ಪ್ರಧಾನಿಗೆ ಅವಮಾನ ಬಿಜೆಪಿ ಯುವಮೋರ್ಚಾದಿಂದ ಎಸ್ಪಿಗೆ ಮನವಿ-BJP Yuva Morcha appeals to SP for insulting PM

SUDDILIVE || SHIVAMOGGA

ಪ್ರಧಾನಿಗೆ ಅವಮಾನ ಬಿಜೆಪಿ ಯುವಮೋರ್ಚಾದಿಂದ ಎಸ್ಪಿಗೆ ಮನವಿ-BJP Yuva Morcha appeals to SP for insulting PM        

Bjp, yuvamorcha


ನಿನ್ನೆ ದಿನಾಂಕ 10-03-2026 ರಂದು ಶಿವಮೊಗ್ಗ ನಗರದ ಗೋಪೀ ಸರ್ಕಲ್‌ನಲ್ಲಿ ಯುವ ಕಾಂಗ್ರೆಸ್ ವತಿಯಿಂದ ನಡೆದ ಪ್ರತಿಭಟನೆ ಕಾರ್ಯಕ್ರಮದಲ್ಲಿ, ದೇಶದ ಪ್ರಧಾನಮಂತ್ರಿಗಳಿಗೆ ಅವಮಾನವಾಗುವ ರೀತಿಯಲ್ಲಿ ಅಣಕು ಪ್ರದರ್ಶನ ಮಾಡಲಾಗಿದೆ ಎಂದು ಆರೋಪಿಸಿ ಬಿಜೆಪಿ ಯುವಮೋರ್ಚ ಎಸ್ಪಿ ನಿಖಿಲ್ ಗೆ ಮನವಿ ಸಲ್ಲಿಸಿದೆ. 

ಈ ಕುರಿತು ಸ್ವಯಂಪ್ರೇರಿತವಾಗಿ (ಸೂಮೊಟೋ) ಪ್ರಕರಣ ದಾಖಲಿಸಲಾಗುತ್ತದೆ ಎಂದು ನಿರೀಕ್ಷಿಸಿದ್ದರೂ ಇದುವರೆಗೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಆದ್ದರಿಂದ ಇವತ್ತಿನ ದಿನ ಜಿಲ್ಲಾ ಪೊಲೀಸ್ ಅಧೀಕ್ಷಕರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ ಎಂದು ಪಕ್ಷ ತಿಳಿಸಿದೆ.  ಈ ಘಟನೆ ಕುರಿತು ಪ್ರಕರಣ ದಾಖಲಿಸುವಂತೆ ಮನವಿ ಹಾಗೂ ದೂರು ನೀಡಲಾಗಿದೆ. ಜೊತೆಗೆ ಎಸ್‌ಪಿ ಅವರ ಮುಖಾಂತರ ದೊಡ್ಡಪೇಟೆ ಪೊಲೀಸ್ ಠಾಣೆಗೆ ಅಗತ್ಯವಾದ ಸೂಚನೆ ನೀಡುವಂತೆ ವಿನಂತಿಸಲಾಯಿತು. ಇದೇ ವೇಳೆ ದೊಡ್ಡಪೇಟೆ ಸರ್ಕಲ್ ಇನ್ಸ್‌ಪೆಕ್ಟರ್ ಅವರಿಗೂ ಮನವಿ ಸಲ್ಲಿಸಿ ಎಫ್‌ಐಆರ್ ದಾಖಲಿಸುವಂತೆ ಒತ್ತಾಯಿಸಲಾಯಿತು.

ಬಿಜೆಪಿ ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷರಾದ ಪ್ರಶಾಂತ್ ಕುಕ್ಕೆ ಅವರ ನೇತೃತ್ವದಲ್ಲಿ ಯುವ ಮೋರ್ಚಾ ತಂಡದಿಂದ ಮನವಿ ಹಾಗೂ ದೂರು ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿಗಳು ಹಾಗೂ ಯುವ ಮೋರ್ಚಾ ಜಿಲ್ಲಾ ಸಹ ಪ್ರಭಾರಿಗಳಾದ ಸಂತೋಷ್ ಹೊಳಲೂರು, ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷರಾದ ಸತೀಶ್ ರಾಮನಕೊಪ್ಪ, ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ದರ್ಶನ್ ಆರ್ ವಿ ಹಾಗೂ ಅರುಣ್ ಕುಗ್ವೆ , ಶಿವಮೊಗ್ಗ ಗ್ರಾಮಾಂತರ ಯುವ ಮೋರ್ಚಾ ಅಧ್ಯಕ್ಷರಾದ ಅನಿಲ್ ಲೋಕಿನಕೊಪ್ಪ

ಜಿಲ್ಲಾ ಯುವ ಮೋರ್ಚಾ ಕಾರ್ಯದರ್ಶಿ ಯುವರಾಜ್ ಎನ್.ವಿ. ಮತ್ತು ಹರೀಶ್ ನಾಯ್ಕ್ , ಜಿಲ್ಲಾ ಖಜಾಂಚಿಗಳಾದ ವಿವೇಕ್ ಹೆಬ್ಬಾರ್, ಜಿಲ್ಲಾ ಪದಾಧಿಕಾರಿಗಳಾದ ಕುಮಾರ್ ಆಯನೂರು, ಅಜಯ್ ಬೊಮ್ಮನಕಟ್ಟೆ, ಪವನ್, ಗಣೇಶ್ ಗುಂಡಗದ್ದೆ, ಅಮಿತ್ ಹೆಗ್ಗಾರ್ , ಶಶಿ , ಸತೀಶ್ ಸೇರಿದಂತೆ ಯುವ ಮೋರ್ಚಾದ ಪ್ರಮುಖ ಕಾರ್ಯಕರ್ತರು ಉಪಸ್ಥಿತರಿದ್ದರು.

BJP Yuva Morcha appeals to SP for insulting PM

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close