SUDDILIVE || SHIVAMOGGA
ಕುಡಿದ ಮತ್ತಿನಲ್ಲಿ ಕಲ್ಲು ಎತ್ತುಹಾಕಿ, ಮಚ್ಚಿನಿಂದ ಗಾರೆ ಸೀನನ ಕೊಲೆ- Murder of a drunken man by throwing stones and hitting him with a machete
ಗಾಜನೂರಿನಲ್ಲಿ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.
ದಿನಾಂಕ 12/2/26 ರ ರಾತ್ರಿ ಗಾಜನೂರಿನ ಸೊಸೈಟಿ ಬಳಿ ಶ್ರೀನಿವಾಸ ಬಿನ್ ಗಂಗಾಧರ, 36 ( ಗಾರೆ ಕೆಲಸ , ಹೊಸಮನೆ 6 ನೇ ಕ್ರಾಸ್ ,ಬೋವಿ ಕಾಲೋನಿ , ಶಿವಮೊಗ್ಗ ) ರನ್ನು ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದು ಈ ಬಗ್ಗೆ ಮೃತ ಶ್ರೀನಿವಾಸ ಅವರ ಸಹೋದರ ಶ್ರೀಧರ .ಜಿ. ಬಿನ್ ಗಂಗಾಧರ, ಹೊಸಮನೆ ರವರು ನೀಡಿದ ದೂರಿನ ಮೇರೆಗೆ ತುಂಗಾನಗರ ಪೋಲೀಸ್ ಠಾಣೆ ದೂರು ದಾಖಲಾಗಿತ್ತು.
ಎಸ್ಪಿ ನಿಖಿಲ್ ಕುಮಾರ್ ಬಿ, ಅಡಿಷನಲ್ ಎಸ್ಪಿ ಕಾರಿಯಪ್ಪ ಎ ಜಿ ಹಾಗೂ ರಮೇಶ್ ಕುಮಾರ್ ಡಿವೈಎಸ್ಪಿ ಬಾಬು ಆಂಜನಪ್ಪ ರವರ ಮುಂದಾಳತ್ವದಲ್ಲಿ, ತನಿಖೆ ಮುಂದುವರಿಸಿದ ತುಂಗಾನಗರ ಪಿ ಐ ರವರಾದ ಕೆ.ಟಿ.ಗುರುರಾಜ ಸಿಬ್ಬಂದಿಗಳಾದ ಕಿರಣ್ ಮೋರೆ, ಅರುಣ ಕುಮಾರ್, ನಾಗಪ್ಪ,ರಂಗನಾಥ ರ ತಂಡ ಪ್ರಕರಣದ ಆರೋಪಿಗಳಾದ
1) ಕೃಷ್ಣ ಮೂರ್ತಿ ಬಿನ್ ಲೇಟ್ ಲಿಂಗಪ್ಪ , 44 ವರ್ಷ, ಬಟ್ಟೆ ಅಂಗಡಿಯಲ್ಲಿ ಕೆಲಸ ದೊಡ್ಡಕೇರಿ ಬೀದಿ , ಗಾಜನೂರು. ಮತ್ತು 2) ಮಲ್ತೇಶ ಬಿನ್ ಶಿವಪ್ಪ, 21 ವರ್ಷ, ಗಾರೆ ಕೆಲಸ ದೊಡ್ಡ ಕೇರಿ ಬೀದಿ, ಗಾಜನೂರು ರವರನ್ನು ಬಂದಿಸಿರುತ್ತಾರೆ.
ಕುಡಿದ ಮತ್ತಿನಲ್ಲಿ ಮಾತಿಗೆ ಮಾತು ಬೆಳೆದು ಆರೋಪಿಗಳು ಕಲ್ಲು ಎತ್ತಿಹಾಕಿ ಕತ್ತಿಯಿಂದ ಚುಚ್ಚಿ ಕೊಲೆ ಮಾಡಿರುವುದು ತನಿಖೆಯಲ್ಲಿ ತಿಳಿದುಬಂದಿರುತ್ತದೆ. ತನಿಖೆ ಮುಂದುವರೆದಿರುತ್ತದೆ.
Murder of a drunken man by throwing stones and hitting him with a machete
