ಕೋಟೆ ಮಾರಿಕಾಂಬ ಜಾತ್ರೆ ಕುರಿತ ಆಲ್ಬಂ ಗೀತೆ ಬಿಡುಗಡೆಗೆ ಸಜ್ಜು-Album song about Kote Marikamba fair set for release

 SUDDILIVE || SHIVAMOGGA

ಕೋಟೆ ಮಾರಿಕಾಂಬ ಜಾತ್ರೆ ಕುರಿತ ಆಲ್ಬಂ ಗೀತೆ ಬಿಡುಗಡೆಗೆ ಸಜ್ಜು-Album song about Kote Marikamba fair set for release  

Album, kotemari


ನಗರದ ಕೋಟೆ ಶ್ರೀ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವದ ಪ್ರಯುಕ್ತ ಮಾರಿ ಜಾತ್ರೆ ಆಲ್ಬಂ ಗೀತೆ ಎಂಬ ಹೊಸ ಹಾಡನ್ನು ಸಿದ್ಧಪಡಿಸಲಾಗಿದ್ದು, ಇಂದು ಸಂಜೆ ಬಿಡುಗಡೆಯಾಗಲಿದೆ. ಈ 'ಹಿಂದೆ ಹೇ ಮಗ ಇದು ಶಿವಮೊಗ್ಗ' ಎಂಬ ಹಾಡಿನ ಮೂಲಕ ಯಶಸ್ವಿಯಾಗಿದ್ದ ತಂಡವೇ ಈ ಹೊಸ ಗೀತೆಯನ್ನು ನಿರ್ಮಿಸಿದ್ದು, ಇಂದು ಸಂಜೆ 6:00 ಗಂಟೆಗೆ ಸ್ಟೈಲ್ ಡ್ಯಾನ್ಸ್ ಕ್ರೀವ್ ಸ್ಟುಡಿಯೋದಲ್ಲಿ ಹಾಡು ಬಿಡುಗಡೆಯಾಗಲಿದೆ.

ಈ ಕುರಿತು ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸ್ಟೈಲ್ ಡ್ಯಾನ್ಸ್ ಕ್ರೀವ್ ಸಂಸ್ಥಾಪಕ, ಗೀತೆ ಸಾಹಿತಿ ಹಾಗೂ ಗಾಯಕ ಶಶಿಕುಮಾರ್ ಎನ್ ಫೆಬ್ರವರಿ 24 ರಿಂದ 28ರ ವರೆಗೆ ನಡೆಯಲಿರುವ ಜಾತ್ರೆಗಾಗಿ ಈ ವಿಶೇಷ ಹಾಡನ್ನು ಸಿದ್ಧಪಡಿಸಲಾಗಿದೆ ಎಂದು ತಿಳಿಸಿದರು. ಭಕ್ತರು ದೇವಿಗೆ ವಿವಿಧ ರೀತಿಯಲ್ಲಿ ಹರಕೆ ತೀರಿಸುವಂತೆ, ತಾವು ಈ ಹಾಡನ್ನು ಅರ್ಪಿಸುವ ಮೂಲಕ ಹರಕೆ ಸಲ್ಲಿಸುತ್ತಿರುವುದಾಗಿ ಅವರು ಹೇಳಿದರು. ಸುಮಾರು 600 ವರ್ಷಗಳ ಇತಿಹಾಸವಿರುವ ಈ ಜಾತ್ರೆಯ ಹಿನ್ನೆಲೆಯನ್ನು ಇಟ್ಟುಕೊಂಡು ರಚಿಸಲಾಗಿರುವ ಈ ಹಾಡು 3 ನಿಮಿಷ 30 ಸೆಕೆಂಡ್‌ಗಳ ಅವಧಿಯದ್ದಾಗಿದ್ದು, ಈಗಾಗಲೇ ಬಿಡುಗಡೆಯಾಗಿರುವ ಟ್ರೈಲರ್‌ಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು.

ಈ ಹಾಡಿಗೆ ಪ್ರಿನ್ಸ್ ಜೋಸೆಫ್ ಮೈಸೂರು ಸಂಗೀತ ನೀಡಿದ್ದರೆ, ಶಶಿಕುಮಾರ್ ಎನ್. ಸಾಹಿತ್ಯ ಬರೆದು ಹಾಡಿದ್ದಾರೆ. ಜಿ.ಎಸ್. ಡೋನ್ ಗಣೇಶ್ ಅವರ ಛಾಯಾಗ್ರಹಣ, ಪಿಕ್ಚರ್ ಪೋಯೆಟ್ ಸುನಿಲ್ ಅವರ ಸಂಕಲನ ಹಾಗೂ ಸುಜನ್ ಮತ್ತು ಮದನ್ ಜಿ. ಹೊಸಮನೆ ಅವರ ಪೋಸ್ಟರ್ ವಿನ್ಯಾಸ ಈ ಹಾಡಿಗಿದೆ. ಈ ವಿಶಿಷ್ಟ ಪ್ರಯತ್ನಕ್ಕೆ ಸುನಿಲ್ ಎ.ಹೆಚ್., ಅಭೀಜಿತ್ ನವುಲೆ, ಗೌತಮ್ ಎಸ್.ಆರ್., ಅಮೃತ್, ರಘು ಗುಂಡ್ಲು, ರಾಕೇಶ್ ಸೋಮಿನಕೊಪ್ಪ ಹಾಗೂ ಕೋಟೆ ಶ್ರೀ ಮಾರಿಕಾಂಬ ಸೇವಾ ಸಮಿತಿ ಮತ್ತು ಸ್ಟೈಲ್ ಡ್ಯಾನ್ಸ್ ಕ್ರೀವ್ ಸ್ಟುಡಿಯೋ ಸಂಪೂರ್ಣ ಬೆಂಬಲ ನೀಡಿದೆ ಎಂದರು.

Album song about Kote Marikamba fair set for release

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close