SUDDILIVE || SHIVAMOGGA
ದೇವಸ್ಥಾನಗಳ ಬಾಗಿಲು ಬಂದ್-The temple door is closed
ವರ್ಷದ ಮೊದಲ ಕೇತುಗ್ರಸ್ಥ ಚಂದ್ರಗ್ರಹಣ ಹಿನ್ನೆಲೆಯಲ್ಲಿ ಜಿಲ್ಲೆಯ ಬಹುತೇಕ ದೇಗುಲಗಳ ದರ್ಶನ ಸಮಯ ಬದಲಾಗಿದೆ. ನಾಡಿನ ಶಕ್ತಿದೇವತೆ ಸಿಗಂದೂರು ಚೌಡೇಶ್ವರಿ ದೇವಿಯ ದರ್ಶನ ಸಮಯ ಬದಲಿಸಲಾಗಿದೆ.
ಇಂದು ಮಧ್ಯಾಹ್ನ 2.30ರ ವರೆಗೆ ಮಾತ್ರ ಸಿಗಂದೂರು ದೇವಿ ದರ್ಶನ- ಪೂಜೆಗೆ ಅವಕಾಶ ಕಲ್ಪಿಸಲಾಗಿದೆ. ಗ್ರಹಣದ ಅವಧಿಯಲ್ಲಿ ದೇವಾಲಯ ಸಂಪೂರ್ಣ ಕ್ಲೋಸ್- ದರ್ಶನಕ್ಕೂ ಇಲ್ಲ ಅವಕಾಶ. ಮಧ್ಯಾಹ್ನ 2.30 ರಿಂದ ಸಂಜೆ 7.30 ರವರೆಗೆ ದೇವಾಲಯ ಕ್ಲೋಸ್ ಆಗಲಿದೆ.
ಗ್ರಹಣ ಮೋಕ್ಷದ ಬಳಿಕ ಸಂಜೆ 7.30 ರಿಂದ 9 ಗಂಟೆ ವರೆಗೆ ದರ್ಶನ-ಪೂಜೆಗೆ ಅವಕಾಶ. ಗ್ರಹಣ ಹಿನ್ನೆಲೆ ದೇವಾಲಯದಲ್ಲಿ ನಿತ್ಯ ನೀಡುವ ರಾತ್ರಿ ಊಟ ಸಹ ಕ್ಲೋಸ್ ಆಗಲಿದೆ. ಗ್ರಹಣ ಮೋಕ್ಷ ನಂತರ ಬರುವ ಭಕ್ತರಿಗೆ ಅವಲಕ್ಕಿ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಸಿಗಂದೂರು ದೇವಾಲಯ ಸಮಿತಿ ಮಾಹಿತಿ ನೀಡಿದೆ.
ಅದರಂತೆ ಶಿವಮೊಗ್ಗದ ಕೋಟೆ ಆಂಜನೇಯ ಸ್ವಾಮಿ ದೇವಾಲಯ, ಭೀಮೇಶ್ವರ ದೇವಾಲಯದಲ್ಲೂ ಮಧ್ಯಾಹ್ನದ ನಂತರ ದೇವರ ದರ್ಶನ ಬಂದ್ ಮಾಡಲಾಗಿದೆ.
The temple door is closed
