಾಜಿ ಎಂಪಿ ವಿಎಸ್ ಉಗ್ರಪ್ಪ ಆರೋಪಿಸಿದರು. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 32% ಹಿಂದುಳಿದ ಸಮುದಾಯವಿದೆ. ಸಂವಿಧಾನದ 341ಎಸ್ ಸಿ 342 ಎಸ್ ಟಿ ಕಾಯ್ದೆ ಅಡಿ, ಜನಸಂಖ್ಯೆಯ ಆಧಾರದ ಮೇರೆಗೆ ಸಂವಿಧಾನ ನೀಡಬೇಕೆಂದು ಸಂವಿಧಾನ ಹೇಳಿದೆ. ಗ್ರಾಪಂ, ತಾಪಂ ಜಿಪಂ ಚುನಾವಣೆಗೆ ಜನಂಖ್ಯಾ ಆಧಾರದ ಮೇರೆಗೆ ಮೀಸಲಾತಿ ನೀಡಲಾಗಿದೆ. ಎಸ್ ಸಿ ಟಿಪಿ ಯಲ್ಲೂ ಹಣವನ್ನ  ಮೀಸಲಿಡಬೇಕಿದೆ. 2022 ರಲ್ಲಿ ಆಗಿನ ಬಿಜೆಪಿ ಸರ್ಕಾರ ನ್ಯಾ ನಾಗಮೋಹನ್ ದಾಸ್ ವರದಿ ಆಧಾರದ ಮೇರೆ ಎಸ್ ಟಿ ಗೆ 17%, obc ಗೆ 32 ಎಸ್ ಸಿಗೆ 7% ನೀಡಲಾಗಿ ಕಾನೂನು ಮಾಡಲಾಗಿದೆ ಎಂದರು. 

ನ್ಯಾಯಾಲಯಗಳು 50% ಮೀಸಲಾತಿ ಹೆಚ್ಚಿಸುವಂತಿಲ್ಲ ಎಂದು ಆದೇಶಿಸಿರುವುದು ನಿಜ ಆದರೆ ಇಂದಿರಾ ಸಹನೆ ಕೇಸ್ ಲ್ಲಿ ತುರ್ತು ಅನಿಸಿದರೆ 50% ಹೆಚ್ಚಿಸಬಹುದಾಗಿದೆ ಎಂದು ನ್ಯಾಯಾಲಯಗಳೆ ಹೇಳಿಕೊಂಡಿವೆ.  ನಮ್ಮ ರಾಜ್ಯದಲ್ಲಿ ಬಿಜೆಪಿ ಮಾಡಿದ ಕಾನೂನು, ಎಸ್ ಸಿ ಎಸ್ಟಿ ಮತ್ತು ಒಬಿಸಿ ಮೂವರಿಗೂ ಸೇರಿ 56% ಆಗಿ ಮೂರುವರ್ಷ ಕಳೆದಿದೆ. ಇದನ್ನ ಕಾನೂನು ಮಾಡದೆ ಜಾರಿಯಾಗಲ್ಲ. ಈ ಸತ್ಯವನ್ನ ಅರಿತ ರಾಹ್ಯ ಕಾಂಗ್ರೆಸ್ ಕೇಂದ್ರಕ್ಕೆ ಮತ್ತೊಂದು ಶಿಫಾರಸ್ಸು ಮಾಡಿದೆ.   

