ರಾಜಕಾರಣಿಗಳು ನಮ್ಮನ್ನ ಕೆಣಕಬೇಡಿ, ಕೆಣಕಿದರೆ ನಿಮ್ಮ ಸ್ಥಾನಕ್ಕೆ ನಾವು ಬರಬೇಕಾಗುತ್ತದೆ-ಬಂಗಾರುಮಕ್ಕಿ ಸ್ವಾಮಿಗಳು ಎಚ್ಚರಿಕೆ-Bangarumakki Swamy warns

 SUDDILIVE || SHIVAMOGGA

ರಾಜಕಾರಣಿಗಳು ನಮ್ಮನ್ನ ಕೆಣಕಬೇಡಿ, ಕೆಣಕಿದರೆ ನಿಮ್ಮ ಸ್ಥಾನಕ್ಕೆ ನಾವು ಬರಬೇಕಾಗುತ್ತದೆ-ಬಂಗಾರುಮಕ್ಕಿ ಸ್ವಾಮಿಗಳು ಎಚ್ಚರಿಕೆ-  Politicians, don't criticize us, if you do, we will have to take your place - Bangarumakki Swamy warns     

Bangarumakki, swamy

ಶರಾವತಿ ಪಂಪ್ಡ್ ಸ್ಟೋರೇಜ್ ನಿಲ್ಲಿಸಲು ಇಂದು ಪ್ರತಿಭಟನೆ ನಡೆಸಲಾಗುತ್ತಿದೆ. ಇಂದು ಮೊನ್ನೆಯದು ಅಲ್ಲ ಈ ಈ ಧರಣಿ, ಹೋರಾಟವನ್ನ ಸಹ ಸಮಿತಿ ಕೇಂದ್ರದಿಂದ ಬಂದು ವರದಿ ನೀಡಿದೆ. ಹೈಕೋರ್ಟ್ ಸಹ ಎಲ್ಲಾ ಹೋರಾಟ ಗಮನಿಸಿ ಮುಂದಿನ ಆದೇಶದ ವರೆಗೆ ಮುಂದು ವರೆಯದಂತೆ ಸೂಚಿಸಿದೆ. 

ನಂತರ ಕಾರ್ಯಕ್ರಮವನ್ನ ಉದ್ಘಾಟಿಸಿ ಮಾತನಾಡಿದ ಮಾರುತಿ ಗುರೂಜಿ, ನಮಗಾಗಿ ಈ ಹೋರಾಟಕ್ಕೆ ಸೇರಿಲ್ಲ ಸೇರಿದ್ದು ಮುಂದಿನ ಭವಿಷ್ಯಕ್ಕಾಗಿ. ನಮ್ಮಲ್ಲಿ ಒಗ್ಗಟ್ಟಗುವುದೇ ಬಹಳ ಕಷ್ಟ, ಪಂಪ್ಡ್ ಸ್ಟೋರೇಜ್ ಆಗಬಾರದು. ಪ್ರಕೃತಿಗೆ ವಿರುದ್ಧವಾದ ಕಾರ್ಯವಾಗಿರುವುದರಿಂದ ಇದನ್ನ ವಿರೋಧಿಸಲಾಗುವುದು. ಜೀವ ಜಂತುಗಳಿಗೆ ಹಕ್ಕನ್ನ‌ನೀಡಿದ ಸಂವಿಧಾನ ನಮ್ಮದು. ಮನುಷ್ಯನ ಹಕ್ಕು ಮಾತ್ರ ಜೀವ ಸಂಕುಲಕ್ಕೆ ಕುತ್ತುತರುವ ಯೋಜನೆ ಜಾರಿಗೆಗೆ ನಮ್ಮ ವಿರೋಧವಿದೆ. ಮೂಕ ಪ್ರಾಣಿಗಳ ಧ್ವನಿಗೆ ನಾವು ಧ್ವನಿಗೂಡಿಸಿದರೆ ಭಗವಂತ ನಮ್ಮ ಹೋರಾಟಕ್ಕೆ ಸಹಕರಿಸುತ್ತಾನೆ. 

