SUDDILIVE || SHIVAMOGGA
ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ನುಗ್ಗಿದ ಕರಡಿ-Bear attack at Shivamogga airport
ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಕರಡಿಯೊಂದು ನುಗ್ಗಿದ್ದು ಆತಂಕ ಹೆಚ್ಚಿಸಿದೆ. ಜನರು ಓಡಾಡುವ ವಿಮಾನ ನಿಲ್ದಾದಲ್ಲಿ ಕರಡಿಯ ಓಡಾಟ ಪ್ರಯಾಣಿಕರಲ್ಲಿ ಆತಂಕ ಮೂಡಿಸಿದೆ.
ಶಿವಮೊಗ್ಗದ ಸೋಗಾನೆಯಲ್ಲಿ ಇರುವ ಶಿವಮೊಗ್ಗ ಏರ್ಪೋರ್ಟ್ ಗೆ ಬೆಳಗ್ಗೆ 9 ಗಂಟೆಗೆ ಕರಡಿ ನುಗ್ಗಿರುವುದಾಗಿ ಸಾರ್ವಜನಿಕರು ಹೇಳುತ್ತಿದ್ದಾರೆ. ಕಾಚಿನಕಟ್ಟೆಯ ಜ್ಯೋತಿ ನಗರದಿಂದ ಏರ್ಪೋರ್ಟ್ ಗೆ ಕರಡಿ ನುಗ್ಗಿದೆ.
ಕರಡಿ ನುಗ್ಗುತ್ತಿದ್ದಂತೆ ಅಲರ್ಟ್ ಆದ ವಿಮಾನ ನಿಲ್ದಾಣದ ಸಿಬ್ಬಂದಿಗಳು, ಕೂಡಲೇ ಅರಣ್ಯ ಇಲಾಖೆಗೆ ಏರ್ಪೋರ್ಟ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕರಡಿ ಹಿಡಿಯಲು ಪ್ರಯತ್ನ ಉಂಬ್ಳೆಬೈಲಿನ ಅರಣ್ಯ ಇಲಾಖೆ ಸಿಬ್ಬಂದಿ ಪ್ರಯತ್ನ ನಡೆಸುತ್ತಿದ್ದಾರೆ.
ಮುತ್ತೋಡಿನಿಂದ ಕರಡಿ ಬಂದಿದೆ ಎನ್ನಲಾಗುತ್ತಿದೆ. ಮುತ್ತೋಡು, ಕೆಸವೆ, ಲಕ್ಕವಳ್ಳಿ, ಕಾಚಿನಕಟ್ಟೆಯ ಮೂಲಕ ವಿಮಾನ ನಿಲ್ದಾಣದ ಆವರಣದಲ್ಲಿ ಕಾಣಿಸಿಕೊಂಡಿದೆ. ಕಾಂಪೌಂಡ್ ಹತ್ತಿ ಏರ್ ಪೋರ್ಟ್ ಒಳಗೆ ನುಗ್ಗಿರುವ ವಿಡಿಯೋ ಸಹ ವೈರಲ್ ಆಗಿದೆ.
Bear attack at Shivamogga airport

