ಬೆಂಕಿಯಲ್ಲಿ ಕರಕಲಾದ ಉಪನ್ಯಾಸಕರ ಎಫ್ಐಆರ್ ನಲ್ಲಿ ಏನಿದೆ? What is in the FIR of the lecturer who died in the fire?

 SUDDILIVE || HOLEHONNURU

ಬೆಂಕಿಯಲ್ಲಿ ಕರಕಲಾದ ಉಪನ್ಯಾಸಕರ ಎಫ್ಐಆರ್ ನಲ್ಲಿ ಏನಿದೆ?  What is in the FIR of the lecturer who died in the fire?   

Fir, lecturer



ನೆನ್ನೆ ಉಪನ್ಯಾಸಕ ರೊಬ್ಬರು ಸುಟ್ಟು ಕರಕಲಾದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದ ಬೆನ್ನಲ್ಲೇ ಹೊಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎಫ್ಐಆರ್ ದಾಖಲಾಗಿದೆ. ಪತ್ನಿಯ ಹೇಳಿಕೆ ಆಧಾರದ ಮೇಲೆ ಉಪನ್ಯಾಸಕ ಸುರೇಶ್ ಅವರನ್ನು ಅಪರಿಚಿತರರಿಂದ ಕೊಲೆಯಾಗಿರುವ ಶಂಕೆಯಲ್ಲಿ ದೂರು ದಾಖಲಾಗಿದೆ

ಗಂಡನಿಗೆ ಯಾರು ಆಗದವರು ಬೆಂಕಿ ಹಚ್ಚಿ ಸಾಯಿಸಿದ್ದಾರೆ ಎಂದು ಎಫ್ಐಆರ್ ನಲ್ಲಿ ಉಲ್ಲೇಖವಾಗಿದೆ. ಮಾರ್ಚ್ 28 ನೇ ತಾರೀಕು ಉಪನ್ಯಾಸಕ ಸುರೇಶ್ ಪತ್ನಿ ನಾಗರತ್ನಮ್ಮ ಅವರ ತಾಯಿ ಬಳಿ ತನಗೆ ತುಮಕೂರಿನಲ್ಲಿ ಕಾರ್ಯಕ್ರಮವಿದ್ದು ಅಲ್ಲಿ ಭಾಗಿಯಾಗುತ್ತಿರುವುದಾಗಿ ತಿಳಿಸಿ ಭದ್ರಾವತಿಯಲ್ಲಿ ಮೂರು ಜನರೊಂದಿಗೆ ಕಾರ್ಯಕ್ರಮಕ್ಕೆ ಹೋಗುವುದಾಗಿ ಹೇಳಿದ್ದರು ಎಂದು ಸಹ ದೂರಿನಲ್ಲಿ ಉಲ್ಲೇಖಿಸಲಾಗಿದೆ.

 ಮನೆಯಲ್ಲಿ ಹಾಗೂ ಸ್ನೇಹ ಬಳಗದಲ್ಲಿ ಸುರೇಶ್ ಸ್ನೇಹದಿಂದಿದ್ದರೂ ಸಹ ಕಡಿಮೆ ಮಾತನಾಡುವರಾಗಿದ್ದರು. ಕಳೆದ ಎರಡು ವರ್ಷಗಳ ಹಿಂದೆ ಅಕ್ಕ ಕಮಲಮ್ಮ ರವರು ಅನಾರೋಗ್ಯದಿಂದ ತೀರಿಕೊಂಡಿದ್ದರು ಇದೇ ಸಮಯದಲ್ಲಿ ಹೊಳೆಹೊನ್ನೂರಿನ ಹನುಮಂತಪುರದಲ್ಲಿದ್ದ ಸ್ನೇಹಿತ ಹಾಲೇಶ್ ಎಂಬುವರು ಸಹ ಅನಾರೋಗ್ಯದಿಂದ ತೀರಿಕೊಂಡ ನಂತರ ಸುರೇಶ್ ಮಾನಸಿಕವಾಗಿ ಕೂಗ್ಗಿ ಹೋಗಿದ್ದರು ಎಂದು ಅವರ ಪತ್ನಿ ನೀಡಿರುವ ದೂರಿನಲ್ಲಿ ಉಲ್ಲೇಖವಾಗಿದೆ.