ಶರಾವತಿಗೆ 7 ಡ್ಯಾಂ ಕಟ್ಟಲಾಗಿದೆ. ತಲೆಕಳಲೆಯಲ್ಲಿ ಈ ಪಂಪ್ಡ್ ಸ್ಟೋರೇಜ್ ಪೂರ್ವದಿಂದ ಪಶ್ಚಿಮಕ್ಕೆ ಹರಿದು ಸಮುದ್ರಕ್ಕೆ ಸೇರುತ್ತಾಳೆ. ಪೂರ್ವ ದಿಕ್ಕಿಗೆ ನದಿಯ ನೀರನ್ನ ಹರಿಸಲಾಗುತ್ತಿದೆ. ಇದು ಪ್ರಕೃತಿ ವಿರೋಧವಾಗಿದೆ. ಬೇಗೋಡಿ ಬಳಿ ವಿದ್ಯುತ್ ಉತ್ಪಾದಿಸಲಾಗುತ್ತದೆ. ನೀರನ್ನ ವಿರುದ್ಧ ದಿಕ್ಕಿನಲ್ಲಿ ಹರಿಸಲಾಗುತ್ತದೆ. ಸುರಂಗ ಮಾತ್ರ ಮಾಡಲಾಗುತ್ತದೆ. ಎಲ್ಲಾ ರೀತಿಯ ಪರೀಕ್ಷೆ ನಡೆಸಲಾಗಿದೆ. ಎಲ್ಲಾ ಸರ್ಕಾರವೂ ಒಂದೆ ಅಧಿಕಾರಕ್ಕೆ ಬರುವ ಮುನ್ನ‌ಒಂದು ತರ ಅಧಿಕಾರಕ್ಕೆ ಬಂದ ನಂತರ ಇನ್ನೊಂದು ತರವಾಡುತ್ತದೆ. 

2001 ರಲ್ಲಿ ಪಂಪ್ಡ್ ಸ್ಟೋರೇಜ್ ಆರಂಭವಾಗುತ್ತದೆ. 2022 ಕೋಟಿಯಲ್ಲಿ ಯೋಜನೆ ಆರಂಭವಾಗುತ್ತದೆ. 2008 ರಲ್ಲಿ ಮೊದಲ ಬಾರಿಗೆ ಪ್ರಸ್ತಾವನೆಗೆ ಮೊದಲ ವಿರೋಧ ವ್ಯಕ್ತಪಡಿಸಿದ್ದೆ. ಅಲ್ಲಿಗೆ ಕೈಬಿಡಲಾಗಿತ್ತು. 2011 ರಲ್ಲಿ ಪುನಃ ಪರಿಶೀಲನೆಗೆ ಈ ಯೋಜನೆ ಬರುತ್ತದೆ. 2017 ಕ್ಕೆ ಮತ್ತೆ ಜಾರಿಗೆ ಬರಲಿದೆ ಎಂಬ ಪ್ರಸ್ತಾವನೆ ಬಂತು. 2023 ಗೆ 10,450 ಕೋಟಿಗೆ ಜಾರಿಯಾಗಿತ್ತು. ಆಗಲೇ 10% ಹಣ ಯಾರು ಯಾರಿಗೆ ಸೇರಬೇಕು ಸೇರಿ ಹೋಗಿಯಾಗಿದೆ. ಇದನ್ನ ತಡೆಯಲಾಗುವುದಿಲ್ಲ ಎಂದರು. ಇಚ್ಛಶಕ್ತಿ, ಜ್ಞಾನಶಕ್ತಿ ರಾಜಶಕ್ತಿಯ ಕೊರತೆ ಇದೆ. ನಮ್ಮಲ್ಲಿಯೂ ಒಗ್ಗಟ್ಟಿನ ಮಂತ್ರ ಕಾಣುತ್ತಿಲ್ಲ. ಈ ಮೂರು ಶಕ್ತಿ ಒಂದಾಗಬೇಕು ಒಂದಾದರೆ ಎಂತಹ ಹೋರಾಟವೂ ವಿಫಲವಾಗುದಿಲ್ಲ ಎಂದರು. 

