ಅಯಾನ್ ಗ್ರೂಪ್ ನ ಮಾಲೀಕರಲ್ಲಿ ಒಬ್ಬರಾದ ಅಬ್ದುಲ್ ರಜಾಕ್ ಬಂಧನ- Abdul Razak, one of the owners of Ayan Group, arrested

SUDDILIVE || HOSANAGARA

ಅಯಾನ್ ಗ್ರೂಪ್ ನ ಮಾಲೀಕರಲ್ಲಿ ಒಬ್ಬರಾದ ಅಬ್ದುಲ್ ರಜಾಕ್ ಬಂಧನ- Abdul Razak, one of the owners of Ayan Group, arrested      

Ayan, group

ವಂಚನೆ ಪ್ರಕರಣದಲ್ಲಿ ಉಡುಪಿಯ ಅಬ್ದುಲ್ ರಜಾಕ್ ನನ್ನ ಹೊಸನಗರ ಪೊಲೀಸರು ಬಂಧಿಸಿದ್ದಾರೆ. 2023 ರಲ್ಲಿ ಹೊಸನಗರದ ನಿವಾಸಿ ನಿಖಿಲ್ ಸೇರಿದಂತೆ 1960 ಜನರಿಂದ ಅಯಾನ್ ಗ್ರೂಪ್ ನ ಸ್ಕೀಮ್ ಪಡೆಯುವಂತೆ ತಿಳಿಸಿ ಸುಮಾರು 3 ಕೋಟಿ ರೂ. ಹಣವನ್ನ ಪಡೆದು ವಂಚಿಸಿದ ಪ್ರಕರಣವನ್ನ ಹೊಸನಗರ ಪೊಲೀಸರು ಬೇಧಿಸಿ ಆರೋಪಿಯನ್ನ ಬಂಧಿಸಿದ್ದಾರೆ. 

ಹೊಸನಗರದ ನಿಖಿಲ್(27) ಎಂಬುವರಿಗೆ 2023 ರಲ್ಲಿ  ಸ್ನೇಹಿತರಿಂದ ಪರಿಚಯವಾದ ಅಬ್ದುಲ್ ರಜಾಕ್ ಮತ್ತು ಶೇಕ್ ಮಹಮ್ಮದ್ ಫಜಲ್ ಎಂಬುವವರು ಅಯಾನ್ ಗ್ರೂಪ್ನ ಮಾಲೀಕರಾಗಿದ್ದು, ನಮ್ಮಲ್ಲಿ 13, 16, 21 ತಿಂಗಳ ಸ್ಕೀಮ್ ಗಳು ಇವೆ. ಇದಕ್ಕೆ ಪ್ರತಿ ತಿಂಗಳು ಒಂದು ಸಾವಿರದಂತೆ ಸಾರ್ವಜನಿಕರಿಂದ ವಂತಿಗೆ ಪಡೆದು ಸ್ಕೀಮಿನ ಅವಧಿಯ ಮಧ್ಯದಲ್ಲಿ ಆಕರ್ಷಕ ಬಹುಮಾನ ಹಾಗೂ ಸ್ಕೀಮ್ ಮುಗಿದ ನಂತರ ಸಮಾಧಾನಕರ ಬಹುಮಾನ ನೀಡಲಾಗುವುದೆಂದು ನಂಬಿಸಲಾಗಿತ್ತು. 