ಪತ್ನಿ ನಾಗರತ್ನಮ್ಮ ಮಾರ್ಚ್ 28ರಂದು ಮನೆ ಕೆಲಸ ಮುಗಿಸಿಕೊಂಡು ಬೆಳಿಗ್ಗೆ 9:15ಕ್ಕೆ ಕೆಲಸಕ್ಕೆ ತೆರಳಿದಾಗ ಮನೆಯಲ್ಲೇ ಇದ್ದ ಪತಿ ಸುರೇಶ್ ರಾತ್ರಿ 8:30 ರಲ್ಲಿ ಮನೆಗೆ ವಾಪಸ್ ಆದಾಗ ಇರಲಿಲ್ಲ. ಪತಿ ಇಲ್ಲದ ಬಗ್ಗೆ ತಾಯಿಯನ್ನು ವಿಚಾರಿಸಿದ ನಾಗರತ್ನಮ್ಮ ಅವರಿಗೆ ತಾಯಿ ತುಮಕೂರಿನಲ್ಲಿ ಕಾರ್ಯಕ್ರಮವಿದೆ ಅಲ್ಲಿಗೆ ಹೋಗುತ್ತಿರುವುದಾಗಿ ತಿಳಿಸಿ ಹೋಗಿದ್ದಾರೆ ಎಂದಿದ್ದಾರೆ. 

ಹೋಗುವಾಗ ಭದ್ರಾವತಿಯಲ್ಲಿ ಮೂವರೊಂದಿಗೆ ಹೋಗುವುದಾಗಿ ಹೇಳಿ ಬೈಕ್ ನಲ್ಲಿ ಹೋಗಿದ್ದರು ಮರುದಿನ ಬೆಳಿಗ್ಗೆ ಪತಿಯ ಅಣ್ಣನ ಮಗನಾದ ಮಧು ಕರೆ ಮಾಡಿ ನಿಮ್ಮ ತೋಟದಲ್ಲಿ ಚಿಕ್ಕಪ್ಪ ನವರಿಗೆ ಬೆಂಕಿ ಹಚ್ಚಲಾಗಿದೆ ತಾವು ಬನ್ನಿ ಎಂದು ಕರೆ ಮಾಡಿದ್ದರು ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಬಾ ನಾನು ಬರುತ್ತೇನೆ ಎಂದು ನಾಗರತ್ನಮ್ಮ ತಿಳಿಸಿದ್ದರೂ ಅವರನ್ನು ಆಸ್ಪತ್ರೆಗೆ ಕರೆತರುವ ಸ್ಥಿತಿಯಲ್ಲಿ ಇಲ್ಲ ಎಂದು ಮಧು ಅವರು ಉತ್ತರಿಸಿದ್ದರೂ ತೋಟಕ್ಕೆ ಹೋದಾಗ ಪತಿಯವರು ಬೆಂಕಿಯಲ್ಲಿ ಉರಿಯುತ್ತಿದ್ದರು ಅವರ ಜೊತೆ ಕೆ 14 ಕೆ 1329 ನಂಬರ್ ನ ಬೈಕ್ ಸಹ ಅಲ್ಲೇ ಇದ್ದಿತ್ತು. 

ಇದರಿಂದ ಪತಿಯನ್ನು ಯಾರೊ ಕೊಂದು ಹಾಕಿರುವ ಶಂಕೆಯಲ್ಲಿ ಈ ಘಟನೆ ಹೊಳೆಹೊನ್ನೂರಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 

What is in the FIR of the lecturer who died in the fire?  

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close