ಈ ಯೋಜನೆಯಿಂದ 2000 ಮೆಗಾವ್ಯಾಟ್ ಗೆ 2500 ರೂ. ಮೆಗಾವ್ಯಾಟ್ ಕರ್ಚು ಮಾಡಲಾಗುತ್ತವೆ. ಈ ಬಜೆಟನ್ನ ಹಣಕಾಸು ಸಂಸ್ಥೆ ತಿರಸ್ಕರಿಸಿದೆ. ಸರ್ಕಾರ ಹಣ ಕೊಡದಿದ್ದರೂ ಜರ್ಮನ್ ದೇಶದಿಂದ ತರಲಾಗುವುದು ಎಂದು ಸರ್ಕಾರ ಹೇಳಿದೆ. ಈ ಹಠದ ಹಿಂದೆ ಯಾರ ಕೈವಾಡವಿದೆ ಗೊತ್ತಿಲ್ಲ. ಪವನ ವಿದ್ಯುತ್ ಸೇರಿಸಿಕೊಂಡು ಮಾಡಲಾಗುತ್ತಿದೆ ಎಂದು ಹೇಳಲಾಯಿತು. ಇದನ್ನ ಮಾಡಲಿ ಪಂಪ್ಡ್ ಸ್ಟೋರೇಜ್ ಮತ್ತೆಯಾಕೆ ಎಂದು ಪ್ರಶ್ನಿಸಿದರು. 

ಜರ್ಮನ್ ನಿಂದ ತರುವ ಹಣವನ್ನ ಸಾಲದ ರೂಪದಲ್ಲಿ ತಂದು ನಮ್ಮ‌ಮೇಲೆ ಸಾಲ ಮಾಡಿ ಯಾಕೆ ಮಾಡುತ್ತೀರಿ. ಇದು ಈಗ 10 ಸಾವಿರದಿಂದ 15 ಸಾವಿರ ಕೋಟಿಗೆ ಏರಿಕೆಯಾಗಿದೆ. ಪರಿವೇಶನ ಪೋರ್ಟಲ್ ನಲ್ಲಿ 16 ಸಾವಿರ ಮರಗಳಿಂದ 50 ಸಾವಿರ ಮರಗಳ ನಾಶವಾಗಲಿದೆ. ಇದರ ಜೊತೆಗೆ ಬೆಂಗಳೂರಿಗೆ ಶರಾವತಿ ನೀರು ಹೊತ್ತೊಯ್ಯಲು ಯೋಜನೆ ರೂಪುಗೊಂಡಿದೆ. ಬೇಕಾದರೆ ಪರಿವೇಶಣ ಪ್ರಾಜೆಕ್ಟ್ ಪರಿಶೀಲಿಸಿ ನೋಡಿ ಎಂದರು.  

