SUDDILIVE || SHIVAMOGGA
ನ್ಯಾಯಾಲಯಕ್ಕೆ ದೋಖಾ-Fraud in court
ನಕಲಿ ದಾಖಲೆ ಸೃಷ್ಟಿಸಿ ಹಾಗೂ ವ್ಯಕ್ತಿಯೊಬ್ಬರಂತೆ ನಟಿಸಿ ನ್ಯಾಯಾಲಯಕ್ಜೆ ಸುಳ್ಳು ಮಾಹಿತಿ ನೀಡಿ ಆರೋಪಿಯೊಬ್ಬರಿಗೆ ಜಾಮೀನು ಕೊಡಿಸಿ ಮೋಸ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಶಿವಮೊಗ್ಗದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಹಿರಿಯ ಶಿರಸ್ತೇದಾರ್ ಅವರು ನೀಡಿದ ದೂರಿನ ಮೇರೆಗೆ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಏನಿದು ಪ್ರಕರಣ?
2019 ರಲ್ಲಿ ದಾಖಲಾಗಿದ್ದ ಪ್ರಕರಣವೊಂದರ ಮೂರನೇ ಆರೋಪಿ ಮಧು ಎಂಬುವವರ ಪರವಾಗಿ ಕೆ. ರಾಜಣ್ಣ ಎಂಬುವವರ ಹೆಸರಿನಲ್ಲಿ ವ್ಯಕ್ತಿಯೊಬ್ಬರು ಜಾಮೀನು ನೀಡಿದ್ದರು. ಬೆಂಗಳೂರು ದಕ್ಷಿಣ ತಾಲೂಕಿನ ಮಾರೇನಹಳ್ಳಿಯ ಜಮೀನಿನ ಆರ್.ಟಿ.ಸಿ, ಆಧಾರ್ ಕಾರ್ಡ್ ಹಾಗೂ ಅಫಿಡವಿಟ್ ಸಲ್ಲಿಸಲಾಗಿತ್ತು. 2019ರ ಜುಲೈ 9 ರಂದು ಕೆ. ರಾಜಣ್ಣ ಎಂದು ವ್ಯಕ್ತಿಯೊಬ್ಬರು ನ್ಯಾಯಾಲಯಕ್ಕೆ ಹಾಜರಾಗಿ ಆರೋಪಿಯನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಿದ್ದರು
ಜಮೀನು ಪಡೆದ ಆರೋಪಿಯು ನ್ಯಾಯಾಲಯಕ್ಕೆ ಹಾಜರಾಗದಿದ್ದಾಗ, ಜಾಮೀನುದಾರ ರಾಜಣ್ಣ ಅವರಿಗೆ ನೋಟಿಸ್ ಮತ್ತು ವಾರೆಂಟ್ ಜಾರಿಗೊಳಿಸಲಾಯಿತು. ಈ ವೇಳೆ ವಿಚಾರಣೆಗೆ ಹಾಜರಾದ ಅಸಲಿ ಜಮೀನು ಮಾಲೀಕ ಕೆ. ರಾಜಣ್ಣ ಅವರು, ತಾವು ಕಾಮಾಕ್ಷಿಪಾಳ್ಯದಲ್ಲಿ ವಾಸವಿದ್ದು ಯಾರಿಗೂ ಜಾಮೀನು ನೀಡಿಲ್ಲ ಎಂದು ತಿಳಿಸಿದ್ದರು. ಈ ಹಿನ್ನೆಲೆ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Fraud in court
