SUDDILIVE || SHIVAMOGGA
ಪುರುದಾಳುವಿನಲ್ಲಿ ಕಾಡಾನೆಗಳ ಹಾವಳಿ, ಅಧಿಕಾರಿಗಳ ವಿರುದ್ಧ ರೈತರ ಆಕ್ರೋಶ- Wild elephants in Purudalu, farmers' anger against officials
ಶಿವಮೊಗ್ಗದಲ್ಲಿ ಮಾನವ - ವನ್ಯಜೀವಿ ಸಂಘರ್ಷ ಮುಂದುವರೆದಿದೆ. ಶಿವಮೊಗ್ಗದ ಪುರದಾಳು ಗ್ರಾಮದಲ್ಲಿ ಮತ್ತೇ ಕಾಡಾನೆ ದಾಳಿಯಿಟ್ಟು ಹಾವಳಿ ನಡೆಸಿದೆ.
ಪುರದಾಳು ಗ್ರಾಮದ ಬೇಳೂರಿನಲ್ಲಿ ತಡರಾತ್ರಿ ಕಾಡಾನೆ ದಾಳಿ ನಡೆಸಿದೆ. ತೋಟಕ್ಕೆ ನುಗ್ಗಿ ಸಾಲು ಸಾಲು ಅಡಿಕೆ ಗಿಡಗಳನ್ನ ನಾಶ ಮಾಡಿರುವ ಕಾಡಾನೆ ಗುಮ್ಮನಬೈಲಿನಲ್ಲಿರುವ ಉಷಾ ಎಂಬುವರ ತೋಟದಲ್ಲಿ 23ಕ್ಕೂ ಹೆಚ್ಚು ಅಡಿಕೆ ಗಿಡ ಮುರಿದು ಹಾಕಿದೆ.
ಫಸಲು ಬರುತ್ತಿದ್ದ ಬೃಹತ್ ಅಡಿಕೆ ಮರಗಳನ್ನೇ ಕಾಡಾನೆ ಮುರಿದಿದೆ. ತೆಂಗಿನ ಗಿಡಗಳನ್ನ ಸಹ ಮುರಿದು ತಿಂದಿದೆ. ರಾತ್ರಿ ವೇಳೆ ಬೇಳೂರು ಗ್ರಾಮದಲ್ಲಿ ಮನೆಯ ಬಳಿಯೇ ಬರುತ್ತಿರುವ ಕಾಡಾನೆಗಳ ನಿರಂತರ ದಾಳಿಯಿಂದ ಗ್ರಾಮಸ್ಥರು ಕಂಗಾಲಾಗಿದ್ದಾರೆ.
ಕಾಡಾನೆಗಳು ಇತ್ತೀಚಿಗಷ್ಟೇ ಪುರದಾಳು- ಶೆಟ್ಟಿಹಳ್ಳಿ ರಸ್ತೆಯಲ್ಲಿ ಕಾಣಸಿಕೊಂಡಿದ್ದವು. ಪುರದಾಳು ಗ್ರಾಮದ ಬಳಿ ಶೆಟ್ಟಿಹಳ್ಳಿ ರಸ್ತೆಯಲ್ಲಿ ಕಾಣಿಸಿಕೊಳ್ಳುತ್ತಿದ್ದವು. ಬೆಳೆ ನಾಶದ ಪರಿಹಾರದ ಜೊತೆಗೆ ಕಾಡಾನೆ ಹಾವಳಿ ತಡೆಗಟ್ಟಲು ರೈತರು ಒತ್ತಾಯಿಸಿದ್ದಾರೆ.
ಅಧಿಕಾರಿಗಳು ಇಪಿಟಿ ಅಥವಾ ಸೋಲಾರ್ ಫೆನ್ಸಿಂಗ್ ಮಾಡುವಂತೆ ರೈತರು ಒತ್ತಾಯಿಸಿದ್ದಾರೆ. ಅರಣ್ಯ ಇಲಾಖೆ ನಿರ್ಲಕ್ಷ್ಯದ ವಿರುದ್ಧ ರೈತರು ಮತ್ತು ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
