SUDDILIVE || ANANDAPUR
ಸಾಲಬಾದೆ ಬಳ್ಳಿಬೈಲಿನ ರೈತ ಬಲಿ-Farmer from Ballibail dies due to debt
ಸಾಗರ ತಾಲೂಕು ಆನಂದಪುರ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ಬಳ್ಳಿ ಬೈಲು ಗ್ರಾಮದಲ್ಲಿ ಸಾಲಬಾಧೆ ತಾಳಲಾರದೆ ರೈತನೋರ್ವ ಮನೆಯ ಹಿತ್ತಲಿನಲ್ಲಿದ್ದ ಮಾವಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ
ಈ ಘಟನೆ ನಿನ್ನೆ ನಡೆದಿದ್ದು ಮನೆಯ ಹಿಂಬದಿ ಎಲ್ಲಿರುವ ಮಾವಿನ ಮರಕ್ಕೆ ಗೋಪಾಲ ಎಂ ಎಂಬ 56 ವರ್ಷದ ರೈತನು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಮೃತರು ಬ್ಯಾಂಕುಗಳಿಂದ ಮೈಕ್ರೋ ಫೈನಾನ್ಸ್ ಗಳಿಂದ ಸುಮಾರು 5 ಲಕ್ಷದವರೆಗೂ ಸಾಲ ಮಾಡಿಕೊಂಡಿದ್ದು ಅಧಿಕ ಕೈಸಾಲ ಸಹ ಆಗಿದೆ ಎಂದು ಕೇಳಿಬಂದಿದೆ.
ಸಾಲ ತೀರಿಸಲಾಗದ ಚಿಂತೆಯಲ್ಲಿದ್ದ ಗೋಪಾಲ್ ಮಾನಸಿಕವಾಗಿ ನೊಂದಿ ಹೋಗಿದ್ದರು ತುಂಬಾ ಸಮಯದವರೆಗೆ ಮನೆಗೆ ಬಾರದಿದ್ದಾಗ ಕುಟುಂಬಸ್ಥರು ಆತಂಕಗೊಂಡು ಹುಡುಕಾಡಲು ಆರಂಭಿಸಿದ್ದರು ಈ ವೇಳೆ ಮನೆಯ ಹಿತ್ತಲಿನಲ್ಲಿ ಇರುವ ಮಾವಿನ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಗೋಪಾಲ್ ಪತ್ತೆಯಾಗಿದ್ದರು ಘಟನೆ ಆನಂದಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದೆ.
Farmer from Ballibail dies due to debt