ಈ ಕಾನೂನನ್ನ ಸಂವಿಧಾನದ ಶೆಡ್ಯೂಲ್ 9 ಗೆ ಇಟ್ಟು ಕಾಯ್ದೆ ಮಾಡದಾಗ ಮಾತ್ರ ಜಾರಿಯಾಗಲಿದೆ.  ರಾಜ್ಯ ಸೆಕ್ರೆಟರಿ ವಂದಿತಾ ಶರ್ಮಾರವರ ಪ್ರಕರಣವನ್ನ 2023 ರಲ್ಲಿ ಕೇಂದ್ರದ ಹೋಮ್ ಸೆಕ್ರೆಟರಿ ಅವರಿಗೆ ಪತ್ರ ಬರೆದಿದ್ದರು. ಅಲ್ಲಿಂದ  ವಾಪಾಸ್ ಪತ್ರಬಂದಿದೆ. ಮಿನಿಸ್ಟ್ರಿ ಆಫ್  ಟ್ರೈಬಲ್ ಅಫೇರ್ಸ್ ಗೆ ಬರೆದಿದೆ ಎಂದು ಉತ್ತರ ಬರೆದಿದೆ ಬಿಟ್ಟರೆ ಮತ್ಯಾವ ಪ್ರಯೋಜನವೂ ಆಗಿಲ್ಲ ಎಂದರು. 

ಇಲ್ಲಿಯವರೆಗೂ ಕೇಂದ್ರ ಸರ್ಕಾರ 2022 ಆಕ್ಟ್ ನ್ನ ಶೆಡ್ಯೂಲ್ 9 ಕ್ಕೆ ಸೇರಿಸದ ಕಾರಣ 4 ಕೋಟಿ ಕನ್ನಡಿಗರ ಭವಿಷ್ಯದ ಮೇಲೆ ಚಪ್ಪಡಿ ಕಲ್ಲು ಎಳೆಯಲಾಗಿದೆ. ನೀಸಲಾತಿ ಯಾರಪ್ಪನ ಸ್ವತ್ತಲ್ಲ, ಭಿಕ್ಷೆಯಲ್ಲ. ಇದು ಹಕ್ಕು. ಮೀಸಲಾತಿಯನ್ನ‌ಸಾಮಾನ್ಯದವರು, ಮಹಿಳೆಯರು ಕೇಳುವ ಪರಿಸ್ಥಿತಿ ಇದೆ. ಇಂದಿರಾ ಸಹನಿ ಕೇಸನಲ್ಲಿ ಮೇಲ್ವರ್ಗದ ಆರ್ಥಿಕವಾಗಿ ಹಿಂದುಳಿದ ಶೆಟ್ಟರು, ರಜಪೂತ್, ಬ್ರಾಹ್ಮಣರು ಸೇರಿ ಹಲವು ಸಮುದಾಯಕ್ಕೆ 10% ಮೀಸಲಾತಿ ತಂದಿದೆ. ಮತ್ತೆ ಸಿಎಂ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಸಭೆ ನಡೆಸಿ ಮತ್ತೊಂದು ಪತ್ರ ಬರೆಯಲಾಗಿದೆ. ಎರಡೂ ಸರ್ಕಾರ ಎಸ್ ಸಿ ಎಸ್ಟಿಗೆ ಮೀಸಲಾತಿ ನೀಡುವಲ್ಲಿ ವಿಫಲರಾಗಿದ್ದೀರೆ ಎಂದು ದೂರಿದರು. 

ಶಿವಮೊಗ್ಗ ಜಿಲ್ಲೆಯಲ್ಲಿ ಒಂದು ಲಕ್ಷ ಜನ ದಲಿತ ಸಮುದಾಯವಿದೆ. ವಿಜೇಂದ್ರ, ಬಿಎಸ್ ವೈ, ರಾಘವೇಂದ್ರ ಬಾಯಿಬಿಡುತ್ತಿಲ್ಲವೇಕೆ. ಸಚಿವ ಮಧು ಬಂಗಾರಪ್ಪ ಬಾಯಿಬಿಡುತ್ತಿಲ್ಲ. ಮೂರು ಪಕ್ಷದವರು ಕಾನೂನನ್ನ ಶೆಡ್ಯೂಲ್ 9 ಗೆ ಸೇರಿಸುವುದರ ಬಗ್ಗೆ ಆಸಕ್ತಿಯಿಲ್ಲ ಏಕೆ ಪ್ರಶ್ನಿಸಿದರು. 

