ಭದ್ರಾವತಿಯ ಬಿಇಒ ಲೋಕಾಯುಕ್ತ ಬಲೆಗೆ- Bhadravati's BEO caught in Lokayukta trap

SUDDILIVE || BHADRAVATHI

ಭದ್ರಾವತಿಯ ಬಿಇಒ ಲೋಕಾಯುಕ್ತ ಬಲೆಗೆ- Bhadravati's BEO caught in Lokayukta trap    

Lokayukta, trap


ಭದ್ರಾವತಿಯ ಬಿಇಒ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಬಿಇಒ ನಾಗೇಂದ್ರಪ್ಪ ಶಿಕ್ಷಕರ ಭತ್ಯೆ ಭಡ್ತಿ ನೀಡಲು ಲಂಚ ಪಡೆಯುವಾಗ ಲೋಕಾಯುಕ್ತರ ದಾಳಿ ನಡೆದಿದೆ. ದಾಳಿಯಲ್ಲಿ ನಾಗೇಂದ್ರಪ್ಪ ಹಾಗೂ ಮದ್ಯವರ್ತಿಯನ್ನ ಬಂಧಿಸಲಾಗಿದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪನವರ ಹುಟ್ಟುಹಬ್ಬದ ದಿನವೇ ಅವರ ತವರು ಜಿಲ್ಲೆಯಲ್ಲಿ ಭ್ರಷ್ಠರ ಬೇಟೆ ಅಚ್ಚರಿ ಮೂಡಿಸಿದೆ. 

ಭದ್ರಾವತಿಯ ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಂದ್ರವರು ಶಿಕ್ಷಕರ ಸರ್ಕಾರಿ ಸವಲತ್ತು ನೀಡಲು 4 ಲಕ್ಷ ರೂ. ಹಣದ ಬೇಡಿಕೆಯಿಟ್ಟಿದ್ದರು.  ಲಿಂಗರಾಜು ಎಂಬ ಶಿಕ್ಷಕರವರು ಭದ್ರಾವತಿ ತಾಲ್ಲೂಕು ಬಿ.ಇ.ಓ ಕಛೇರಿಯಲ್ಲಿ ಕಛೇರಿ ಅಧೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು,  2011 ನೇ ಸಾಲಿನಿಂದ 2023 ನೇ ಸಾಲಿನ ಅವಧಿಯಲ್ಲಿ ತಮ್ಮ ಇಲಾಖೆಯಿಂದ ಬರಬೇಕಾದ ವಾರ್ಷಿಕ ವೇತನ ಬಡ್ತಿಗಳು ಮತ್ತು ಇತರೆ ಭತ್ಯೆಗಳು ಸೇರಿ ಎಲ್ಲಾ ಆರ್ಥಿಕ ಸೌಲಭ್ಯಗಳನ್ನು ನೀಡುವಂತೆ ಹಲವು ಬಾರಿ ಭದ್ರಾವತಿ ತಾಲ್ಲೂಕ್ ಬಿ.ಇ.ಓ ರವರಿಗೆ ಶಿಮೊಗ್ಗ ಡಿ.ಡಿ.ಪಿ.ಐ ರವರಿಗೆ ಹಾಗೂ ಮೇಲಾಧಿಕರಿಗಳಿಗೆ ಮನವಿ ಸಲ್ಲಿಸಿದ್ದರು. 

ಭದ್ರಾವತಿ ತಾಲ್ಲೂಕ್ ಕ್ಷೇತ್ರ ಶಿಕ್ಷಣಾಧಿಕಾರಿಯಾದ (ಬಿ.ಇ.ಓ) ನಾಗೇಂದ್ರಪ್ಪ.ಎ.ಕೆ ಮತ್ತು ಅವರ ಮಧ್ಯವರ್ತಿ (ಖಾಸಗಿ ವ್ಯಕ್ತಿ) ಮಂಜುನಾಥ ಇವರಿಬ್ಬರು ಸೇರಿಕೊಂಡು ಬಿ.ಇ.ಓ ಕಛೇರಿಯಲ್ಲಿ ಲಿಂಗರಾಜು ಅವರಿಗೆ ಬರಬೇಕಾದ ವಾರ್ಷಿಕ ಬಡ್ತಿ ಮತ್ತು ಇತರೆ ಭತ್ಯೆಗಳನ್ನು ಮಾಡಿಕೊಡಲು 04 ಲಕ್ಷ ರೂ ಲಂಚದ ಹಣಕ್ಕೆ ಬೇಡಿಕೆ ಇಟ್ಟಿರುತ್ತಾರೆ. ಈ ಬಗ್ಗೆ  ದಿನಾಂಕ:02-03-2026 ರಂದು ನೀಡಿದ ದೂರಿನ ಮೇರೆಗೆ ಕಲಂ:7(a) ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ-1988. (ತಿದ್ದುಪಡಿ ಕಾಯಿದೆ-2018) ರೀತ್ಯಾ ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. 