38 ಪ್ರಾಜೆಕ್ಟ್ ಪಶ್ಚಿಮ ಘಟ್ಟದಲ್ಲಿ ಬರುತ್ತಿದೆ ನಮಗೆ ಕಣ್ಣಿಗೆ ಕಾಣೋದು ಅಘನಾಶನಿ, ಆಗುಂಬೆ, ಶರಾವತಿ ಪಂಪ್ಡ್ ಸ್ಟೋರೇಜ್ ಮಾತ್ರ ಕಾಣುತ್ತಿದೆ. ಇದಕ್ಕೆ ಎದೆ ಕೊಟ್ಟು ಹೋರಾಟ ಮಾಡಬೇಕಿದೆ. ರಾಜ್ಯದ ಉಪಮುಖ್ಯಮಂತ್ರಿ ಮತ್ತು ಜಾರ್ಜ್ ಅವರು ಹೋರಾಟ ಮಾಡುವವರು ಮಾಡುತ್ತಾರೆ ಎನ್ನುತ್ತಾರೆ. ಜಾರ್ಜ್ ಅವರ ಹೆಸರಿನಲ್ಪುರುವ 12 ಸಾವಿರ ಹೆಕ್ಟೇರ್ ಯೋಜನೆಯಿದೆ. ಒಬ್ಬ ರೈತ 50 ಎಕರೆ ಮಾತ್ರ ಜಮೀನಿ ಹೊಂದ ಬೇಕೆಂದಿದೆ ಆದರೆ ಜಾರ್ಜ್ ಅವರನ್ನ ಏನು ಮಾಡಬೇಕು.  ನಮ್ಮನ್ನ ಕೆಣಕಲು ಬರಬೇಡಿ ಕೆಣಕಿದರೆ ನಿಮ್ಮ ಜಾಗದಲ್ಲಿ ನಾವು ಬರಬೇಕಾಗುತ್ತದೆ ಎಂದು ಎಚ್ಚರಿಸಿದರು. ದೀಪಾವಳಿ ಪಟಾಕಿ ಹೊಡೆಯಲು ಪರಿಸರ ಕಾಳಜಿ ತೋರುವ ಸರ್ಕಾರ 18 ಸಾವಿರ ಮೆಟ್ರಿಕ್ ಟನ್ ಸ್ಪೋಟಕಗಳನ್ನ‌ಬಳಸಲು ಬಿಡಲಾಗುತ್ತಿದೆ. ಇದು ಸರ್ಕಾರದ ಕಾಳಜಿಯಾಗಿದೆ ಎಂದು ವ್ಯಂಗ್ಯವಾಡಿದರು. 

ಕೆಪಿಸಿಎಲ್ ವಿದ್ಯುತ್ ವಿತರಣ ಹೇಗೆ ಎಂದು ಸಹ ಹೇಳಿಲ್ಲ. ವಿತರಣೆಯಲ್ಲಿ ಲಕ್ಷಾಂತರ ಮರಗಳು ಜಾಗ ಹೋಗಲಿದೆ.

ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ನಮ್ಮ ನಿಮ್ಮ ಭೇಟಿ ಮೂರನೇ ಬಾರಿಯಾಗಿದೆ. ಕೆಪಿಸಿಎಲ್ ಬಗ್ಗೆ ಮಾಹಿತಿ ಕೇಳಿದ್ರಿ ತಡವಾಗಿದೆ. ಈಗ ಶರಾವತಿ ಪಂಪ್ಡ್ ಸ್ಟೋರೇಜ್ ಕುರಿತು ಅಹೋರಾತ್ರಿ ಧರಣಿಯಲ್ಲಿ ನೀಡಿದ ಮನವಿಯನ್ನ ಸರ್ಕಾರಕ್ಕೆ ನೀಡುವೆ ಎಂದರು

ಮಾಜಿ ಡಿಸಿಎಂ ಈಶ್ವರಪ್ಪ, ಕೆ.ಈ.ಕಾಂತೇಶ್, ಎಟಿ ರಾಮಸ್ವಾಮಿ, ಕರ್ನಾಟಕ ರಕ್ಷಣ ವೇದಿಕೆ ಸಿಮಹಸೇನೆಯ ರವಿ ಪ್ರಸಾದ್, ಅಣ್ಣ ಹಜರೆ ಹೋರಾಟ ಸಮಿತಿಯ ಜನಾರ್ದನ ಪೈ, ಕವಿತ ಮೊದಲಾದವರು ಭಾಗಿಯಾಗಿದ್ದರು. ಪಶ್ಚಿಮ ಘಟ್ಟದ ವರದಿ ನೀಡಿದ ಮಾದವ ಗಾಡ್ಗಿಲ್ ಅವರ ಫೋಟೋಗೆ ಪುಷ್ಪಾರ್ಚನೆ ನಡೆಸಿ ಪ್ರತಿಭಟಿಸಲಾಗಿದೆ. 

Bangarumakki Swamy warns 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close