SUDDILIVE || SHIVAMOGGA
ಸರ್ಕಾರಿ ನೌಕರಿ ಕೊಡಿಸುವುದಾಗಿ ನಂಬಿಸಿ ವಂಚನೆ-Fraud by promising a government job
ಕೆಪಿಟಿಸಿಎಲ್ ನಲ್ಲಿ ಸರ್ಕಾರಿ ನೌಕರಿ ಕೊಡಿಸುವುದಾಗಿ ನಂಬಿಸಿ 32 ವರ್ಷದ ಯುವಕನಿಗೆ ಹಾಗೂ ಇತರರಿಗೆ ಲಕ್ಷಾಂತರ ರೂ ವಙಚಿಸಿರುವ ಘಟನೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
2022 ರಲ್ಲಿ ನಡೆದ ಈ ಘಟನೆ ಈಗ ದೂರು ದಾಖಲಾಗಿದೆ. ವಿನೋಬನಗರದ ನಿವಾಸಿ ರಾಘವೇಂದ್ರ ಎಂಬುವೂರಿಂದ 18 ಲಕ್ಷ 20,000 ರೂಗಳನ್ನು ಅಂತವಾಗಿ ಪಡೆದಿರುವ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಹಿರೇಗೌಡ ತಾಂಡ ನಿವಾಸಿ ಮಂಜುನಾಥ್ ನಾಯಕ್ ಅವರ ಪತ್ನಿ ಗಾಯತ್ರಿ ಬಾಯಿ ವಿರುದ್ಧ ದೂರು ದಾಖಲಾಗಿದೆ.
ತರೀಕೆರೆಯ ರಂಗನಾಥ್ ಎಂಬೋರಿಗೂ ಸಹ ಸರ್ಕಾರಿ ನೌಕರಿ ಕೂಡಿಸುವುದಾಗಿ ನಂಬಿಸಿ 2023 ರಲ್ಲಿ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಗಾಯತ್ರಿ ಬಾಯಿ ಅವರಿಂದ 11 ಲಕ್ಷ ರೂಗಳನ್ನು ಪಡೆಯಲಾಗಿದ್ದು ಎಲ್ಲಿಯವರೆಗೂ ಯಾವುದೇ ಕೆಲಸವನ್ನು ಕೊಡಿಸದೆ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ನಿಮ್ಮ ಹೆಸರು ಬರುತ್ತದೆ ಅಂತಿಮ ಪಟ್ಟಿಯಲ್ಲಿ ನಿಮ್ಮ ಹೆಸರು ಬರುತ್ತದೆ ಎಂದು ಸುಳ್ಳು ಹೇಳಿ ಸತಾಯಿಸುತ್ತಿರುವುದಾಗಿ ದೂರಿನಲ್ಲಿ ಉಲ್ಲೇಖವಾಗಿದೆ
ಆರೋಪಿಗಳು ಪ್ರತಿ ಬಾರಿಯೂ ಸಂತ್ರಸ್ತರನ್ನು ಸಂಪರ್ಕಿಸುವಾಗ ಬೇರೆ ಬೇರೆ ಮೊಬೈಲ್ ನಂಬರ್ಗಳಿಂದ ಕರೆ ಮಾಡುತ್ತಿದ್ದು ಸುಮಾರು 34 ಮೊಬೈಲ್ ನಂಬರ್ ಗಳಿಂದ ಕರೆ ಮಾಡಿರುತ್ತಾರೆ ಅವುಗಳೆಲ್ಲವೂ ಕಾಲ್ ರೆಕಾರ್ಡಿಂಗ್ ಆಗಿರುವುದಾಗಿ ಸಂತ್ರಸ್ತರು ದೂರಿನಲ್ಲಿ ಆಗ್ರಹಿಸಿದ್ದಾರೆ.
ಮಂಜುನಾಥ್ ನಾಯಕರಿಗೆ ಪರಿಚಿತರಾದ ರಾಘವೇಂದ್ರ ಹಾಗೂ ಅವರ ಪರಿಚಯಸ್ತರಿಗೆ ಕೆಲಸ ಕೊಡಿಸುವುದಾಗಿ ನಂಬಿಸಿ ಅವರಿಂದ ಹಣ ಪಡೆದು ಕೆಲಸವನ್ನು ಕೊಡಿಸದೆ ಹಣವನ್ನು ವಾಪಸ್ ನೀಡದೆ ತಲೆಮರೆಸಿಕೊಂಡು ಓಡಾಡುತ್ತಿರುವ ಮಂಜುನಾಥ್ ನಾಯಕ್ ಅವಗುವವರ ಪತ್ನಿ ವೃದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ರಾಘವೇಂದ್ರ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
Fraud by promising a government job