ಪ್ರತಿಕಾರ್ಡಿಗೆ 300 ರೂ. ಹಾಗೆ ಕಮೀಷನ್ ನೀಡುವುದಾಗಿಯೂ ಭರವಸೆ ನೀಡಿದ ಮೇರೆಗೆ ನಾನು 2023 ನೇ ಸಾಲಿನ ಮೇ ತಿಂಗಳಿನಿಂದ ಒಟ್ಟು 150 ಕಾರ್ಡುದಾರರನ್ನು ಸಂಪರ್ಕಿಸಿ ಅವರಿಂದ ಪ್ರತಿ ತಿಂಗಳು ಕಂತಿನ ಹಣವನ್ನು ನೇರವಾಗಿ ಅಬ್ದುಲ್ ರಜಾಕ್ ಮತ್ತು ಶೇಕ್ ಮಹಮ್ಮದ್ ಫಜಲ್ ರವರ ಫೋನ್ ಪೆ ನಂ :- 8123203441, 9036793134 ಮತ್ತು 9945880441 ಇವರ ವಿವಿಧ ಫೋನ್ ಪೆ ಖಾತೆಗೆ ಜಮಾ ಮಾಡುತ್ತಾ ಬಂದಿರುತ್ತಾರೆ. ನಂತರ ದಿನಾಂಕ: 04/05/2025 ರಲ್ಲಿ ಸ್ಕೀಮ್ ಮುಕ್ತಾಯವಾಗಿದ್ದರು ಸಹ ಸ್ಕೀಮಿನ ಕಾರ್ಡಿನಲ್ಲಿ ಹೇಳಲಾಗಿದ್ದ ಯಾವುದೇ ಗೃಹ ಉಪಯೋಗಿ ವಸ್ತುಗಳನ್ನಾಗಲೀ ಅಥವಾ ನಗದು ಹಣವನ್ನಾಗಲಿ ಮರುಪಾವತಿ ಮಾಡಿರುವುದಿಲ್ಲ ಎಂದು ಆರೋಪಿಸಲಾಗಿದೆ. 

ಒಟ್ಟು ಸುಮಾರು ರೂ. 24,00,000/- ನ್ನ ಗ್ರಾಹಕರ ರೂಪದಲ್ಲಿ ಪಾವತಿಯಾಗಿರುತ್ತದೆ. ಈ ಬಗ್ಗೆ ನಿಖಿಲ್ ಅನೇಕ ಬಾರಿ ಅಬ್ದುಲ್ ರಜಾಕ್ ಮತ್ತು ಶೇಕ್ ಮಹಮ್ಮದ್ ಫಜಲ್ ರವರಿಗೆ ಕೇಳಿದರು ಅವರಿಂದ ಯಾವುದೇ ಸಕಾರಾತ್ಮಕ ಉತ್ತರಗಳು ಬಂದಿರುವುದಿಲ್ಲ. ನಿಖಿಲ್ ರಂತೆ ಇತರೆ 7-8 ಜನ ಏಜೆಂಟರುಗಳು ಸಹ ಸಾರ್ವಜನಿಕರಿಂದ ಹಣವನ್ನು ಸಂಗ್ರಹ ಮಾಡಿ ಅಯಾನ್ ಗ್ರೂಪ್ ಗೆ ಹಣವನ್ನು ಹಾಕಲಾಗಿದೆ.  

ಸುಮಾರು 1960 ಕ್ಕೂ ಹೆಚ್ಚು ಜನರಿಗೆ ಮೋಸ, ನಂಬಿಕೆ ದ್ರೋಹ, ವಂಚನೆ ಮಾಡಿರುವ ಅಬ್ದುಲ್ ರಜಾಕ್ ಮತ್ತು ಶೇಕ್ ಮಹಮ್ಮದ್ ಫಜಲ್ ರವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ಪಾವತಿಯಾಗಿರುವ ಸುಮಾರು 03 ಕೋಟಿಗೂ ಅಧಿಕ ಹಣವನ್ನು ಹಿಂದಿರುಗಿಸಿಕೊಡಿಸಬೇಕಾಗಿ ಹೊಸನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು.  ನೀಡಿದ ದೂರನ್ನು ಸ್ವೀಕರಿಸಿಕೊಂಡು, ಪಿಎಸ್ಐ ಹೊಸನಗರ ಮತ್ತು ಸಿಬ್ಬಂಧಿಗಳ ತಂಡವು ತನಿಖೆ ಕೈಗೊಂಡು, ಪ್ರಕರಣದ ಆರೋಪಿ ಅಬ್ದುಲ್ ರಜಾಕ್ 47 ವರ್ಷ ವಾಸ ಉಡುಪಿ ಜಿಲ್ಲೆ ಈತನನ್ನು ದಸ್ತಗಿರಿ ಮಾಡಿ, ಘನ ನ್ಯಾಯಾಲಯದ ಮುಂದೆ ಹಾಜರಿ ಪಡಿಸಲಾಗಿದೆ. 

Abdul Razak, one of the owners of Ayan Group, arrested

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close