SUDDILIVE || SHIVAMOGGA||BHADRAVATHI
ಸಿಡಿಲು ಹೊಡೆದು ಚಿಕನ್ ಅಂಗಡಿ ಮಾಲೀಕ ಸಾವು-Chicken shop owner dies after being struck by lightning
ಸಿಡಿಲಿಗೆ ಚಿಕನ್ ಅಂಗಡಿಯ ಮಾಲೀಕ ಬಲಿಯಾಗಿದ್ದಾನೆ. ಇಂದು ಸಂಜೆ ಐದು ಗಂಟೆಯ ವೇಳೆಗೆ ಸುರಿದ ಸಿಡಿಲು, ಗುಡುಗು ಮಳೆಗೆ ರೈತ ಬಲಿಯಾಗಿದ್ದಾನೆ.
ಶೇಕ್ ಮುಜೀಬ್ ಎಂಬ 45 ವರ್ಷದ ವ್ಯಕ್ತಿ ಶಿವಮೊಗ್ಗದ ರಾಮನಗರದಲ್ಲಿ ಚಿಕನ್ ಅಂಗಡಿಯಲ್ಲಿದ್ದಾಗ ಸಿಡಿಲು ಬಡಿದಿದೆ. ಸಿಡಿಲು ಬಡಿದ ಹೊಡೆತಕ್ಕೆ ಚಿಕನ್ ಅಂಗಡಿ ಮಾಲೀಕ ಸ್ಥಳದಲ್ಲಿಯೇ ಸಾವು ಕಂಡಿದ್ದಾನೆ.
ತಾಲೂಕಿನಲ್ಲಿ ಈ ವರ್ಷದ ಪ್ರಥಮ ಪ್ರಕೃತಿ ವಿಕೋಪಕ್ಕೆ ಬಲಿಯಾದ ಮೊದಲ ವ್ಯಕ್ತಿ ಇವರಾಗಿದ್ದಾರೆ. ಕುಂಸಿ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಶೇಕ್ ಮುಜೀಬ್ ಹಾರನಹಳ್ಳಿ ನಿವಾಸಿಯಾಗಿದ್ದು, ರಾಮನಗರದಲ್ಲಿ ಚಿಕನ್ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದರು.
ಇವು ಪ್ರಾಥಮಿಕ ಮಾಹಿತಿ ಇದ್ದು ಇವರ ಚಿಕನ್ ಅಂಗಡಿ ಏನಾಗಿದೆ ಮತ್ತಿತರ ವಿಷಯಗಳ ಬಗ್ಗೆ ಹೆಚ್ಚಿನಮಾಹಿತಿ ತಿಳಿದು ಬರಬೇಕಿದೆ. ಅದರಂತೆ ಶಿವಮೊಗ್ಗದ ವಿನೋಬ ನಗರದ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿಯಿದ್ದ ತೆಂಗಿನ ಮರಕ್ಕೆ ಸಿಡಿಲು ಬಡಿದು ಬೆಂಕಿ ಹತ್ತಿಕೊಂಡಿದೆ.
ಅದರಂತೆ ಭದ್ರಾವತಿಯಲ್ಲಿಯೂ ಸಿಡಿಲು ಬಡಿದು ದಂಪತಿಗಳು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನ ಭದ್ರಾವತಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಂಗೀತ ಮತ್ತು ಜಾನ್ ಎಂಬುವರು ಆಸ್ಪತ್ರೆಗೆ ದಾಖಲಿಸಲಾಗಿದೆ.
Chicken shop owner dies after being struck by lightning


