SUDDILIVE || BHADRAVATHI
11 ಪ್ರಕರಣಗಳಲ್ಲಿ ಬೇಕಾಗಿದ್ದ ಆರೋಪಿಯ ಬಂಧನ- Accused wanted in 11 cases arrested
ಜಾನುವಾರುಗಳನ್ನ ಅಪಹರಿಸುವುದು ಮತ್ತು ದ್ವಿಚಕ್ರ ವಾಹನಗಳನ್ನ ಕದಿಯುವುದನ್ನೇ ಕಾಯಕ ಮಾಡಿಕೊಂಡಿದ್ದ ಆರೋಪಿಯನ್ನು ಭದ್ರಾವತಿ ನ್ಯೂಟೌನ್ ಪೊಲೀಸರು ಬಂಧಿಸಿದ್ದಾರೆ. ಈತನ ಬಂಧನದಿಂದಾಗಿ 11 ಪ್ರಕರಣಗಳು ಬಯಲಿಗೆ ಬಂದಿವೆ
2025ರ ಸೆಪ್ಟೆಂಬರ್ 24ರಂದು ಹೊಸಸಿದ್ದಾಪುರ ಗ್ರಾಮದ ರಂಜಿತ್ ಎಂಬುವವರ ಕೊಟ್ಟಿಗೆಯಲ್ಲಿದ್ದ ಎರಡು ಹಸು ಹಾಗೂ ಒಂದು ಕರುಗಳು ಕಳುವಾಗಿತ್ತು. ಈ ಬಗ್ಗೆ ದಾಖಲಾಗಿದ್ದ ದೂರಿನ ಆಧಾರದ ಮೇಲೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ. ನಿಖಿಲ್ ಅವರ ಮಾರ್ಗದರ್ಶನದಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿತ್ತು.
ವಿಶೇಷ ತಂಡವು ಭದ್ರಾವತಿಯ ಅಪ್ಪರ್ ಹುತ್ತಾ ನಿವಾಸಿ ದಿಲೀಪ ಅಲಿಯಾಸ್ ಕರಿಯ (20) ಎಂಬಾತನನ್ನು ಬಂಧಿಸಿದೆ. 5 ಜಾನುವಾರು ಕಳ್ಳತನ ಪ್ರಕರಣ, 4 ಬೈಕ್ ಕಳ್ಳತನ ಪ್ರಕರಣ, ಒಂದು ಕೊಲೆ ಯತ್ನ ಮತ್ತು ಹಲ್ಲೆ ಪ್ರಕರಣಗಳು ಸೇರಿದಂತೆ ಒಟ್ಟು 11 ಪ್ರಕರಣಗಳು ಪತ್ತೆಯಾಗಿವೆ. ಆರೋಪಿಯಿಂದ ಅಂದಾಜು ₹95,500 ಮೌಲ್ಯದ 4 ದ್ವಿಚಕ್ರ ವಾಹನಗಳು ಹಾಗೂ ₹20,500 ನಗದು ಸೇರಿ ಒಟ್ಟು ₹1,16,000 ಮೌಲ್ಯದ ಸ್ವತ್ತನ್ನು ವಶಪಡಿಸಿಕೊಳ್ಳಲಾಗಿದೆ.
ವಿಶೇಷ ತಂಡದಲ್ಲಿ ಡಿವೈಎಸ್‌ಪಿ ಪ್ರಕಾಶ್ ರಾಥೋಡ್, ಭದ್ರಾವತಿ ನಗರ ಇನ್ಸ್‌ಪೆಕ್ಟರ್ ಕೆ.ನಾಗಮ್ಮ ಮೇಲ್ವಿಚಾರಣೆಯಲ್ಲಿ, ನ್ಯೂಟೌನ್ ಪಿಎಸ್‌ಐ ಕವಿತಾ, ಸಿಬ್ಬಂದಿ ನವೀನ್.ಟಿ, ಆದರ್ಶ.ಆರ್, ಪ್ರಕಾಶ.ಜಿ.ಕೆ ಮತ್ತು ಪ್ರಸನ್ನ.ಹೆಚ್ ತಂಡದ ಆರೋಪಿಯನ್ನು ಬಂಧಿಸಿದೆ.
Accused wanted in 11 cases arrested