ಇಂದು ಸಂಜೆ 07:00 ಭದ್ರಾವತಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯ ಬಿ.ಇ.ಓ ರವರ ಕೊಠಡಿಯಲ್ಲಿ, ಬಿ.ಇ.ಓ ಶ್ರೀ.ನಾಗೇಂದ್ರದಪ್ಪ.ಎ.ಕೆ ಮತ್ತು ಮಧ್ಯವರ್ತಿ (ಖಾಸಗಿ ವ್ಯಕ್ತಿ) ಮಂಜುನಾಥ ರವರು ಲಿಂಗರಾಜು ಅವರಿಙದ 1,00,000/-ರೂ ಲಂಚದ ಹಣವನ್ನು ಪಡೆದುಕೊಂಡ ಸಮಯದಲ್ಲಿ ಟ್ರ್ಯಾಪ್ ಮಾಡಲಾಗಿರುತ್ತದೆ ಮತ್ತು ಲಂಚದ ಹಣವನ್ನು ಜಪ್ತಿಪಡಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಅಪಾದಿತ ಅಧಿಕಾರಿ ನಾಗೇಂದ್ರದಪ್ಪ.ಎ.ಕೆ ಮತ್ತು ಅವರ ಮಧ್ಯವರ್ತಿ (ಖಾಸಗಿ ವ್ಯಕ್ತಿ) ಮಂಜುನಾಥ ರವರುಗಳನ್ನು ತನಿಖೆ ಸಂಬಂಧ ವಶಕ್ಕೆ ಪಡೆಯಲಾಗಿದೆ.  

ಪ್ರಕರಣದ ತನಿಖೆಯನ್ನು ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್‌ರಾದ ಶ್ರೀ.ವೀರಬಸಪ್ಪ ಎಲ್ ಕುಸಲಾಪುರ ರವರು ಕೈಗೊಂಡಿರುತ್ತಾರೆ. ಟ್ರ್ಯಾಪ್ ಕಾರ್ಯಾಚರಣೆಯನ್ನು ಶ್ರೀ.ಎಮ್.ಎಸ್.ಕೌಲಾಪೂರೆ. ಪೊಲೀಸ್ ಅಧೀಕ್ಷಕರು, ಕರ್ನಾಟಕ ಲೋಕಾಯುಕ್ತ, ಶಿವಮೊಗ್ಗ ರವರ ಮಾರ್ಗದರ್ಶನದಲ್ಲಿ ಶ್ರೀ.ಬಿ.ಪಿ. ಚಂದ್ರಶೇಖರ್, ಪೊಲೀಸ್ ಉಪಾಧೀಕ್ಷಕರು, ರವರ ನೇತೃತ್ವದಲ್ಲಿ ಪೊಲೀಸ್ ಇನ್ಸ್‌ಪೆಕ್ಟರಾದ ಶ್ರೀ.ಗುರುರಾಜ್.ಎನ್ ಮೈಲಾರ ಸಿಬ್ಬಂದಿಯವರಾದ ಶ್ರೀ.ಯೋಗೇಶ್.ಜಿ.ಸಿ, ಸಿ.ಹೆಚ್.ಸಿ. 

ಶ್ರೀ.ಮಂಜುನಾಥ.ಎಂ. ಸಿ.ಹೆಚ್.ಸಿ, ಶ್ರೀ. ಟೀಕಪ್ಪ ಸಿಹೆಚ್‌ಸಿ ಶ್ರೀ.ಸುರೇಂದ್ರ ಹೆಚ್.ಜಿ. ಸಿಹೆಚ್‌ಸಿ, ಶ್ರೀ ಪ್ರಶಾಂತ್ ಕುಮಾರ್ ಹೆಚ್. ಸಿ.ಪಿ.ಸಿ, ಶ್ರೀ ಚನ್ನೇಶ.ಸಿ.ಪಿ.ಸಿ, ಶ್ರೀ.ಅರುಣ್ ಕುಮಾರ್.ಯು.ಬಿ.ಸಿ.ಪಿ.ಸಿ, ಶ್ರೀ.ದೇವರಾಜ್.ವಿ. ಸಿಪಿಸಿ, ಶ್ರೀ.ಪ್ರಕಾಶ್ ಬಾರಿಮರದ. ಸಿಪಿಸಿ, ಶ್ರೀ.ಆದರ್ಶ್ ಸಿ.ಪಿ.ಸಿ, ಶ್ರೀಮತಿ ಚಂದ್ರಿಬಾಯಿ.ಎಸ್. ಮ.ಪಿ.ಸಿ ಶ್ರೀ.ಪ್ರದೀಪ. ಎ.ಹೆಚ್.ಸಿ. ಶ್ರೀ.ಚೇತನ್.ಎ.ಪಿ.ಸಿ, ಶ್ರೀ.ತರುಣ್ ಕುಮಾರ್ ಎ.ಪಿ.ಸಿ. ಶ್ರೀ.ಆಂಜನೇಯ.ಡಿ.ಹೆಚ್. ಎ.ಪಿ.ಸಿ ಶ್ರೀ ಆನಂದ. ಎ.ಪಿ.ಸಿ. ಶ್ರೀ ಗೋಪಿ ಎ.ಪಿ.ಸಿ ರವರು ಹಾಜರಿರುತ್ತಾರೆ.

Bhadravati's BEO caught in Lokayukta trap

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close