SUDDILIVE || THIRTHAHALLI
ಆಸ್ತಿ ಜಗಳದಲ್ಲಿ ಫೈನಾನ್ಷಿಯರ್ ಸಹೋದರನ ಕಾಲು ಮುರಿದು ಸೇಫ್ ಆಗ್ಬಿಟ್ನಾ?Why was the financier beaten to the point of breaking his thigh bone in a property dispute between brothers?
ತೀರ್ಥಹಳ್ಳಿಯ ಕಟ್ಟೆಹಕ್ಲುನಲ್ಲಿ ಮನೆ ಆಸ್ತಿ ವಿಚಾರಕ್ಕೆ ಸಹೋದರನ ನಡುವೆ ಗಲಾಟೆಯಾಗಿದ್ದು ಈ ಗಲಾಟೆಯಲ್ಲಿ ಅಣ್ಣನನ್ನ ತಮ್ಮ ಕೈಯಿಂದ ತಳ್ಳಿದಾಗ ಕೆಳಕ್ಕೆ ಬಿದ್ದ ಅಣ್ಣನ ಮೇಲೆ ಫೈನಾಷಿಯರ್ ಒಬ್ಬ ಕಬ್ಬಿಣದ ರಾಡಿನಿಂದ ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ.
ಕಟ್ಟೆಹಕ್ಲುವಿನ ಸಂದೇಶ್ ಎಂಬುವರು ಫೋನ್ ಪೇ ಮಾಡಿಸಲು ಅಮರ್ ನಾಥ್ ಶೆಟ್ಟರ ಫೈನಾನ್ಸ್ ಮುಂದೆ ಹೋದಾಗ ಅಲ್ಲೇ ಇದ್ದ ಸಹೋದರ ಸಂತೋಷ್ ಯಾನೆ ಅಭಿ ಎಂಬಾತ ನಿಂತಿದ್ದು ಮನೆಯ ಆಸ್ತಿಯ ಬಗ್ಗೆ ಕೇಳಿದಾಗ ಸಹೋದರ ಸಂತೋಷ್ ಸಂದೇಶ್ ಎಂಬುವರನ್ನ ಕೈಯಿಂದ ತಳ್ಳಿದ್ದಾನೆ.
ಕೆಳಕ್ಕೆ ಬಿದ್ದ ಸಂದೇಶನ ಮೇಲೆ ಫೈನಾನ್ಷಿಯರ್ ಕಬ್ಬಿಣದ ರಾಡಿನಿಂದ ಬಲಭಾಗದ ತೊಡೆಗೆ ರಾಡಿನಿಂದ ಹಲ್ಲೆ ನಡೆಸಿದ್ದಾರೆ. ಸಂದೇಶರವರು ತೊಡೆಯ ಮೂಳೆ ಮುರಿದಿದ್ದು ಪ್ರಜ್ಞೆ ಕಳೆದುಕಡಿದ್ದಾರೆ. ತಕ್ಷಣವೇ ಅವರನ್ನ ತೀರ್ಥಹಳ್ಳಿ ಜೆಸಿ ಆಸ್ಪತ್ರೆಗೆ ಸಾಗಿಸಲಾಗಿದೆ. ನಂತರ ಅವರನ್ನ ಮೆಗ್ಗಾನ್ ಗೆ ಸೇರಿಸಲಾಗಿದೆ. ಪ್ರಕರಣ ತೀರ್ಥಹಳ್ಳಿಯಲ್ಲಿ ದಾಖಲಾಗಿದೆ.
ಸಂದೇಶ್, ಸಂತೋಷ್ ಮತ್ತು ಸಹೋದರಿಯು ಸೇರಿ ಮೂವರು ನಾಗೇಶ್ ಗೌಡರಿಗೆ ಮಕ್ಕಳಿದ್ದು ಎರಡು ಎಕರೆ ಖಾತೆ ಜಮೀನು ಮತ್ತು 6 ಎಕರೆ ಬಗುರ್ ಹುಕುಂ ಜಾಗವಿದೆ. ಸಂದೇಶ್ ಅವರಿಗೆ ಕಷ್ಟವಿದ್ದ ಕಾರಣ ಆಸ್ತಿಯ ಪಾಲು ಮಾಡಿಕೊಡುವಂತೆ ಕೇಳಿಕೊಂಡಿದ್ದರು. ಸಹೋದರಿಗೆ ಹಣಕೊಡುವುದಾಗಿಮಾತು ಕತೆ ನಡೆದಿತ್ತು ಎಂದು ಗಾಯಾಳು ಸಂದೇಶ್ ಸುದ್ದಿಲೈವ್ ಗೆ ತಿಳಿಸಿದ್ದಾರೆ.
ನನ್ನ ಮೇಲೆ ಮಾರಣಾಂತಿಕ ಹಲ್ಲೆ ನಡೆದು 10 ದಿನಕಳೆದರೂ ಆರೋಪಿಗಳಿಬ್ಬರನ್ನ ಪೊಲೀಸರು ಬಂಧಿಸಿಲ್ಲ ಎಂದು ಸಂತ್ರಸ್ತರಾದ ಸಂದೇಶ್ ದೂರಿದ್ದಾರೆ.
the financier beaten to the point of breaking his thigh bone