ಎಸ್ ಟಿಗೆ ಕುರುಬರನ್ನ ಸೇರಿಸಲು ಉತ್ಸುಕರಿರುವ ರಾಜಕಾರಣಿಗಳು ಮೀಸಲಾತಿ ಶೇಕಡವನ್ನ ಹೆಚ್ಚಿಸಬೇಕು. ಆಲ್ ಪಾರ್ಟಿ ಡೆಲಿಗೇಶನ್ ನ್ನ ಪ್ರಧಾನಿ ಬಳಿಗೆ ಕರೆದುಕೊಂಡು ಹೋಗಿ ಎಂದರು. 

ಸತ್ಯಶೋದನ ಸಮಿತಿಯ ವರದಿಗೆ ಹಾರಿಕೆ ಉತ್ತರ ಕೊಟ್ಟ ಉಗ್ರಪ್ಪ

ಕಾಂಗ್ರೆಸ್ 2024 ನೇ ಸಾಲಿನಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಹೀನಾಯವಾಗಿ ಸೋತಿತ್ತು. ಈ ಬಗ್ಗೆ ಎಸ್ ವಿ ಉಗ್ರಪ್ಪನವರ ನೇತೃತ್ವದಲ್ಲಿ ಸತ್ಯಶೋಧನ ಸಮಿತಿ ರಚಿಸಿ ವರದಿ ಸಹ ಮಾಡಲಾಗಿತ್ತು. ಆದರೆ ಆ ಬಗ್ಗೆ ಕಾಂಗ್ರೆಸ್ ನ ಹೀನಾಯ ಸ್ಥಿತಿಗೆ ಬಿಜೆಪಿ ಜೊತೆಗೆ ಹೊಂದಾಣಿಕೆ ಕಾರಣನಾ? ಎಂಬ ಮಾಧ್ಯಮಗಳ  ಪ್ರಶ್ನೆಗೆ ನುಣಚಿಕೊಂಡ ಸಮಿತಿಯ ಅಧ್ಯಕ್ಷ ಉಗ್ರಪ್ಪ ವರದಿಗೆ ಮಾತ್ರ ನಮ್ಮ ಸಮಿತಿ ಸೀಮಿತ ಎಂದರು. 

ಕಾಂಗ್ರೆಸ್ ಪಕ್ಷದ ಹೊಂದಾಣಿಕೆಯಿಂದ ಮತ್ತೆ ಗೀತಾ ಶಿವರಾಜ್ ಕುಮಾರ್ ನ್ನ ಕಣಕ್ಕೆ ಇಳಿಸಲಾಗಿತ್ತು. ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಇನ್ನೇನು ಕುಮಾರ ಬಂಗಾರಪ್ಪ ಘೋಷಣೆಯಾಗಬೇಕಿತ್ತು. ಅಷ್ಟರಲ್ಲಿ ಗೀತಾ ಶಿವರಾಜ್ ಕುಮಾರ್ ಹೆಸರನ್ನ‌ಘೋಷಿಸಲಾಗಿತ್ತು. ಅಣ್ಣತಮ್ಮಂದಿರ ಹೊಂದಾಣಿಕೆ ಕೊರತೆಯೂ ಆ ವೇಳೆ ಎದ್ದುಕಂಡಿತ್ತು. ಈ ಬಗ್ಗೆಯಾಗಲಿ ಹಾಗೂ ಶಿವಮೊಗ್ಗದಲ್ಲಿ ಕಾಂಗ್ರೆಸ್ ಸುಸ್ಥಿತಿಯಲ್ಲಿದೆಯಾ ಎಂಬ ಪ್ರಶ್ನೆಗೆ ಉಗ್ರಪ್ಪ ಪಕ್ಷ ಕಟ್ಟುವ ಕೆಲಸ ನಿತರವಾಗಿ ನಡೆಯುತ್ತಿದೆ ಎಂಬ ಹಾರಿಕೆ ಕೊಟ್ಟು ನುಣಚಿಕೊಂಡರು. 

What did Ugrappa say about the Congress's fact-finding committee report?    

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close